For Quick Alerts
  ALLOW NOTIFICATIONS  
  For Daily Alerts

  ಚೌಡೇಶ್ವರಿ ದೇವಿಯಾಗಿ ಖ್ಯಾತ ತಾರೆ ರೋಜಾ ಪ್ರತ್ಯಕ್ಷ

  By Rajendra
  |

  ಇದುವರೆಗೂ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಪೋಷಿಸಿರುವ ತಾರೆ ರೋಜಾ. ಈಗ ಮತ್ತೊಂದು ವಿಭಿನ್ನ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರು 'ಚೌಡೇಶ್ವರಿ ದೇವಿ'ಯಾಗಿ ಪ್ರತ್ಯಕ್ಷವಾಗುತ್ತಿದ್ದಾರೆ.

  ಚಿತ್ರ ನಿರ್ಮಾಪಕ ಸೆಲ್ವರಾಜ್ ಅವರನ್ನು ಕೈಹಿಡಿದ ಬಳಿಕ ರೋಜಾ ತೆರೆಗೆ ಮರೆಗೆ ಸರಿದಿದ್ದರು. ಆಗಾಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡದ್ದುಂಟು. ಅವೆಲ್ಲವೂ ವಯಸ್ಸಾದ ತಾಯಿಯ ಪಾತ್ರಗಳಲ್ಲದಿದ್ದರೂ ಯುವ ವಯಸ್ಸಿನ ತಾಯಿ ಪಾತ್ರಗಳು.

  ಕನ್ನಡದ ಮೌರ್ಯ, ನಲಿ ನಲಿಯುತಾ, ಪರ್ವ ಮುಂತಾದ ಚಿತ್ರದಲ್ಲಿ ರೋಜಾ ಅಭಿನಯಿಸಿರುವುದು ಗೊತ್ತೇ ಇದೆ. ಈಗ ಚೌಡೇಶ್ವರಿ ದೇವಿಯಾಗಿ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತಾರೋ ನೋಡಬೇಕು. ಅಂದಹಾಗೆ 'ಚೌಡೇಶ್ವರಿ ದೇವಿ ಮಹಿಮೆ' ಚಿತ್ರ ಇದೇ ನವೆಂಬರ್ 30ರಂದು ತೆರೆಕಾಣುತ್ತಿದೆ.

  ಈ ಚಿತ್ರವನ್ನು ಚೌಡೇಶ್ವರಿ ದೇವಿ ಆರಾಧಕರಾದ ಮ.ರಾಮಣ್ಣ ಎಂಬುವವರು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನದ ಸಹ ಅವರದೆ. ಚಿತ್ರದ ಪಾತ್ರವರ್ಗದಲ್ಲಿ ಭವ್ಯಶ್ರೀ ರೈ, ಶೋಭಾರಾಜ್, ರೇಖಾ, ಗಿರೀಷ್ ಕುಮಾರ್, ನವ್ಯಾ, ಮುನಿ ಮುಂತಾದವರು ಅಭಿನಯಿಸಿದ್ದಾರೆ.

  ದೇವಿಯ ಮಹಿಮೆ ಸಾರುವ ಜೊತೆಗೆ ಚಿತ್ರದಲ್ಲಿ ದುಷ್ಟ ಸಂಹಾರ ಶಿಷ್ಟ ರಕ್ಷಣೆ ಪ್ರಮುಖ ಅಂಶ. ಪಾತ್ರವರ್ಗದಲ್ಲಿ ಭವ್ಯಶ್ರೀ ರೈ,ರಮೇಶ್ ಪಂಡಿತ್, ರೇಖಾದಾಸ್ ಸೇರಿದಂತೆ ಸುಮಾರು 78 ಕಲಾವಿದರ ಬೃಹತ್ ತಾರಾಗಣವಿದೆ. ಗಿರೀಶ್ ಕುಮಾರ್ ಹಾಗೂ ನವ್ಯಾ ನಾಯಕ ನಾಯಕಿಯರು.

  ಒಟ್ಟು 21 ಹಾಡುಗಳಿರುವ ಚಿತ್ರದಲ್ಲಿ ನಾಲ್ಕು ಕಂದಪದ್ಯಗಳಿವೆ. ಭಕ್ತಿಗೀತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ 'ಚೌಡೇಶ್ವರಿ ದೇವಿ ಮಹಿಮೆ' ಚಿತ್ರದ ಬಗ್ಗೆ ಆಕೆಯ ಭಕ್ತಾದಿಗಳು ಕುತೂಹಲದಿಂದ ನಿರೀಕ್ಷಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  Read more about: ರೋಜಾ roja
  English summary
  Well Known actress Roja lead Kannada devotional film Sri Chowdeshwari Devi Mahime slated for release on 30th November. Ramanna a multi talented personality has written the story, screenplay, dialogue and directed the film and sung a few songs for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X