India
  For Quick Alerts
  ALLOW NOTIFICATIONS  
  For Daily Alerts

  'ಚಾರ್ಲಿ'ಯ ಮುದ್ದಾಡಲು ಬಂದ ನಟಿ ಸಾಯಿ ಪಲ್ಲವಿ

  |

  '777 ಚಾರ್ಲಿ' ಸಿನಿಮಾ ಬಿಡುಗಡೆಗೆ ಮುನ್ನವೇ ತಣ್ಣನೆಯ 'ಹವಾ' ಎಬ್ಬಿಸಿದೆ. ಸಿನಿಮಾದ ಪ್ರೀಮಿಯರ್ ಶೋಗಳು ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಆಯೋಜಿಸಲಾಗಿದ್ದು, ಪ್ರೇಕ್ಷಕರು ಮಾತ್ರವೇ ಅಲ್ಲದೆ ವಿವಿಧ ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

  ಹೀಗೆ '777 ಚಾರ್ಲಿ' ಸಿನಿಮಾ ನೋಡಿ ಮೆಚ್ಚಿಕೊಂಡವರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದು, ಸಿನಿಮಾವನ್ನು ಅದೆಷ್ಟು ಮೆಚ್ಚಿಕೊಂಡಿದ್ದಾರೆಂದರೆ, '777 ಚಾರ್ಲಿ' ಸಿನಿಮಾದಲ್ಲಿರುವ ನಾಯಿಯನ್ನು ಮುದ್ದಿಸಲು ಬೆಂಗಳೂರಿಗೆ ಬಂದಿದ್ದಾರೆ!

  '777 ಚಾರ್ಲಿ' ಸಿನಿಮಾದಲ್ಲಿ ನಟಿಸಿರುವ ನಾಯಿ ಈಗ ಎಲ್ಲಿದೆ?'777 ಚಾರ್ಲಿ' ಸಿನಿಮಾದಲ್ಲಿ ನಟಿಸಿರುವ ನಾಯಿ ಈಗ ಎಲ್ಲಿದೆ?

  ನಟಿ ಸಾಯಿ ಪಲ್ಲವಿ, ನಾಯಿ ಚಾರ್ಲಿಯನ್ನು ಮುದ್ದಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಹಾ ಪ್ರೊಡಕ್ಷನ್‌ ಹೌಸ್‌ನ ಫೇಸ್‌ಬುಕ್ ಖಾತೆಯಿಂದ ಸುಂದರ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಚಾರ್ಲಿ ಮುದ್ದಾಗಿ ಸಾಯಿ ಪಲ್ಲವಿ ತೊಡೆಯ ಮೇಲೆ ಮಲಗಿರುವ ಚಿತ್ರ ಗಮನ ಸೆಳೆಯುತ್ತಿದೆ.

  ಚಿತ್ರ ಹಂಚಿಕೊಂಡಿರುವ ಪರಂವಹಾ ಸ್ಟುಡಿಯೋಸ್

  ಚಿತ್ರ ಹಂಚಿಕೊಂಡಿರುವ ಪರಂವಹಾ ಸ್ಟುಡಿಯೋಸ್

  ಚಿತ್ರ ಹಂಚಿಕೊಂಡಿರುವ ಪರಂವಹಾ ಸ್ಟುಡಿಯೋಸ್, ''ನಮ್ಮ ಚಾರ್ಲಿಯನ್ನು ನೋಡಲು ಯಾರು ಬಂದಿದ್ದಾರೆ ನೋಡಿ'' ಎಂದು ಬರೆಯಲಾಗಿದೆ. ಸಾಯಿ ಪಲ್ಲವಿ ನಾಯಿ ಚಾರ್ಲಿಯನ್ನು ಮುದ್ದಿಸುತ್ತಿರುವ ಎರಡು ಸುಂದರ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಸರಳವಾದ ಉಡುಗೆ ತೊಟ್ಟು ಸುಂದರವಾಗಿ ಕಾಣುತ್ತಿದ್ದಾರೆ ಸಾಯಿ ಪಲ್ಲವಿ.

  ಟ್ರೇಲರ್ ಮೆಚ್ಚಿಕೊಂಡಿರುವ ಸಾಯಿ ಪಲ್ಲವಿ

  ಟ್ರೇಲರ್ ಮೆಚ್ಚಿಕೊಂಡಿರುವ ಸಾಯಿ ಪಲ್ಲವಿ

  '777 ಚಾರ್ಲಿ' ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗಲೂ ಆ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಸಾಯಿ ಪಲ್ಲವಿ, ''ಹೃದಯವನ್ನು ಬೆಚ್ಚಗೆ ಮಾಡುವಂತಿದೆ. ನಿರ್ದೇಶಕ ಕಿರಣ್‌ ರಾಜ್ ಹಾಗೂ ರಕ್ಷಿತ್ ಶೆಟ್ಟಿಗೆ ನನ್ನ ಶುಭಾಶಯಗಳು. ಮತ್ತು ವಿಶೇಷವಾಗಿ ನನ್ನ ಹೃದಯದ ತಂತಿ ಮೀಟಿದ ಚಾರ್ಲಿಗೆ ಶುಭವಾಗಲಿ. ಈ ಸಿನಿಮಾ ನೋಡುವಾಗ ಪ್ರಾಣಿ ಪ್ರಿಯರಿಗೆ ಕಣ್ಣೀರು ಒರೆಸಿಕೊಳ್ಳಲು ಟಿಶ್ಯೂ ಪೇಪರ್ ಬೇಕಾಗಬಹುದು ಎಂದಿದ್ದರು.

  ಪ್ರಾಣಿ ಪ್ರೇಮಿ ಸಾಯಿ ಪಲ್ಲವಿ

  ಪ್ರಾಣಿ ಪ್ರೇಮಿ ಸಾಯಿ ಪಲ್ಲವಿ

  ನಟಿ ಸಾಯಿ ಪಲ್ಲವಿ ಸ್ವತಃ ಪ್ರಾಣಿ ಪ್ರೇಮಿ. ಅವರ ಬಳಿ ಹಲವು ಪ್ರಾಣಿಗಳಿವೆ. ನಾಯಿ, ಬೆಕ್ಕುಗಳು ಮಾತ್ರವೇ ಅಲ್ಲದೆ ಮೊಲಗಳನ್ನು ಸಹ ಸಾಯಿ ಪಲ್ಲವಿ ಸಾಕಿದ್ದಾರೆ. ಆಗಾಗ್ಗೆ ಅವುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಸಾಯಿ ಪಲ್ಲವಿ. ಸ್ವತಃ ವೈದ್ಯೆಯಾಗಿರುವ ಸಾಯಿ ಪಲ್ಲವಿ ಜೀವಗಳ ಬಗ್ಗೆ ಹೆಚ್ಚು ಕಳಜಿ ಉಳ್ಳವರಾಗಿದ್ದಾರೆ.

  ಕನ್ನಡದಲ್ಲಿ ಡಬ್ ಮಾಡಿರುವ ಸಾಯಿ ಪಲ್ಲವಿ

  ಕನ್ನಡದಲ್ಲಿ ಡಬ್ ಮಾಡಿರುವ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೊಸ ಸಿನಿಮಾ 'ಗಾರ್ಗಿ' ಕನ್ನಡದಲ್ಲೂ ಬಿಡುಗಡೆ ಆಗುತ್ತಿದ್ದು, ಸಾಯಿ ಪಲ್ಲವಿಯವರೇ ಕನ್ನಡದಲ್ಲೂ ಡಬ್ ಮಾಡಿದ್ದಾರೆ. ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟಿರುವುದು ನಿರ್ದೇಶಕಿ, ನಟಿ ಶೀಥಲ್ ಶೆಟ್ಟಿ. ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಅದರ ಬಳಿಕ ಕಮಲ್ ಹಾಸನ್ ನಿರ್ಮಾಣದ ಹೊಸ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಮಂಸೋರೆ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ಇದೆ. ಧನುಶ್‌ರ ಮೊದಲ ತೆಲುಗು ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  Actress Sai Pallavi's pics with dog Charlie of 777 Charlie movie went viral. Paramvah studios shared pics of Sai Pallavi with dog Charlie on social media.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X