»   » 'ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?

'ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?

Posted By:
Subscribe to Filmibeat Kannada

2006, ಡಿಸೆಂಬರ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ 'ಮುಂಗಾರು ಮಳೆ' ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಅವರು ಎಲ್ಲಾ ಹುಡುಗಿಯರ ಮನ ಮೆಚ್ಚಿದ ಹುಡುಗ ಆದ್ರು.

ಇದೀಗ 'ಮುಂಗಾರು ಮಳೆ 2' ತೆರೆಗೆ ಬರಲು ತಯಾರಾಗಿದ್ದು, ಗಣೇಶ್ ಅವರು ಮತ್ತೆ ಹಳೇ ಇತಿಹಾಸವನ್ನು ಮರುಕಳಿಸುತ್ತಾರಾ ಅನ್ನೋದು ಎಲ್ಲರಲ್ಲಿ ಸಹಜವಾಗಿ ಮೂಡುವ ಪ್ರಶ್ನೆ.


Actress Shraddha Srinath's Guest role in 'Mungaru Male 2'

ಈಗಾಗಲೇ 'ಮುಂಗಾರು ಮಳೆ 2' ಟೀಸರ್ ಅನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು ಇದೀಗ ಚಿತ್ರದ ಆಡಿಯೋ ಬಿಡುಗಡೆಗೆ ಕಾದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಭಾನುವಾರ ಚಿತ್ರದ ಆಡಿಯೋ ಬಿಡುಗಡೆ ಮಾಡಲು ನಿರ್ದೇಶಕ ಶಶಾಂಕ್ ಅವರು ಪ್ಲ್ಯಾನ್ ಮಾಡುತ್ತಿದ್ದಾರೆ.[ಒಂಟೆ ಸವಾರಿ ಮಾಡಿ ಗಾಯ ಮಾಡಿಕೊಂಡ 'ಮಳೆ 2' ಹುಡುಗಿ]


Actress Shraddha Srinath's Guest role in 'Mungaru Male 2'

ಅಂದಹಾಗೆ ಬಹಳ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ. ಈ ಚಿತ್ರದಲ್ಲಿ ಗಣಿ ಅವರ ಜೊತೆ ಡ್ಯುಯೆಟ್ ಹಾಡುವವರು ಕುಡ್ಲದ ಬೆಡಗಿ ನೇಹಾ ಶೆಟ್ಟಿ ಅನ್ನೋದು ಎಲ್ಲರಿಗೂ ತಿಳಿದಿದೆ.


Actress Shraddha Srinath's Guest role in 'Mungaru Male 2'

ಆದರೆ ಇನ್ನೂ ಮೂವರು ನಟಿಯರು ಈ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ, ಇಲ್ಲಿ 'ಮಳೆ ಹುಡುಗಿ'ಯಾಗಿ ನೇಹಾ ಶೆಟ್ಟಿ ಆದರೆ, 'ಮಳೆ ಬೆಡಗಿ'ಯಾಗಿ ಐಂದ್ರಿರಾ ರೇ ಅವರು ಕಾಣಿಸಿಕೊಂಡಿದ್ದಾರೆ. ಹಾಗೂ 'ಮಳೆ ಸೊಬಗಿ'ಯಾಗಿ ನಟಿ ಶಿಲ್ಪಾ ಮಂಜುನಾಥ್ ಮಿಂಚಿದ್ದು, ಇದೀಗ ಇವರೆಲ್ಲರ ಸಾಲಿಗೆ 'ಯು-ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಅವರು 'ಮಳೆ ಅತಿಥಿ'ಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.[ಮುಂಗಾರು 'ಮಳೆ' ಆರ್ಭಟ: ಗಣೇಶ್-ರವಿಚಂದ್ರನ್ ಪರದಾಟ]


Actress Shraddha Srinath's Guest role in 'Mungaru Male 2'

'ಯು-ಟರ್ನ್' ಮೂಲಕ ಎಲ್ಲರ ಮೆಚ್ಚುಗೆ ಪಡೆದ ಶ್ರದ್ಧಾ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇವರು ಯಾವ ಪಾತ್ರ ವಹಿಸಿದ್ದಾರೆ ಅನ್ನೋದು ಇನ್ನೂ ಬಹಿರಂಗ ಆಗದಿದ್ದರೂ, ಇಡೀ ಸಿನಿಮಾದಲ್ಲಿ ಎಲ್ಲೋ ಒಂದು ಕಡೆ ಪ್ರತ್ಯಕ್ಷ ಆಗಿ ಅಚ್ಚರಿ ಮೂಡಿಸಲಿದ್ದಾರೆ.['ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್]


Actress Shraddha Srinath's Guest role in 'Mungaru Male 2'

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂದೆಯ ಪಾತ್ರ ವಹಿಸಿದ್ದು ಇನ್ನೊಂದು ಪ್ಲಸ್ ಪಾಯಿಂಟ್. ನಿರ್ಮಾಪಕ ಜಿ ಗಂಗಾಧರ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ರವಿಶಂಕರ್ ಹಾಗೂ ಸಾಧು ಕೋಕಿಲಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

English summary
'U-Turn' fame kannada actress Shraddha Srinath's Guest role in Kannada Movie 'Mungaru Male 2'. Kannada actor Ganesh, Kannada Actress Neha Shetty, Actress Aindrita Ray, Actress Shilpa Manjunath in the lead role. The movie is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada