»   » ಭರ್ಜರಿ ಸುದ್ದಿ ಕೊಡಲಿರುವ ನಟಿ ಸಂಜನಾ ಗಲ್ ರಾಣಿ

ಭರ್ಜರಿ ಸುದ್ದಿ ಕೊಡಲಿರುವ ನಟಿ ಸಂಜನಾ ಗಲ್ ರಾಣಿ

By: ರವಿಕಿಶೋರ್
Subscribe to Filmibeat Kannada

ಕ್ಯೂಟ್ ಆಗಿರುವ ಹಾಟ್ ಬೆಡಗಿ ನಟಿ ಸಂಜನಾ ಬ್ರೇಕಿಂಗ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ. ಸದ್ಯಕ್ಕೆ 'ರಾಮ್ ಲೀಲಾ' ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದು, ಶೀಘ್ರದಲ್ಲೇ ಭರ್ಜರಿ ಸುದ್ದಿ ಕೊಡ್ತೀನಿ ಎಂದಿದ್ದಾರೆ. ಅದೇನಿರಬಹುದು ಅಂತಹಾ ಭರ್ಜರಿ ಸುದ್ದಿ ಎಂದು ಚಿತ್ರರಸಿಕರು ಕಾದು ಕುಳಿತಿದ್ದಾರೆ.

ತೆಲುಗುನ ಹಿಟ್ ಚಿತ್ರ 'ಲೌಕ್ಯಂ' ರೀಮೇಕ್ ಆಗಿರುವ 'ರಾಮ್ ಲೀಲಾ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕ ಪಾತ್ರ ಪೋಷಿಸಿದ್ದಾರೆ. ಅಮೂಲ್ಯಾ ನಾಯಕಿಯಾಗಿರುವ ಈ ಚಿತ್ರದಲ್ಲಿ ಸಂಜನಾ ಅವರದು ಗಮನಾರ್ಹ ಪಾತ್ರ. "ರಾಮ್ ಲೀಲಾ ಚಿತ್ರದ ಚಿತ್ರೀಕರಣ ಮುಗಿದಿದ್ದು, ಹೊಸ ಚಿತ್ರದ ಶೂಟಿಂಗ್ ಶ್ರೀರಂಗಪಟ್ಟಣದಲ್ಲಿ ಶುರುವಾಗಿದೆ. ಆ ಚಿತ್ರದ ವಿವರಗಳನ್ನು ಶೀಘ್ರದಲ್ಲೇ ನೀಡುತ್ತೇನೆ" ಎಂದಿದ್ದಾರೆ. [ಮತ್ತೆ ಒಂದಾದ ಸ್ಯಾಂಡಲ್ ವುಡ್ಡಿನ 'ಗಂಡ-ಹೆಂಡತಿ']

Sanjjanaa Galrani

ಇದೊಂದು ಐತಿಹಾಸಿಕ ಚಿತ್ರ ಎಂದಿರುವ ಸಂಜನಾ, ಅದರ ವಿವರಗಳನ್ನು ನೀಡ್ತೀನಿ ಸ್ವಲ್ಪ ತಾಳಿ ಎಂದಿದ್ದಾರೆ. ಯಾವುದಪ್ಪಾ ಈ ಚಿತ್ರ, ಯಾರು ನಾಯಕ ಎಂಬ ಕುತೂಹಲವನ್ನು ತನ್ನ ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದಾರೆ. ಮೈಲಾರಿ ಸೂಪರ್ ಸ್ಟಾರ್ ಎಂಬ ಸಣ್ಣ ಸುಳಿವನ್ನಂತೂ ಬಿಟ್ಟಿದ್ದಾರೆ.

ಮೈಲಾರಿ ಸ್ಟಾರ್ ಎಂದರೆ ಇವರು ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರವೇ ಅಥವಾ 'ಮೈಲಾ'ರಿ ಚಿತ್ರದ ನಿರ್ದೇಶಕ ಆರ್ ಚಂದ್ರು ಅವರ ನಿರ್ದೇಶನದ ಚಿತ್ರವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ಜೊತೆಗೆ ಸಂಜನಾ ಮತ್ತು ತಿಲಕ್ ಮತ್ತೆ ಒಂದಾಗಿರುವ ಚಿತ್ರವೂ ಬರುತ್ತಿದ್ದಾರೆ.

ಒಟ್ಟಾರೆಯಾಗಿ ಸಂಜನಾ ಒಳ್ಳೆಯ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಅದ್ಯಾವ ‌ಚಿತ್ರ ಬ್ರೇಕ್ ಕೊಡುತ್ತದೋ ಕಾದುನೋಡಬೇಕು. ತೆಲುಗು ಚಿತ್ರರಂಗದಲ್ಲೂ ಒಂದು ಸುತ್ತು ಹಾಕಿಕೊಂಡು ಬಂದಿರುವ ಸಂಜನಾ ಇತ್ತೀಚೆಗೆ ತೆರೆಕಂಡ 'ಅವುನು 2' ಹಾರರ್ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ.

English summary
Actress Sanjjanaa Galrani is going to spill the beans soon. Packed up #ramleela for today,now joining the team of an all newfilm in srirangapatna revealing details shortly, the actress tweets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada