For Quick Alerts
  ALLOW NOTIFICATIONS  
  For Daily Alerts

  ಮಾಜಿ ನಕ್ಸಲ್ ಲೀಡರ್ ಬಳಿ ನಟಿ ಸಾಯಿ ಪಲ್ಲವಿ ಟ್ರೈನಿಂಗ್

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಪ್ರೇಮಂ, ಫಿದಾ ಚಿತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸಾಯಿ ಪಲ್ಲವಿ ಈಗ ಮಾಜಿ ನಕ್ಸಲ್ ಲೀಡರ್ ಬಳಿ ಟ್ರೈನಿಂಗ್ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಸಾಯಿ ಪಲ್ಲವಿ ಈಗ ನಕ್ಸಲೈಟ್ ಆಗಲು ಹೊರಟಿದ್ದಾರಾ ಅಂತ ಅಚ್ಚರಿಯಾಗುತ್ತಿದೆಯಾ. ಸಾಯಿ ನಕ್ಸಲೈಟ್ ಆಗುತ್ತಿರುವುದು ನಿಜ, ಆದರೆ ಅದೂ ಸಿನಿಮಾದಲ್ಲಿ.

  ಕಲಾವಿದರು ತಾವು ಅಭಿನಯಿಸುವ ಪಾತ್ರ ಉತ್ತಮವಾಗಿ ಮೂಡಿ ಬರಬೇಕು ಎಂದರೆ ಎಂತಹ ರಿಸ್ಕ್ ಬೇಕಾದರು ತೆಗೆದುಕೊಳ್ಳಲು ತಯಾರಾಗಿರುತ್ತಾರೆ. ನಟಿ ಸಾಯಿ ಪಲ್ಲವಿ ನಕ್ಸಲೈಟ್ ಪಾತ್ರಕ್ಕಾಗಿ ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ವಿಶೇಷ ಅಂದರೆ ಮಾಜಿ ನಕ್ಸಲ್ ಲೀಡರ್ ಬಳಿಯೆ ಟ್ರೈನಿಂಗ್ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?

  ಸಾಯಿ ಪಲ್ಲವಿ ಅಭಿನಯದ 'ವಿರಾಟ ಪರ್ವಂ 1992' ಸಿನಿಮಾದಲ್ಲಿ ಸಾಯಿ ಪಲ್ಲವಿ ನಕ್ಸಲೈಟ್ ಪಾತ್ರ ಮಾಡುತ್ತಿದ್ದಾರಂತೆ. ಚಿತ್ರದಲ್ಲಿ ಸಾಯಿ ಮೊದಲು ಉತ್ತಮ ಸಿಂಗರ್ ಆಗಿರುತ್ತಾರಂತೆ. ಆದರೆ ಕಾರಣಾಂತರಗಳಿಂದ ನಕ್ಸಲೈಟ್ ಆಗುವ ಕತೆ ಇದೆಯಂತೆ. ಈ ಪಾತ್ರಕ್ಕಾಗಿ ಸಾಯಿ ಈಗ ಆಕ್ಷನ್ ದೃಶ್ಯ, ಬಾಂಬ್ ಗಳನ್ನು ಎಸೆಯುವುದು, ಶೂಟ್ ಮಾಡುವುದು ಸೇರಿದಂತೆ ಅನೇಕ ವಿಚಾರಗಳನ್ನು ಕಲಿಯಲು ಮಾಜಿ ನಕ್ಸಲೈಟ್ ಬಳಿಯೆ ಟ್ರೈನಿಂಗ್ ಪಡೆಯುತ್ತಿದ್ದಾರಂತೆ.

  ಪಾತ್ರ ಉತ್ತಮವಾಗಿ, ನೈಜವಾಗಿ ಮೂಡಿ ಬರಬೇಕು ಎನ್ನುವ ಉದ್ದೇಶದಿಂದ ಮಾಜಿ ನಕ್ಸಲೈಟ್ ಬಳಿಯೆ ಟ್ರೈನಿಂಗ್ ಪಡೆಯುತ್ತಿರುವುದು ವಿಶೇಷ. ಅಂದ್ಹಾಗೆ ಚಿತ್ರದಲ್ಲಿ ನಾಯಕನಾಗಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಾಣಾ ಮತ್ತು ಸಾಯಿ ಇಬ್ಬರು ಒಟ್ಟಿಗೆ ತೆರೆ ಮೇಲೆ ಬರುತ್ತಿದ್ದಾರೆ.

  ಅಂದ್ಹಾಗೆ ರಾಣಾ ದಗ್ಗುಬಾಟಿ ಇಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 90ರ ದಶಕದ ರಾಜಕೀಯ ಹಿನ್ನಲೆಯಲ್ಲಿ ಈ ಚಿತ್ರ ಮೂಡಿ ಬರಲಿದೆಯಂತೆ. ವಿ'ರಾಟ ಪರ್ವಂ 1992' ಚಿತ್ರಕ್ಕೆ ವೇಣು ಉಡುಗುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Actress Sai Pallavi trains under an ex- naxal leader for her next movie Virata Parvam 1992.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X