»   » ವಿಚಾರಣೆ ವೇಳೆ ತಲೆಸುತ್ತಿ ಬಿದ್ದ 'ಕಾಮನಬಿಲ್ಲು' ಸರಿತಾ

ವಿಚಾರಣೆ ವೇಳೆ ತಲೆಸುತ್ತಿ ಬಿದ್ದ 'ಕಾಮನಬಿಲ್ಲು' ಸರಿತಾ

Posted By: ರವಿಕಿಶೋರ್
Subscribe to Filmibeat Kannada

ಎಪ್ಪತ್ತು, ಎಂಬತ್ತರ ದಶಕದಲ್ಲಿ ಚಿತ್ರರಸಿಕರ ನಿದ್ದೆಗೆಡಿಸಿದ ತಾರೆ ಸರಿತಾ. ಚಲಿಸುವ ಮೋಡಗಳು, ಹೊಸ ಬೆಳಕು, ಮೌನಗೀತೆ, ಕಾಮನಬಿಲ್ಲು, ಮುಗಿಲ ಮಲ್ಲಿಗೆ, ಭಕ್ತ ಪ್ರಹ್ಲಾದ, ಎರಡು ರೇಖೆಗಳು ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಜನಮನ ಸೂರೆಗೊಂಡ ತಾರೆ ಸರಿತಾ.

ಮಲಯಾಳಂ ನಟ ಮುಖೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸರಿತಾ ಅವರಿಗೆ ಇಬ್ಬರು ಪುತ್ರರಿದ್ದಾರೆ. ಸದ್ಯಕ್ಕೆ ಇವರಿಬ್ಬರ ವಿವಾಹ ವಿಚ್ಛೇದನ ತಕರಾರುಅರ್ಜಿ ವಿಚಾರಣೆ ನಡೆಯುತ್ತಿದೆ. ತಮ್ಮ ವಿವಾಹವನ್ನು ರದ್ದುಪಡಿಸಬೇಕೆಂದು 2009ರಲ್ಲಿ ಚೆನ್ನೈ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು ಸರಿತಾ. ['ಕಾಮನಬಿಲ್ಲು' ಸರಿತಾ ಸಂಸಾರದಲ್ಲಿ 'ತಪ್ಪಿದ ತಾಳ']

ಸುದೀರ್ಘ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ವರ್ಷಗಳ ಹಿಂದೆ ಮುಖೇಷ್ ಮತ್ತು ಸರಿತಾ ಅವರಿಗೆ ವಿಚ್ಛೇದನ ಪಡೆಯಲು ಅನುಮತಿ ನೀಡಿತ್ತು. ಆ ಬಳಿಕ ಮೆಥಿಲ್ ದೇವಿಕಾ ಎಂಬ ನೃತ್ಯ ಕಲಾವಿದೆಯನ್ನು ಮುಖೇಶ್ ವರಿಸಿದರು.

ಕೇರಳ, ಕೊಚ್ಚಿ ಕೋರ್ಟ್ ಕದ ತಟ್ಟಿದ ಸರಿತಾ

ಆದರೆ ಇವರಿಬ್ಬರ ವಿವಾಹ ಊರ್ಜಿತವಲ್ಲ ಎಂದು ಕೇರಳ, ಕೊಚ್ಚಿಯಲ್ಲಿನ ಕೌಟುಂಬಿಕ ನ್ಯಾಯಾಯಲದ ಕದ ತಟ್ಟಿದರು ಸರಿತಾ. ತಮ್ಮ ವಿಚ್ಛೇದನದ ವಿಚಾರಣೆ ನಡೆಯುವ ಸಮಯದಲ್ಲಿ ತಾನು ದುಬೈನಲ್ಲಿದ್ದೆ. ಆಗ ನ್ಯಾಯಾಲಯ ತೀರ್ಪ ತಮ್ಮ ಕೈ ಸೇರಲಿಲ್ಲ.

ಎರಡನೇ ವಿವಾಹ ರದ್ದುಗೊಳಿಸುವಂತೆ ದೂರು

ಆಗ ತಾನು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಿಚ್ಛೇದನನ್ನು ಮಂಜೂರು ಮಾಡಿತ್ತು. ಹಾಗಾಗಿ ಮುಖೇಶ್ ಅವರ ಎರಡನೇ ವಿವಾಹ ಅನೂರ್ಜಿತಗೊಳಿಸಿ ಎಂದು ಹೊಸದಾಗಿ ಕೋರ್ಟ್ ಗೆ ದೂರು ಸಲ್ಲಿಸಿದರು. ಈ ಕೇಸಿನ ವಿಚಾರಣೆ ನಿಮಿತ್ತ ಸರಿತಾ ಮತ್ತು ಮುಖೇಶ್ ಅವರು ಗುರುವಾರ (ಮಾ.5) ಕೋರ್ಟ್ ಗೆ ಹಾಜರಾಗಿದ್ದರು.

ತಲೆಸುತ್ತಿ ಬೀಳಲು ಕಾರಣವೇನಿರಬಹುದು

ವಿಚಾರಣೆ ಬಳಿಕ ಕೋರ್ಟ್ ಕಟಕಟೆಯಿಂದ ಹಿಂತಿರುಗುತ್ತಿರಬೇಕಾದರೆ ಸರಿತಾ ಅವರು ತಲೆಸುತ್ತಿ ಕೆಳಗೆ ಬಿದ್ದರು. ಈ ಘಟನೆ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿತು. ಅವರ ಆರೋಗ್ಯ ಸರಿಯಿಲ್ಲವೇ ಎಂಬ ಅನುಮಾನವನ್ನೂ ಮೂಡಿಸಿದೆ.

ಈಗವರ ವಯಸ್ಸು 55 ವರ್ಷಗಳು

ಸರಿತಾ ಅವರಿಗೆ ವಯಸ್ಸು ಈಗ 55 ವರ್ಷಗಳು. ಗಂಡನಿಂದ ವಿಚ್ಛೇದನ ಪಡೆದಿರುವುದು, ತನ್ನ ಮಾಜಿ ಪತಿ ಎರಡನೇ ವಿವಾಹವಾಗಿರುವುದು ಅವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿವೆ. ಬಹುಶಃ ಈ ಹಿನ್ನೆಲೆಯಲ್ಲಿ ಅವರು ತಲೆಸುತ್ತಿ ಬಿದ್ದಿರಬೇಕು.

ದುಬೈನಲ್ಲಿ ಸೆಟ್ಲ್ ಆಗಿರುವ ಸರಿತಾ

ಸರಿತಾ ಅವರ ಹಿರಿಮಗ ಶರ್ವನ್ ಅವರು ದುಬೈನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ, ಎರಡನೇ ಮಗ ತೇಜಸ್ ಡಿಗ್ರಿ ಓದುತ್ತಿದ್ದಾನೆ. ಮಕ್ಕಳೊಂದಿಗೆ ಸರಿತಾ ಅವರು ದುಬೈನಲ್ಲೇ ವಾಸವಾಗಿದ್ದಾರೆ.

English summary
Yester-year heroine Saritha fainted in the court hall on Thursday in Chennai. This happened during a hearing on her complaint against her former husband Mukesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada