»   » ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್

ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್

Posted By:
Subscribe to Filmibeat Kannada

'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಎಂಬ ಮುದ್ದು ಹುಡುಗಿ ನಿಮಗೆಲ್ಲರಿಗೂ ಗೊತ್ತಿರಬೇಕಲ್ಲ. ಇದೀಗ ಈ ಗ್ಲಾಮರ್ ಬೆಡಗಿ 'ಮಾಸ್ಟರ್ ಪೀಸ್' ಚಿತ್ರದ ಭರ್ಜರಿ ಯಶಸ್ಸಿನಲ್ಲಿ ಬೀಗುತ್ತಿರುವಾಗಲೇ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ 'ಸಾಹೇಬ' ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಂದಹಾಗೆ ನಟ ಮನೋರಂಜನ್ ಅವರ 'ಸಾಹೇಬ' ಸಿನಿಮಾ ಜಯಣ್ಣ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಮೊನ್ನೆ ಸಂಕ್ರಾತಿ ಹಬ್ಬದಂದು ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿತ್ತು.[ಸಂಕ್ರಾಂತಿಗೆ ಭರ್ಜರಿಯಾಗಿ ಸೆಟ್ಟೇರಿದ ಜಯಣ್ಣ ನಿರ್ಮಾಣದ 2 ಚಿತ್ರಗಳು]

Actress Shanvi Srivatsav selected Heroine to Manoranjan's 'Saheba'

ಇದೀಗ 'ಸಾಹೇಬ' ಚಿತ್ರದಲ್ಲಿ ನಟ ಮನೋರಂಜನ್ ಅವರ ಜೊತೆ ನಟಿ ಶಾನ್ವಿ ಅವರು ಡ್ಯುಯೆಟ್ ಹಾಡುವುದು ಪಕ್ಕಾ ಎಂದು ನಿರ್ಮಾಪಕ ಜಯಣ್ಣ ಅವರೇ ಕನ್ ಫರ್ಮ್ ಮಾಡಿದ್ದಾರೆ.

ಈಗಾಗಲೇ ನಾಯಕಿ ಕೂಡ ಫಿಕ್ಸ್ ಆಗಿರುವುದರಿಂದ ಜನವರಿ 18 ರಿಂದ 'ಸಾಹೇಬ' ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರಕ್ಕೆ ನಿರ್ದೇಶಕ ಭರತ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.['ಭಲೇ ಭಲೇ' ಎಂದ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ]

Actress Shanvi Srivatsav selected Heroine to Manoranjan's 'Saheba'

ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರ ಮ್ಯೂಸಿಕ್ ಕಂಪೋಸಿಷನ್ ಈ ಚಿತ್ರಕ್ಕಿದ್ದು, ಜಿ.ಎಸ್.ವಿ ಸೀತಾರಾಮ ಅವರು ಕ್ಯಾಮಾರ ಕೈ ಚಳಕ ತೋರಲಿದ್ದಾರೆ.

ಇನ್ನು ನಟಿ ಶಾನ್ವಿ ಶ್ರೀವಾತ್ಸವ್ ಅವರು 'ಸಾಹೇಬ' ಚಿತ್ರದಲ್ಲಿ ಮಾತ್ರವಲ್ಲದೇ, ತೆಲುಗು ರಿಮೇಕ್ 'ಭಲೆ ಭಲೆ ಮಗಾಡಿವೋಯ್' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಕೂಡ ಮಿಂಚಲಿದ್ದಾರೆ.

English summary
Shanvi Srivatsav who is riding high on the success of her latest film 'Master Piece' which is running to packed houses has silently signed yet another film as a s heroine. This time she will be playing the female lead in Manoranjan starrer 'Saheba'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada