»   » ಸ್ಯಾಂಡಲ್ ವುಡ್ ಬೆಡಗಿಯರು ಯಾರಿಗೇನು ಕಮ್ಮಿ: ಸಂಜನಾ

ಸ್ಯಾಂಡಲ್ ವುಡ್ ಬೆಡಗಿಯರು ಯಾರಿಗೇನು ಕಮ್ಮಿ: ಸಂಜನಾ

Posted By:
Subscribe to Filmibeat Kannada

ನಟಿ ಸಂಜನಾ ಗಲ್ರಾನಿ...ಸ್ಯಾಂಡಲ್ ವುಡ್ ನಲ್ಲಿ ಈಕೆ 'ದಿ ಮೋಸ್ಟ್ ಗ್ಲಾಮರಸ್' ನಟಿ ಅಂತಲೇ ಜನಪ್ರಿಯ. 'ಗಂಡ ಹೆಂಡತಿ' ಚಿತ್ರದಿಂದ ಪಡ್ಡೆಗಳ ಎದೆಬಡಿತ ಏರಿಸಿದ ಈ ಚೆಲುವೆ ಬೋಲ್ಡ್ ಪಾತ್ರಗಳಿಗೂ ಸೈ, 'ಮಹಾನದಿ' ಚಿತ್ರದಲ್ಲಿನ ಮೀನಾಕ್ಷಿ ಪಾತ್ರಕ್ಕೂ ಜೈ.

ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಬಿಜಿಯಾಗಿರುವ ನಟಿ ಸಂಜನಾಗೆ ಇತ್ತೀಚೆಗೆ ತುಂಬಾ ಕಿರಿಕಿರಿಯಾಗ್ಬಿಟ್ಟಿದೆ. ಪ್ರತಿಭೆಗೆ ಮನ್ನಣೆ ಕೊಡದೆ ಬರೀ ಗ್ಲಾಮರ್ ಗೆ ಮಾತ್ರ ಪ್ರಾಮುಖ್ಯತೆ ಕೊಡುವ ನಿರ್ಮಾಪಕರ ಮೇಲೆ ಸಂಜನಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಕಾರಣಕ್ಕೆ ಸಂಜನಾ, ಕೆಲ ನಿರ್ಮಾಪಕರ ಮೇಲೆ ಗರಂ ಆಗ್ಬಿಟ್ಟಿದ್ದಾರೆ. ''ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಕೊಡದೆ, ಬರೀ ಗ್ಲಾಮರ್ ಅನ್ನುವ ಹೆಸರಿಗೋಸ್ಕರ ಮುಂಬೈ ಬೆಡಗಿಯರಿಗೆ ಬುಲಾವ್ ನೀಡುವುದು ಎಷ್ಟು ಸರಿ'', ಅಂತ ತಮ್ಮ ಅಭಿಮಾನಿಗಳ ಮುಂದೆ ಸಂಜನಾ ಪ್ರಶ್ನೆ ಎತ್ತಿದ್ದಾರೆ.

sanjana

''ಬಾಲಿವುಡ್ ನ ಖ್ಯಾತ ಹೀರೋಯಿನ್ ಗಳನ್ನ ಕರೆತಂದರೆ ಪರವಾಗಿಲ್ಲ. ಆದ್ರೆ ಅಲ್ಲೇ ಸೈಡ್ ಲೈನ್ ಆಗಿರುವ ನಟಿಯರನ್ನ ಕರೆತಂದು, ಇಲ್ಲಿರುವ ನಟಿಯರಿಗೆ ಚಾನ್ಸ್ ಕೊಡದೆ ಇರುವುದು ಸರಿಯಲ್ಲ.'' ['ಅಗ್ರಜ'ನ ಬೆಡ್ ರೂಂ ಸೀನ್ ಮೇಲೆ ಸಂಜನಾ ಗರಂ]

''ಸಿನಿಮಾಗಳು ಹಿಟ್ ಆಗದೇ ಇದ್ದರೆ, ಕೆಲ ನಿರ್ಮಾಪಕರು ಹೀರೋಯಿನ್ ಗಳನ್ನ ಐರನ್ ಲೆಗ್ ಅನ್ನುತ್ತಾರೆ. ಅವಕಾಶವೇ ಕೊಡದೆ ಐರನ್ ಲೆಗ್ ಅಂದರೆ ಹೇಗೆ. ಬರೀ ಮುಂಬೈ ಹುಡುಗಿಯರೇ ಬೇಕು ಅನ್ನುತ್ತಿದ್ದರೆ, ದಕ್ಷಿಣದ ಪ್ರತಿಭೆಗಳು ಎಲ್ಲಿಗೆ ಹೋಗಬೇಕು'' ಅಂತ ಸಾಮಾಜಿಕ ಜಾಲತಾಣದಲ್ಲಿ 'ದಕ್ಷಿಣದಲ್ಲಿ ಮುಂಬೈ ಬೆಡಗಿಯರ ಹವಾ' ಕುರಿತು ಸಂಜನಾ ಬಗ್ಗೆ ನೀಡಿರುವ ಪ್ರತಿಕ್ರಿಯೆ ಇದು.

sanjana2

ಅಷ್ಟಕ್ಕೂ ಸಂಜನಾ ನಿರ್ಮಾಪಕರ ಮೇಲೆ ಕಣ್ಣು ಕೆಂಪಗೆ ಮಾಡಿಕೊಂಡಿರುವುದಕ್ಕೆ ಕಾರಣ, ದಕ್ಷಿಣದ ಚಿತ್ರಗಳಲ್ಲಿ ಮುಂಬೈ ಬೆಡಗಿಯರ ಬೇಡಿಕೆ ಹೆಚ್ಚಾಗುತ್ತಿರುವುದು. ಭಾಷೆ ಬಾರದ ಬಾಂಬೆ ಬೆಡಗಿಯರಿಂದ ಇಲ್ಲಿನ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿರುವ ನಟಿಯರ ಪರವಾಗಿ ಸಂಜನಾ ದನಿಯೆತ್ತಿದ್ದಾರೆ. [ನಟಿ ಸಂಜನಾಗೆ ರಾತ್ರಿ ಕರೆಗಳು, ಫುಲ್ ಡೀಟೇಲ್]

ಹಾಗಂತ ಸಂಜನಾ ಯಾವುದಾದರೂ ಒಳ್ಳೆ ಅವಕಾಶದಿಂದ ವಂಚಿತರಾಗಿದ್ದಾರಾ ಅಂದ್ರೆ ''ಖಂಡಿತ ಇಲ್ಲ, ಆದರೆ ನನಗೆ ಈ ತರಹ ತಾರತಮ್ಯ ಮಾಡುವುದು ಇಷ್ಟ ಇಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಸಂಜನಾ ತಿಳಿಸಿದ್ದಾರೆ.

sanjana3

ಹಾಗೆ ನೋಡಿದರೆ, ಸಂಜನಾ ವಾದ ಸರಿಯಾಗೇ ಇದೆ. ಭಾಷೆ ಬಾರದೆ ಮುಂಬೈ ಬೆಡಗಿಯರು ಪಡುವ ಹರಸಾಹಸವನ್ನ ನಾವೆಲ್ಲಾ ತೆರೆಮೇಲೆ ನೋಡಿದ್ದೀವಿ. ಹೀಗಿದ್ದರೂ, ಅವರಿಗೆ ಡಬಲ್ ಸಂಭಾವನೆ ಕೊಟ್ಟು ಇಲ್ಲಿಗೆ ಕರೆತರುವ ಅವಶ್ಯಕತೆ ಏನಿದೆಯೋ, ಆ ನಿರ್ಮಾಪಕರಿಗೇ ಗೊತ್ತು. [ಆಸೆ ತೀರಿಸೆಂದವನ ಮುಖಕ್ಕೆ ಸಂಜನಾ ಮಂಗಳಾರತಿ]

ಇನ್ನೂ ಸಂಜನಾ ಕೂಡ, ಬಾಲಿವುಡ್ ಬೆಡಗಿಯರಿಗಿಂತ ಕಮ್ಮಿಯಿಲ್ಲದಿದ್ದರೂ, ಕನ್ನಡದಲ್ಲಿ ಆಕೆಗೆ ಅವಕಾಶಗಳು ಅಷ್ಟಕಷ್ಟೆ. ಬರೀ ಎನ್.ಆರ್.ಐ ಹುಡುಗಿಯ ಪಾತ್ರಕಷ್ಟೇ ಸೀಮಿತವಾಗುತ್ತಿರುವ ಸಂಜನಾ, ಉತ್ತಮ ಅವಕಾಶಗಳು ಸಿಕ್ಕರೆ, ಎತ್ತರಕ್ಕೆ ಬೆಳೆಯಬಹುದೇನೋ..?! (ಫಿಲ್ಮಿಬೀಟ್ ಕನ್ನಡ)

English summary
Actress Sanjjanna Galrani is annoyed with the producers who are giving importance to the Bollywood Actresses in South. The Actress questions that Why few outdated and unemployed Bollywood heroine's are hyped in South?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada