»   » ಬೆಳಿಗ್ಗೆ 'ಅಮ್ಮ' ಅಂತಾರೆ, ರಾತ್ರಿ ಮಂಚಕ್ಕೆ ಕರೀತಾರೆ ಎಂದ ತೆಲುಗು ನಟಿ

ಬೆಳಿಗ್ಗೆ 'ಅಮ್ಮ' ಅಂತಾರೆ, ರಾತ್ರಿ ಮಂಚಕ್ಕೆ ಕರೀತಾರೆ ಎಂದ ತೆಲುಗು ನಟಿ

Posted By:
Subscribe to Filmibeat Kannada

ಶ್ರೀರೆಡ್ಡಿ ನಂತರ ಈಗ ಮತ್ತೊಬ್ಬ ತೆಲುಗು ನಟಿ 'ಕಾಸ್ಟಿಂಗ್ ಕೌಚ್' ವಿಚಾರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ತೆಲುಗು ನಿರ್ದೇಶಕ, ನಿರ್ಮಾಪಕರು ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ವಂಚನೆ ಮಾಡ್ತಿದ್ದಾರೆ ಎಂಬ ಗಂಭೀರ ಆರೋಪಗಳು ಈಗ ಟಾಲಿವುಡ್ ನಲ್ಲಿ ಹೆಚ್ಚಾಗಿದೆ.

ಇದರ ಬೆನ್ನಲ್ಲೆ ನಟಿ ಸಂಧ್ಯಾ ನಾಯ್ಡು ಮಾತನಾಡಿದ್ದು, ಕೆಲ ನಿರ್ಮಾಪಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬೆಳಿಗ್ಗೆ ಶೂಟಿಂಗ್ ನಲ್ಲಿ ಅಮ್ಮ ಅಂತಾರೆ, ರಾತ್ರಿಯಾಗುತ್ತಿದ್ದಂತೆ ಮಂಚಕ್ಕೆ ಕರೀತಾರೆ'' ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಂಡಸ್ಟ್ರಿಯಲ್ಲಿ ಎಷ್ಟರ ಮಟ್ಟಿಗೆ ಕಾಮಾಂಧರು ಇದ್ದಾರೆ ಅಂದ್ರೆ, ಕೇವಲ 18 ವರ್ಷದ ಯುವತಿಯರನ್ನ ಮಾತ್ರವಲ್ಲ, ನಮ್ಮಂತ ಆಂಟಿಗಳನ್ನ ಕೂಡ ಬಿಡುವುದಿಲ್ಲ. 60 ವರ್ಷದ ಮುದುಕಿಯರನ್ನ ಕೂಡ ಬಿಡುವುದಿಲ್ಲ ಈ ಕಚಡಾಗಳು ಎಂದು ಕಿಡಿಕಾರಿದ್ದಾರೆ.

Actress Sandhya Naidu comment on casting couch

ಇಲ್ಲಿ ಪಾತ್ರ ನಿರ್ವಹಿಸಲು ಕಲಾವಿದರು ಮುಖ್ಯವಲ್ಲ, ಅವರ ದೇಹ, ಸೌಂದರ್ಯವೇ ಮುಖ್ಯ. ತಾಯಿ ಪಾತ್ರ ಮಾಡುವುದಕ್ಕೂ ಇಲ್ಲಿ ಸ್ಲಿಮ್ ಆಗಿರಲೇಬೇಕು. ಶೂಟಿಂಗ್ ಸಮಯದಲ್ಲಿ ನಿಂದಿಸಿದ್ದು ಸಾಲದು ಅಂತಾ, ಮನೆಗೆ ಹೋದಮೇಲೂ ಮೆಸೆಜ್ ಮಾಡ್ತಾರೆ.

ಚಿತ್ರದಲ್ಲಿ ಅವಕಾಶಕ್ಕಾಗಿ ನಾವು ನಿರ್ದೇಶಕರಿಗಾಗಿ ಎಲ್ಲವನ್ನೂ ಮಾಡಿದ್ದೇವೆ. 'ಕಾಸ್ಟಿಂಗ್ ಕೌಚ್' ಸೇರಿದಂತೆ ಉತ್ತಮವಾಗಿ ಕಾಣಲು ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇವೆ. ನಮ್ಮ ಚರ್ಮದ ಟೋನ್ ಸಹ ಬದಲಾಯಿಸಿಕೊಂಡಿದ್ದೇವೆ. ಆದರೂ ನಾವು ಅವರ ಕೈಯಲ್ಲಿ ಕೇವಲ ಪ್ಯಾದೆಗಳು ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
after sri reddy sensational comment, now another Telugu actress Sandhya Naidu spoke about casting couch. ''They call me Amma at the shooting spot, demand sex at night says Sandhya Naidu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X