»   » ಸ್ಯಾಂಡಲ್ ವುಡ್ ಗೆ ಮತ್ತೆ ಚೇಚಿ ಆಂಟಿ ಶಕೀಲಾ ಎಂಟ್ರಿ

ಸ್ಯಾಂಡಲ್ ವುಡ್ ಗೆ ಮತ್ತೆ ಚೇಚಿ ಆಂಟಿ ಶಕೀಲಾ ಎಂಟ್ರಿ

Posted By:
Subscribe to Filmibeat Kannada

'ಬಿಗ್ ಬಾಸ್' ಸೀಸನ್ ಎರಡರ ಮೂಲಕ ಕಿರುತೆರೆ ವೀಕ್ಷಕರಿಗೆ ಸುಪರಿಚತರಾದ ನಟಿ ಶಕೀಲಾ. ಕನ್ನಡ ಬಾರದ ಕಲರ್ ಫುಲ್ ಕಲಾವಿದೆ ಎನ್ನಬಹುದು. ಕಡಿಮೆ ಸಮಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮನೆಯವರೆಲ್ಲಾ ನನ್ನಲ್ಲಿ ಒಬ್ಬ ಅಕ್ಕ, ಅಮ್ಮ, ಒಳ್ಳೆಯ ಸ್ನೇಹಿತೆಯನ್ನು ಕಂಡರು ಎಂದು ಶಕೀಲಾ ಹೇಳಿದ್ದು ಹಳೆಯ ಸಮಾಚಾರ.

ಇದೀಗ ಅವರು ಮತ್ತೆ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ 'ಪಾತರಗಿತ್ತಿ' ಚಿತ್ರದಲ್ಲೂ ಶಕೀಲಾ ಅಭಿನಯಿಸಿದ್ದಾರೆ. ಇದೀಗ ಅವರು ಇಂದ್ರಜಿತ್ ಲಂಕೇಶ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ 'ಲವ್ ಯೂ ಆಲಿಯಾ' ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. ಈ ಹಿಂದೆ ಇಂದ್ರಜಿತ್ ಅವರ ಮೊನಾಲಿಸಾ ಚಿತ್ರದಲ್ಲೂ ಶಕೀಲಾ ಬಣ್ಣ ಹಚ್ಚಿದ್ದರು.

Actress Shakeela in Love You Alia

ಇದೀಗ ಮತ್ತೆ ಅವರಿಗೆ ತಮ್ಮ ಚಿತ್ರದಲ್ಲಿ ಚಾನ್ಸ್ ನೀಡಿದ್ದಾರೆ ಇಂದ್ರಜಿತ್. ಈ ಬಗ್ಗೆ ಮಾತನಾಡಿರುವ ಅವರು, "ಶಕೀಲಾ ಅವರು ನನ್ನ ಚಿತ್ರಕ್ಕೆ ಲಕ್ಕಿ ಸ್ಟಾರ್ ಇದ್ದಂತೆ. ಅವರು ಅಭಿನಯಿಸಿದ 'ಮೊನಾಲಿಸಾ' ಚಿತ್ರ ಸೂಪರ್ ಹಿಟ್ ಆಗಿತ್ತು. ಅದೇ ರೀತಿ ಲವ್ ಯೂ ಆಲಿಯಾ ಚಿತ್ರವೂ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ನನ್ನದು" ಎನ್ನುತ್ತಾರೆ.

ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆ ಕೊಳ್ಳಿ ಇಟ್ಟ, ಅವರ ಬೆಚ್ಚಗಿನ ಕನಸುಗಳಿಗೆ ಇಂಬುಕೊಟ್ಟ ತಾರೆ ಶಕೀಲಾ. ಇಡೀ ದಕ್ಷಿಣ ಚಿತ್ರರಂಗದಲ್ಲಿ ಅವರ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಿದ್ದಂತಹ ಕಾಲಘಟ್ಟವೊಂದಿತ್ತು. ಇತ್ತೀಚೆಗೆ ಅವರ ಆತ್ಮಕಥೆ "ನಟಿ ಶಕೀಲಾ ಆತ್ಮಕಥೆ" ಬಿಡುಗಡೆಯಾಗಿತ್ತು.

ಸುವರ್ಣ ವಾಹಿನಿಯ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಆಗಮಿಸಿದ ಶಕೀಲಾ ಎಲ್ಲರಿಂದ ಚೇಚಿ ಎಂದು ಕರೆಸಿಕೊಂಡಿದ್ದರು. ಕನ್ನಡ ಅಷ್ಟಾಗಿ ಬರದಿದ್ದರೂ ಅರ್ಥ ಮಾಡಿಕೊಂಡು ಕಾನ್ವೆಂಟ್ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಶಕೀಲಾ ಇದ್ದಷ್ಟು ದಿನವೂ ಆದಷ್ಟು ಮೌನಕ್ಕೆ ಶರಣಾಗಿದ್ದರು. (ಏಜೆನ್ಸೀಸ್)

English summary
South Indian sensational actress Shakeela has been roped in for a Kannada movie titled 'Luv U Alia'. The film is directed by Indrajit Lankesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada