Don't Miss!
- News
ಬಿಜೆಪಿಗೆ ಕುರುಬರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅವರನ್ನು ಎಸ್.ಟಿ ಗೆ ಸೇರಿಸಲಿ: ಸಿದ್ದರಾಮಯ್ಯ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Automobiles
ಭಾರತದಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರುಗಳಿವು!
- Sports
IPLನಲ್ಲಿ ತಾನಾಡಿದ ಇತರ ತಂಡಗಳಿಗಿಂತ 'ಆರ್ಸಿಬಿ ಅತ್ಯುತ್ತಮ ಅಭಿಮಾನಿ ಬಳಗ' ಎಂದ ದಿನೇಶ್ ಕಾರ್ತಿಕ್
- Finance
Gold Rate Today: ದೇಶದ ಪ್ರಮುಖ ನಗರಗಳ ಮೇ 28ರ ಚಿನ್ನದ ಬೆಲೆ ಪರಿಶೀಲಿಸಿ
- Lifestyle
ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳೇನು? ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳೇನು?
- Technology
ಒಪ್ಪೋ A16K ಸ್ಮಾರ್ಟ್ಫೋನ್ ಬೆಲೆಯಲ್ಲಿ ಇಳಿಕೆ!..ಹೊಸ ಬೆಲೆ ಎಷ್ಟು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾನು ಕಂಡಿದ್ದ ಕನಸು ಕೊನೆಗೂ ನನಸು ಮಾಡಿಕೊಂಡ ನಟಿ ಸಂಯುಕ್ತಾ ಹೆಗ್ಡೆ!
ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಬೆಡಗಿ 2016 ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಛಾಪು ಮೂಡಿಸಿದ್ದರು. ಸಂಯುಕ್ತಾ ಹೆಗ್ಡೆ ಮೊದಲ ಸಿನಿಮಾದಲ್ಲೆ ಕಮಾಲ್ ಮಾಡಿ ಮೊದಲ ಚಿತ್ರದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಎರಡನೇ ನಾಯಕಿಯಾಗಿ ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತಾ ಈ ಸಿನಿಮಾಗಾಗಿ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ ಅವಾರ್ಡ್ ಕೂಡ ಪಡೆದುಕೊಂಡಿರೋದು ಎಲ್ಲರಿಗೂ ಗೊತ್ತಿದೆ.
ತದ ನಂತರದಲ್ಲಿ ಬಳಿಕ ಅಲೆಮಾರಿ ಸಂತು ನಿರ್ದೇಶನದ ಕಾಲೇಜ್ ಕುಮಾರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ಕಾಣಿಸಿಕೊಂಡ ನಟಿ ಸಂಯುಕ್ತಾ ಹೆಗ್ಡೆ, ನಂತರ ಬೇರೆ ಯಾವ ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲಾ.
ಅದಾಗಲೇ ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿರುವ ಸಂಯುಕ್ತ, ತನ್ನ ಅದ್ಭುತ ಡ್ಯಾನ್ಸ್ ಕಲೆಯಿಂದಲೇ ಮೋಡಿ ಮಾಡುತ್ತಿದ್ದಾರೆ. ಇವರ ನಟನೆಯ ತಮಿಳು ಚಿತ್ರ 'ಥೀಲ್' ಇದೇ ಜನವರಿ 14ಕ್ಕೆ ತೆರೆಕಂಡಿದೆ.
ಇದರ ಬೆನ್ನಲ್ಲೆ ಸಿನಿಮಾದ ವೀಡಿಯೋ ಸಾಂಗ್ ಒಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು,ಸಂಯುಕ್ತಾ ಹೆಗ್ಡೆ ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.

ಥೀಲ್ ಚಿತ್ರದ ವಿಡಿಯೋ ಸಾಂಗ್ ಬಗ್ಗೆ ಸಂಯುಕ್ತಾ ಮಾತು
ನಟಿ ಸಂಯುಕ್ತಾ ಹೆಗ್ಡೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರಿಕ್ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾದರು. ಸಂಯುಕ್ತಾ ನಟಿ ಮಾತ್ರ ಉತ್ತಮ ನೃತ್ಯಪಟು ಕೂಡ ಹೌದು. ಹಿಂದಿ ಕಿರುತೆರೆಯ ಪ್ರಸಿದ್ದ ರೋಡಿಸ್ ಎಂಬ ರಿಯಾಲಿಟಿ ಮೂಲಕ ಜನಪ್ರಿಯತೆ ಗಳಿಸಿಕೊಂಡ ಸಂಯುಕ್ತಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಸಂಯುಕ್ತಾ ಹೆಗ್ಡೆ ಪ್ರಭುದೇವ ಜೊತೆ ನಟಿಸೋ ಅವಕಾಶ ಪಡೆದು ಕೊಂಡಿದ್ದರು. ಅವರ ಅಭಿನಯದ ಥೀಲ್ ಸಿನಿಮಾ ಜನವರಿ 14ಕ್ಕೆ ತೆರೆ ಕಂಡಿದ್ದು, ಸಾಧಾರಣ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರ ರಿಲೀಸ್ ಬೆನ್ನಲ್ಲೆ ಇದೀಗ ಥೀಲ್ ಚಿತ್ರದ ವೀಡಿಯೋ ಸಾಂಗ್ ಕೂಡ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಸಂಯುಕ್ತ ಹೆಗ್ಡೆ ಈ ಹಾಡಿನ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಥೀಲ್' ಚಿತ್ರದ ಹಾಡಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ನಟಿ !
ಹೌದು, ತಮಿಳಿನ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡು ಬ್ಯುಸಿಯಾಗಿರುವ ಸಂಯುಕ್ತಾ ಹೆಗ್ಡೆ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನೃತ್ಯ ಸಂಯೋಜಕ ನಟ, ನಿರ್ದೇಶಕ ಪ್ರಭುದೇವ ಅವರೊಟ್ಟಿಗೆ ಸ್ಟೆಪ್ ಹಾಕಿರೋ ಹಾಡು ರಿಲೀಸ್ ಆಗಿದೆ. ನಟ ಪ್ರಭುದೇವ ನಟನೆಯ ಥೀಲ್ ಚಿತ್ರದಲ್ಲಿ ಪ್ರಭುದೇವ್ ಅವರೊಟ್ಟಿಗೆ ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಈ ಥೀಲ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿದ್ದು, 'ವಾಟುರ ಥೀಟುರ' ಹಾಡಿನ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕನಸು ಈಡೇರಿಸಿಕೊಂಡ ನಟಿ ಸಂಯುಕ್ತಾ ಹೆಗ್ಡೆ !
"ಚಿಕ್ಕವಯಸ್ಸಿನಲ್ಲೆ ನನ್ನದೊಂದು ಕನಸಿತ್ತು. ಅದು ಏನೆಂದರೇ ಪ್ರಭುದೇವ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂದು. ಅದು ಈಗ ಈಡೇರಿದೆ. ನಾನು ಪ್ರಭುದೇವ ಅವರೊಂದಿಗೆ ಕೇವಲ ನಟನೆಗೆ ಮಾತ್ರ ಅವಕಾಶ ಪಡೆದಿರಲ್ಲ. ಅವರೊಂದಿಗೆ ಸಿನಿಮಾದ ಒಂದು ಹಾಡಿನಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ನಾನು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಾಗ ನನ್ನದೊಂದು ಕನಸಿತ್ತು. ಸಿನಿಮಾದಲ್ಲಿ ಪ್ರಭುದೇವ ಅವರೊಂದಿಗೆ ಮೊದಲು ನಾನು ಡ್ಯಾನ್ಸ್ ಮಾಡಬೇಕು ಎಂದು. ಅದು ಈಗ ಈಡೇರಿದೆ. ಯಾಕೆಂದರೆ ಪ್ರಭುದೇವ ಅವರನ್ನು ನೋಡಿಯೇ ನನಗೆ ಡ್ಯಾನ್ಸ್‌ನಲ್ಲಿ ಹೆಚ್ಚು ಆಸಕ್ತಿ ಹುಟ್ಟಿದ್ದು, ಅವರು ತುಂಬ ನೈಜವಾಗಿ ಡ್ಯಾನ್ಸ್ ಮಾಡುತ್ತಾರೆ. ಅವರೊಂದಿಗೆ ಡ್ಯಾನ್ಸ್ ಮಾಡಲು ಅವಕಾಶ ಸಿಕ್ಕಿರೋದು ನನಗೆ ಹೆಮ್ಮೆ ಎನ್ನಿಸುತ್ತಿದೆ. ನನ್ನ ಕನಸು ನನಸಾದ ಕ್ಷಣ ಇದು" ಎಂದು ಬರೆದುಕೊಂಡಿದ್ದಾರೆ.

ಕನ್ನಡಕ್ಕೆ ಮತ್ತೆ ಬರ್ತಾರ ನಟಿ ಸಂಯುಕ್ತಾ ಹೆಗ್ಡೆ ?
ಇನ್ನು ಈ ಹಿಂದೆ ಸಂಯುಕ್ತಾ ಅವರಿಗೆ ಮಾಧ್ಯಮಮಿತ್ರರು ನೀವು ಕನ್ನಡದಲ್ಲಿ ಏಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆ ಕೇಳಿದ್ದರು.ಆಗ ಸಂಯುಕ್ತಾ "ನೀವು ಈ ಪ್ರಶ್ನೆಯನ್ನ ನನಗೆ ಕೇಳುವ ಬದಲು ಕನ್ನಡದ ನಿರ್ದೇಶಕರು, ನಿರ್ಮಾಪಕರ ಬಳಿ ಕೇಳಿ. ಕನ್ನಡದ ನಟಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ" ಎಂದು ಪ್ರತಿಕ್ರಿಯಿಸಿದ್ದರು. ಕನ್ನಡದಲ್ಲಿ ನನಗೆ ಅವಕಾಶ ಸಿಗುತ್ತಿಲ್ಲ. ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ತಮಗೆ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದರು. ಸದ್ಯಕ್ಕೆ ಸಂಯುಕ್ತಾ ಹೆಗ್ಡೆ ಪದವಿ ಅಧ್ಯಯನ ಮಾಡುತ್ತಿರುವುದರ ಜೊತೆಗೆ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.