»   » ಸಂಜನಾಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ

ಸಂಜನಾಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ

Posted By:
Subscribe to Filmibeat Kannada

ಕನ್ನಡದ ಹಾಟ್ ಬೆಡಗಿ ಸಂಜನಾ ಅವರು ಒಂದು ಅಪರೂಪದ ಸಾಧನೆ ಮಾಡಿ ತೋರಿಸಿದ್ದಾರೆ. ಮತ್ತೇನಾದರೂ 'ಗಂಡಹೆಂಡತಿ' ಚಿತ್ರದ ರೀತಿಯಲ್ಲಿ ಸಾಧನೆ ಮಾಡಿದರಾ ಎಂದು ಕೇಳಬೇಡಿ. ಸಂಜನಾ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಸಂಜನಾ ಅವರಿಗೆ ಈ ಗರಿಮೆ ಹೇಗೆ ಸಿಕ್ಕಿತು ಎಂದರೆ, 104 ಗಂಟೆಗಳ ಕಾಲ ಸಾಗಿದ ಸೈಕ್ಲಿಂಗ್‌ ಮ್ಯಾರಥಾನ್‌ ನಲ್ಲಿ ಪಾಲ್ಗೊಳ್ಳುವ ಮೂಲಕ ಈ ದಾಖಲೆಗೆ ಸಂಜನಾ ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮವನ್ನು ಫೀವರ್ 104 ಎಫ್ಎಂ ರೇಡಿಯೋ ಚಾನಲ್ ಆಯೋಜಿಸಿತ್ತು. [ನಟಿ ಸಂಜನಾ ಬಗ್ಗೆ ನಿಮಗೆ ತಿಳಿದಿರದ ರಹಸ್ಯಗಳು]

Actress Sanjjanaa enters Limca Book of Records

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಜನಾ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಅವರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

'ಅಗ್ರಜ' ಚಿತ್ರದ ಬಳಿಕ ಸಂಜನಾ ಒಂದಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಎಲ್ಲಿಯೂ ನೆಲೆ ನಿಲ್ಲದೆ ದಕ್ಷಿಣ ಚಿತ್ರರಂಗದಲ್ಲಿ ಸದಾ ಬಿಜಿಯಾಗಿರುವ ತಾರೆಗಳಲ್ಲಿ ಸಂಜನಾ ಸಹ ಒಬ್ಬರು. ವಾರ್ದಿಕ್ ಜೋಸೆಫ್ ನಿರ್ದೇಶನದ ಕನ್ನಡದ 'ಮಂಡ್ಯ ಟು ಮುಂಬೈ' ಹಾಗೂ 'ಬೆಂಗಳೂರು 560 023' ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ. (ಏಜೆನ್ಸೀಸ್)

English summary
Hot heroine Sanjana of Ganda Hendathi (2006) movie fame has entered the Limca Book of world records. She has finished 104 hours of cycling along with a big group of active cyclists to enter into this record.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada