For Quick Alerts
  ALLOW NOTIFICATIONS  
  For Daily Alerts

  ಐಟಂ ಡಾನ್ಸ್ ಗೆ ಚಂದ್ರ ಚಕೋರಿ ಶ್ರೀಯಾ ಸರನ್

  By Rajendra
  |

  'ಚಂದ್ರ' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ಚಂದನದ ಗೊಂಬೆ ಶ್ರೀಯಾ ಸರನ್. ಅವರ ವೃತ್ತಿ ಬದುಕು ಈಗ ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಐಟಂ ಡಾನ್ಸ್ ಮಾಡಿದರೆ ಒಂಚೂರು ವೃತ್ತಿ ಬದುಕಿನ ಗ್ರಾಫ್ ಎರಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಶ್ರೀಯಾ.

  ಶ್ರೀಯಾ ಅವರು ತಮ್ಮ ಮನಮೋಹಕ ಲುಕ್ ನಿಂದಾಗಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಅವರು ಸಿಕ್ಕಸಿಕ್ಕ ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸಿದ ಕಾರಣ ಅವರ ಅಭಿಮಾನಿ ಬಳಗದ ಸಂಖ್ಯೆಯೂ ಕಡಿಮೆಯಾಗುತ್ತಾ ಬರುತ್ತಿದೆ.

  ಇನ್ನೂ ತಮ್ಮ ಮೈಮಾಟವನ್ನು ಸೊಂಟದ ಸುತ್ತಳತೆಯನ್ನು ಕಾಪಾಡಿಕೊಂಡು ಬಂದಿರುವ ಶ್ರೀಯಾ ಅವರಿಗೆ ಸೊಂಟ ಬಳುಕಿಸುವುದೇನು ಕಷ್ಟದ ಕೆಲಸವಲ್ಲ. ಹಾಗಾಗಿ ಈಗ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

  ಈ ಬಗ್ಗೆ ಅವರು ಸ್ಪಷ್ಟವಾದ ಸಂದೇಶವನ್ನೂ ನೀಡಿದ್ದಾರೆ. "ಐಟಂ ಡಾನ್ಸ್ ಮಾಡುವುದರಿಂದ ತಮ್ಮ ವೃತ್ತಿ ಬದುಕಿಗೆ ಹೊಡೆತ ಬೀಳುತ್ತದೆ ಎಂದು ತಾವು ಭಾವಿಸುತ್ತಿಲ್ಲ. ನನ್ನ ವೃತ್ತಿ ಬದುಕು ಇನ್ನೂ ಮುಗಿದಿಲ್ಲ. ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳಲು ನನಗೆ ಇಷ್ಟವಿಲ್ಲ" ಎಂದಿದ್ದಾರೆ. (ಏಜೆನ್ಸೀಸ್)

  English summary
  Shriya Saran, who had impressed audience with her recent Kannada movie Chandra, will be seen in an item number soon. It is said that the actress opted for the special number in order to save her sagging career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X