»   » ಬೆಳ್ಳಿತೆರೆಗೆ ಮಾಜಿ ಹೀರೋಯಿನ್ ಸರಿತಾ ಪುತ್ರ

ಬೆಳ್ಳಿತೆರೆಗೆ ಮಾಜಿ ಹೀರೋಯಿನ್ ಸರಿತಾ ಪುತ್ರ

Posted By:
Subscribe to Filmibeat Kannada
Sarith son Nitin Kannan
ಚಲಿಸುವ ಮೋಡಗಳು, ಹೊಸ ಬೆಳಕು, ಮೌನಗೀತೆ, ಕಾಮನಬಿಲ್ಲು, ಮುಗಿಲ ಮಲ್ಲಿಗೆ, ಭಕ್ತ ಪ್ರಹ್ಲಾದ, ಎರಡು ರೇಖೆಗಳು ಸೇರಿದಂತೆ ಮುಂತಾದ ಚಿತ್ರಗಳ ಮೂಲಕ ಜನಮನ ಸೂರೆಗೊಂಡ ತಾರೆ ಸರಿತಾ. ಈಗ ಬೆಳ್ಳಿತೆರೆಗೆ ತನ್ನ ಪುತ್ರ ನಿತಿನ್ ಕಣ್ಣನ್ ಅವರನ್ನು ಪರಿಚಯಿಸುತ್ತಿದ್ದಾರೆ. ಆದರೆ ಈ ಚಿತ್ರ ತಮಿಳಿನಲ್ಲಿ ಸೆಟ್ಟೇರಿದೆ.

ಚೆನ್ನೈನ ಪ್ರತಿಷ್ಠಿತ ಎವಿಎಂ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿತು. ಪ್ರತಿಭಾನ್ವಿತ ನಿರ್ದೇಶಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ ಬಾಲಚಂದರ್ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.

ತೆಲುಗಿನ 'ಮರೋ ಚರಿತ್ರ'ದ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ಸರಿತಾ ಅವರು ಒಂದು ಕಾಲದಲ್ಲಿ ಕನ್ನಡದ ಬಹು ಬೇಡಿಕೆಯ ನಟಿಯಾಗಿದ್ದರು. ಮಲಯಾಳಂ ನಟ ಮುಖೇಶ್ ಬಾಬು ಅವರನ್ನು ಮದುವೆಯಾದ ನಂತರ ಚಿತ್ರರಂಗದ ಜತೆಗಿನ ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದ್ದರು.

2009ರಲ್ಲಿ ವಿವಾಹ ವಿಚ್ಛೇದನ ಪಡೆಯುವ ಮೂಲಕ ಮುಖೇಶ್ ಜತೆಗಿನ 18 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಸರಿತಾ ಅವರಿಗೆ ಇಬ್ಬರು ಗಂಡು ಮಕ್ಕಳು. ಅವರಲ್ಲಿ ಹಿರಿ ಮಗ ನಿತಿನ್ ಕಣ್ಣನ್ ಈಗ ನಾಯಕ ನಟನಾಗಿದ್ದಾರೆ.

ಎಂಬತ್ತರ ದಶಕದಲ್ಲಿ ಕನ್ನಡದ ಮನೆಮಾತಾಗಿದ್ದ ಸರಿತಾ ಅವರು ವಿದೇಶದಲ್ಲಿ ಸೆಟ್ಲ್ ಆಗಿದ್ದರು. ತೀರಾ ಇತ್ತೀಚೆಗೆ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದಶಮುಖ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಿಕೊಂಡಿದ್ದರು. ಗುರುತೇ ಸಿಗದಷ್ಟು ಡುಮ್ಮಿಯಂತಾಗಿರುವ ಸರಿತಾ ಅವರು ಲೇಡಿ ವಿಲನ್ ಆಗಿಯೂ ತೆಲುಗು ಚಿತ್ರಗಳಿಗೆ ಅಡಿಯಿಟ್ಟಿದ್ದರು. (ಒನ್ಇಂಡಿಯಾ ಕನ್ನಡ)

English summary
Chelisuva Modagalu fame actress Sarith's son Nithin Kannan enters to filmdom. His new movie launched at Chennai AVM studios recently. Saritha mainstream career spanned from 1978 to 1989, when she took a break to marry Indian actor and producer Mukesh and raise their two sons.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada