»   » ಕಿಚ್ಚನ ಖದರಿಗೆ ಜೊತೆಯಾದ ಶೃತಿ ಹರಿಹರನ್

ಕಿಚ್ಚನ ಖದರಿಗೆ ಜೊತೆಯಾದ ಶೃತಿ ಹರಿಹರನ್

Posted By:
Subscribe to Filmibeat Kannada
ಕಿಚ್ಚನ ಖದರಿಗೆ ಜೊತೆಯಾದ ಶೃತಿ ಹರಿಹರನ್ | Filmibeat Kannada

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹಗಲಿನಲ್ಲಿ ಅಂಬಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದರೆ, ರಾತ್ರಿಯಲ್ಲಿ ಸುದೀಪ್ ಅಭಿನಯದ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ. ನಿನ್ನೆಯಿಂದ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿ ಆಗಿದ್ದು ಕಿಚ್ಚ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು ಅದರ ಬಗ್ಗೆಯೇ ಚರ್ಚೆ ನಡೆಯತ್ತಿರುವಾಗಲೇ ನಟಿ ಶೃತಿ ಹರಿಹರನ್ ಲುಕ್ ರಿವಿಲ್ ಆಗಿದೆ.

ಅಭಿನಯದ ಮೊದಲ ಚಿತ್ರದಿಂದಲೂ ಎಂಥದ್ದೇ ಪಾತ್ರವಾದರೂ ನೀರು ಕುಡಿದಂತೆ ಸರಾಗವಾಗಿ ಅಭಿನಯಿಸಿ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿರುವ ನಟಿ ಶೃತಿ ಹರಿಹರನ್ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಪಕ್ಕಾ ಹಳ್ಳಿ ಬೆಡಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್

ಎರಡು ಜಡೆ , ತಲೆ ತುಂಬಾ ಹೂ ಅದಕ್ಕೂ ಪಕ್ಕಾ ಮ್ಯಾಚ್ ಆಗುವಂತೆ ಲಂಗಾ ದಾವಣಿ ಹಾಕಿಕೊಂಡಿರುವ ಶೃತಿ ಈ ಬಾರಿ ಹಳ್ಳಿ ಹೈದರ ಮನಸ್ಸು ಗೆಲ್ಲಲಿದ್ದಾರೆ. ಫಸ್ಟ್ ಲುಕ್ ನಲ್ಲೇ ಸಾಕಷ್ಟು ಜನರನ್ನ ಮೋಡಿ ಮಾಡಿರುವ ಶೃತಿ ಅಭಿನಯ ಮೂಲಕ ಪ್ರೇಕ್ಷಕರನ್ನ ಜಾದು ಮಾಡುವುದು ಕನ್ಫರ್ಮ್ ಆಗಿದೆ.

Actress Shruthi Harihan is part of the ambhi ning vaisaytho movie

ಇನ್ನು ಕಿಚ್ಚನ ಜೊತೆ ಇದೇ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದು ಇಬ್ಬರ ಹೈಟು ಸಖತ್ತಾಗಿ ಮ್ಯಾಚ್ ಆಗುತ್ತೆ ಅನ್ನುವುದು ಅಭಿಮಾನಿಗಳ ಅಭಿಪ್ರಾಯ. ಅದಷ್ಟೇ ಅಲ್ಲದೆ ಇಬ್ಬರು ತೆರೆ ಮೇಲೆ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ. ಆನ್ ಸ್ಕ್ರೀನ್ ಈ ಜೋಡಿ ಸಕ್ಸಸ್ ಆಗುವುದು ಈಗಲೇ ಕನ್ಫರ್ಮ್ ಆಗಿದೆ.

English summary
Kannada Actress Shruthi Harihan is part of the ambhi ning vaisaytho movie. Shruti is going to appear in a different look in the film GuruDutt Ganiga is directing the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada