»   » ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್'

ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್'

Posted By:
Subscribe to Filmibeat Kannada

ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಕ್ಷೇತ್ರದಲ್ಲಿ ಸಖತ್ ಬ್ಯುಸಿ ಶೆಡ್ಯೂಲ್ ಹಾಕಿಕೊಂಡಿರುವ ನಟಿ ಸಮಂತಾ ರುತು ಪ್ರಭು ಅವರು ಕನ್ನಡದ ನಿರ್ದೇಶಕ ಪವನ್ ಕುಮಾರ್ ಅವರ ಕನ್ನಡ 'ಯು-ಟರ್ನ್' ಚಿತ್ರದ ರೀಮೆಕ್ ನಲ್ಲಿ ನಟಿಸಲು ಆಸಕ್ತಿ ವಹಿಸಿದ್ದಾರೆ.

ಮಾರ್ಚ್ 18 ರಂದು ಬೆಂಗಳೂರಿಗೆ ಆಗಮಿಸಿದ್ದ ನಟಿ ಸಮಂತಾ ರುತು ಪ್ರಭು ಅವರು ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ನೋಡಿದ್ದಾರಂತೆ. ಈ ಸಂದರ್ಭದಲ್ಲಿ ಇವರ ಜೊತೆ ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಅವರು ಕೂಡ ಹಾಜರಿದ್ದರು.[ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್']


Actress Samantha to remake 'U-Turn' in Tamil and Telugu

ಸಮಂತಾ ರುತು ಸಿನಿಮಾ ನೋಡಿರುವುದನ್ನು ದೃಢೀಕರಿಸಿರುವ ನಿರ್ದೇಶಕ ಪವನ್ ಕುಮಾರ್ 'ಯು-ಟರ್ನ್' ಚಿತ್ರದ ಟ್ರೈಲರ್ ನೋಡಿದ ಸಮಂತಾ ಅವರು ನನ್ನ ಜೊತೆಗೆ ಮಾತನಾಡಿದರು. ಅವರು ಸ್ಕ್ರಿಪ್ಟ್ ಓದಿದ ನಂತರ ಇದೀಗ ಸಿನಿಮಾದ ಪ್ರಿವ್ಯೂ ಕೂಡ ವೀಕ್ಷಿಸಿದ್ದಾರೆ. ಸದ್ಯಕ್ಕೆ ಚಿತ್ರವನ್ನು ತಮಿಳು-ತೆಲುಗು ಭಾಷೆಗೆ ರೀಮೆಕ್ ಮಾಡಲು ಚರ್ಚೆ ನಡೆಸುತ್ತಿದ್ದೇವೆ' ಎನ್ನುತ್ತಾರೆ.


ತೆಲುಗು ನಟ ನಾಗಚೈತನ್ಯ ಅವರು ತಮ್ಮ ಹಿಂದಿನ ಸಿನಿಮಾ 'ಲೂಸಿಯಾ'ದ ಅಭಿಮಾನಿಯಾಗಿರುವುದರಿಂದ ಅವರು ನಟಿ ಸಮಂತಾ ಅವರ ಜೊತೆಗೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎನ್ನುತ್ತಾರೆ 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್.['ಯು ಟರ್ನ್' ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ಏನಿರಬಹುದು?]


-
-
-
-
-
-
-
-
-
-

ಈಗಾಗಲೇ 'ಯು-ಟರ್ನ್' ನಿರ್ಮಾಪಕರ ಜೊತೆ ತೆಲುಗು ಮತ್ತು ತಮಿಳು ರೀಮೆಕ್ ಸಾಧ್ಯತೆಗಳನ್ನು ನಿರ್ದೇಶಕ ಪವನ್ ಅವರು ಚರ್ಚಿಸುತ್ತಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕನ್ನಡ ಚಿತ್ರ ತೆಲುಗಿಗೂ 'ಯು-ಟರ್ನ್' ತೆಗೆದುಕೊಳ್ಳಲಿದೆ.


'ಸಮಂತಾ ಅವರು ನಮ್ಮ ಕನ್ನಡ ಸಿನಿಮಾವನ್ನು ತಮಿಳು ಮತ್ತು ತೆಲುಗಿನಲ್ಲಿ ಮಾಡಲು ಆಸಕ್ತಿ ತೋರಿರುವುದು ಒಳ್ಳೆಯ ಸುದ್ದಿ. ಆದರೆ ನಮಗೆ ನಿರ್ಮಾಪಕರು ಸಿಗಬೇಕು. ಎಲ್ಲವೂ ಅಂತಿಮವಾದ ಮೇಲಷ್ಟೇ ನಾನು ಅಧಿಕೃತವಾಗಿ ಘೋಷಣೆ ಮಾಡಲು ಸಾಧ್ಯ' ಎಂದಿದ್ದಾರೆ ನಿರ್ದೇಶಕ ಪವನ್ ಕುಮಾರ್.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]


-
-
-
-
-
-
-
-
-

ಚಿತ್ರದಲ್ಲಿ ನವ ಪ್ರತಿಭೆ ನಟಿ ಶ್ರದ್ಧಾ ಶ್ರೀನಾಥ್, ನಟ ದಿಲೀಪ್ ರಾಜ್, ನಟಿ ರಾಧಿಕಾ ಚೇತನ್ ಹಾಲಿವುಡ್ ನಟ ರೋಜರ್ ನಾರಾಯಣ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.


ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ. ದಕ್ಷಿಣ ಭಾರತದ ನಟಿ ಸಮಂತಾ ರುತು ಪ್ರಭು ಅವರ ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ..


-
-
-
-
-
-
English summary
Tamil and Telugu actress Samantha Ruth Prabhu is so interested in the remake of Pawan's Kannada Movie 'U Turn', in both Tamil and Telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada