Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನ್ನ ಮೈಮೇಲಿ ದೇವರು ಬರುತ್ತೆ ಎಂದ ನಟಿ ಸಾನ್ಯಾ ಐಯ್ಯರ್! ಅಭಿಮಾನಿಗಳು ಶಾಕ್
'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಬಾಲನಟಿ ಪುಟ್ಟಗೌರಿ ಪಾತ್ರದಿಂದ ಖ್ಯಾತರಾಗಿದ್ದ ಸಾನ್ಯಾ ಐಯ್ಯರ್ ಆ ಬಳಿಕ ಇನ್ನೂ ಕೆಲವು ಧಾರಾವಾಹಿಗಳ ಮೂಲಕ ಜನಪ್ರಿಯರಾದವರು. ಇತ್ತೀಚೆಗಷ್ಟೆ ಒಟಿಟಿ ಬಿಗ್‌ಬಾಸ್ ಹಾಗೂ ಬಿಗ್‌ಬಾಸ್ ಸೀಸನ್ 9 ರಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದಾರೆ.
ಇದೀಗ ಸಾನ್ಯಾ ಐಯ್ಯರ್ ಬಹಿರಂಗಪಡಿಸಿರುವ ವಿಷಯವೊಂದು ಅಚ್ಚರಿಕೆ ಕಾರಣವಾಗಿದೆ. ಈ ಹಿಂದೆ ಸಾನ್ಯಾ ಐಯ್ಯರ್ ಭಾಗವಹಿಸಿದ್ದ ರಿಯಾಲಿಟಿ ಶೋ ಒಂದರಲ್ಲಿ ದೇವಿ ನೃತ್ಯ ಮಾಡಿದ್ದರು. ದೇವಿ ಪಾತ್ರವನ್ನೂ ಮಾಡಿದ್ದರು. ಆಗ ಸಾನ್ಯಾ ಐಯ್ಯರ್ ಮೇಲೆ ದೇವರು ಬರುತ್ತಿತ್ತಂತೆ. ಈ ವಿಷಯವನ್ನು ಸ್ವತಃ ಸಾನ್ಯಾ ಐಯ್ಯರ್ ಹೇಳಿಕೊಂಡಿದ್ದಾರೆ!
ಡಾನ್ಸಿಂಗ್ ಶೋ ನಲ್ಲಿ ದೇವಿ ವೇಷ ಧರಿಸಿ ಸಾನ್ಯಾ ಐಯ್ಯರ್ ಅದ್ಧೂರಿಯಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ಅವರು ವೇದಿಕೆ ಏರುವ ಮುನ್ನ ಸಾನ್ಯಾ ಮೈಮೇಲಿ ದೇವಿ ಬಂತಿತ್ತಂತೆ. ಇದಕ್ಕೆ ಪುಷ್ಟಿ ನೀಡುವಂತೆ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಸ್ವತಃ ಸಾನ್ಯಾ ಐಯ್ಯರ್, ನ್ಯೂಸ್‌ಫಸ್ಟ್ ಕನ್ನಡ ಮಾಧ್ಯಮದ ಚರ್ಚೆಯಲ್ಲಿ ಹೇಳಿಕೊಂಡಿದ್ದಾರೆ.

ದೇವರು ಮೈಮೇಲೆ ಬರುವಂತೆ ಕೇಳಿಕೊಳ್ಳುತ್ತಿದ್ದೆ: ಸಾನ್ಯಾ
''ನನಗೆ ದೇವರು ಎಂದರೆ ಫ್ರೆಂಡ್ ರೀತಿ. ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮಾಡುವ ಮುನ್ನ ನಾನು ಸ್ವತಃ ದೇವರನ್ನು ಆವಾಹನೆ ಮಾಡಿಕೊಳ್ಳುತ್ತಿದ್ದೆ. ನಾನು ನಿನ್ನ ಪಾತ್ರ ಮಾಡುತ್ತಿದ್ದೀನಿ. ನೀನು ಬರದೇ ಹೋದರೆ ಹೇಗೆ, ನೀನು ಬರಲೇ ಬೇಕು ಎಂದು ದೇವಿಯಲ್ಲಿ ಕೇಳಿಕೊಳ್ಳುತ್ತಿದ್ದೆ. ಆಕೆ ನನ್ನ ದೇಹ ಪ್ರವೇಶ ಮಾಡುತ್ತಿದ್ದಳು'' ಎಂದಿದ್ದಾರೆ ಸಾನ್ಯಾ ಐಯ್ಯರ್.

ನನ್ನ ಮೇಲೆ ದೇವರ ಆವಾಹನೆ ಆಗುತ್ತಿತ್ತು: ಸಾನ್ಯಾ ಐಯ್ಯರ್
''ದೇವಿಯ ಹಾಗೆ ನಟಿಸುವ ಮುನ್ನ ನಾನು ಜಪ ಮಾಡುತ್ತಿದ್ದೆ. ಆಗ ನನ್ನ ಮನಸ್ಸಿನಲ್ಲಿ ಬದಲಾವಣೆ ಆಗುತ್ತಿತ್ತು. ನಾನು ಅಳಲು ಶುರು ಮಾಡುತ್ತಿದ್ದೆ. ನನ್ನ ದೇಹದಲ್ಲಿ ಡಬಲ್ ಎನರ್ಜಿ ತುಂಬುತ್ತಿತ್ತು. ನನಗೆ ಪಾಸಿಟಿವ್ ವೈಬ್ರೇಷನ್ ಬರುತ್ತಿತ್ತು. ಆ ಸಂದರ್ಭದಲ್ಲಿ ನಾನು ನನ್ನ ಕಂಟ್ರೋಲ್‌ನಲ್ಲೇ ಇರುತ್ತಿರಲಿಲ್ಲ. ನನ್ನ ಬಳಿ ಬರಲು ಯಾರನ್ನೂ ನಾನು ಬಿಡುತ್ತಿರಲಿಲ್ಲ. ಯಾರೂ ನನ್ನನ್ನು ಮುಟ್ಟುವಂತೆಯೂ ಇರಲಿಲ್ಲ. ಯಾರೋ ನನ್ನನ್ನು ಆಪರೇಟ್ ಮಾಡಿಸುತ್ತಿದ್ದಾರೆ ಎನಿಸುತ್ತಿತ್ತು. ಫೋಟೊ ತೆಗೆದುಕೊಂಡು ಬಂದವರ ಮೊಬೈಲ್ ಸಹ ಕಿತ್ತುಕೊಂಡು ಬಿಟ್ಟಿದ್ದೆ ಎಂದಿದ್ದಾರೆ ಸಾನ್ಯಾ.

ತ್ರಿಶೂಲ ಹಿಡಿದ ಮೇಲೆ ಎನರ್ಜಿ ದುಪ್ಪಟ್ಟು!
''ತ್ರಿಶೂಲ ಕೈಗೆ ಕೊಟ್ಟ ಬಳಿಕವಂತೂ ಎನರ್ಜಿ ದುಪ್ಪಟ್ಟಾಯಿತು. ದೇವಿ ಪೂರ್ತಿಯಾಗಿ ನನ್ನ ಮೈಮೇಲೆ ಬರಲೇ ಬೇಕು ಎಂದು ನಾನು ಪಟ್ಟು ಹಿಡಿಯುತ್ತಿದ್ದೆ. ದೇವಿಯೇ ನನ್ನ ಮೈಮೇಲೆ ಬಂದು ನೃತ್ಯ ಮಾಡಿದಂತೆ ಭಾಸವಾಯಿತು'' ಎಂದಿದ್ದಾರೆ. ಈಗ ಹರಿದಾಡುತ್ತಿರುವ ವಿಡಿಯೋದಲ್ಲಿ ಸಾನ್ಯಾ ಐಯ್ಯರ್, ದೇವಿ ವೇಷ ಧರಿಸಿ ಟೇಬಲ್ ಒಂದರ ಮೇಲೆ ಕೂತಿದ್ದಾರೆ. ಅಲ್ಲಿಯೇ ದೇವರು ಬಂದಂತೆ ಅಲ್ಲಾಡುತ್ತಿದ್ದಾರೆ. ರಿಯಾಲಿಟಿ ಶೋನಲ್ಲಿ ಮಾತ್ರವಲ್ಲ, ಬಿಗ್‌ಬಾಸ್‌ನಲ್ಲಿಯೂ ಸಾನ್ಯಾ ಮೈಮೇಲೆ ದೇವರು ಆವಾಹನೆ ಆಗಿತ್ತಂತೆ.

ಬಿಗ್‌ಬಾಸ್ ಮನೆಯಲ್ಲಿ ಹೀಲಿಂಗ್ ಮಾಡಿದ್ದ ಸಾನ್ಯಾ
ರೇಕಿ ಅಭ್ಯಾಸ ಮಾಡಿರುವ ಸಾನ್ಯಾ, ಹೀಲಿಂಗ್ ಸಹ ಮಾಡ್ತಾರಂತೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯೊಬ್ಬರಿಗೆ ಏಟಾಗಿದ್ದಾಗ ರೇಕಿ ಹೀಲಿಂಗ್ ಅನ್ನು ಸಾನ್ಯಾ ಪ್ರಯತ್ನ ಮಾಡಿದ್ದರು. ಆ ವೇಳೆ ಸಾನ್ಯಾ ಐಯ್ಯರ್ ಜೋರಾಗಿ ಅತ್ತುಬಿಟ್ಟಿದ್ದರು. ಇದು ಮನೆಯ ಇತರ ಸದಸ್ಯರಿಗೆ ಆತಂಕ ಉಂಟು ಮಾಡಿತ್ತು. ಅವರ ಒಳಗಿನ ನೋವನ್ನು ನಾನು ತೆಗೆದುಕೊಂಡೆ ಅದಕ್ಕೆ ನನಗೆ ನೋವಾಯಿತು ಎಂದು ಸಾನ್ಯಾ ಅಂದು ಹೇಳಿದ್ದರು. ಇದೂ ಸಹ ಹಲವರಿಗೆ ವಿಚಿತ್ರವಾಗಿ ಕಂಡಿತ್ತು.