»   » ನಟಿ ಶ್ರುತಿ ಮೇಲೆ ದಾಳಿ, ಎಫ್ಐಆರ್ ದಾಖಲು

ನಟಿ ಶ್ರುತಿ ಮೇಲೆ ದಾಳಿ, ಎಫ್ಐಆರ್ ದಾಖಲು

By: ಉದಯರವಿ
Subscribe to Filmibeat Kannada

ಕೆಲದಿನಗಳ ಹಿಂದೆ ಬಾಲಿವುಡ್ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಮೇಲೆ ಅಪರಿಚಿತನೊಬ್ಬ ದಾಳಿ ಮಾಡಿದ್ದ. ಈ ಘಟನೆ ಮುಂಬೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ನಡೆದಿತ್ತು. ಆದರೆ ಈ ಘಟನೆ ಸಂಭವಿಸಿದಾಗ ಎಫ್ಐಆರ್ ದಾಖಲಾಗಿರಲಿಲ್ಲ.

ಈಗ ಮುಂಬೈನ ಬಾಂದ್ರಾ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಘಟನೆಯಿಂದ ಶಾಕ್ ಗೆ ಗುರಿಯಾದ ಶ್ರುತಿ ಹಾಸನ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿತ್ತು.

ಈ ಘಟನೆ ತಿಳಿಯುತ್ತಿದ್ದಂತೆ ಇತರೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶ್ರುತಿ ಅವರಿಗೆ ಟ್ವಿಟ್ಟರ್ ಮೂಲಕ ಮೆಸೇಜ್ ಕಳುಹಿಸಿ ಅವರನ್ನು ಸಮಾಧಾನ ಮಾಡುವ ಪ್ರಯತ್ನಗಳನ್ನು ಮಾಡಿದರು.

ಈ ಘಟನೆಗೆ ಯಾರು ಕಾರಣಕರ್ತರು?

ಶ್ರುತಿ ಹಾಸನ್ ಮೇಲಿನ ದಾಳಿಯನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ದಾಳಿ ಮಾಡಿದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಈ ಘಟನೆಗೆ ಯಾರು ಕಾರಣಕರ್ತರು? ಯಾಕಾಗಿ ಈ ರೀತಿ ದಾಳಿ ನಡೆಯಿತು? ಎಂಬ ಕೋನಗಳಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ತಲೆ ತುಂಬ ಹಲವಾರು ಪ್ರಶ್ನೆಗಳು

ದಾಳಿ ಮಾಡಿದಾತ ಈ ಹಿಂದೆ ಶ್ರುತಿ ಅವರನ್ನು ಭೇಟಿ ಮಾಡಿದ್ದನೇ? ಅವರನ್ನು ಮುಜುಗರಕ್ಕೆ ಈಡು ಮಾಡಿದ ಸಂದರ್ಭಗಳೇನಾದರೂ ಇವೆಯೇ? ಎಂಬ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ದಾಳಿಗೆ ಟ್ವಿಟ್ಟರ್ ದಾರಿ ಮಾಡಿಕೊಡ್ತಾ?

ಶ್ರುತಿ ಅವರ ಮೇಲೆ ದಾಳಿ ಮಾಡಿದ ವ್ಯಕ್ತಿ ಈ ಹಿಂದೆ ಹಲವಾರು ಬಾರಿ ಸೆಟ್ಸ್ ನಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿದೆ. ಇನ್ನು ಶ್ರುತಿ ಅವರು ಟ್ವಿಟ್ಟರ್ ನಲ್ಲಿ ಬಹಳ ಆಕ್ಟೀವ್ ತಾರೆ. ತಾನು ಎಲ್ಲಿದ್ದೇನೆ, ಈಗೇನು ಮಾಡುತ್ತಿದ್ದೇನೆ ಎಂಬಂತಹ ಸಣ್ಣಪುಟ್ಟ ಸಂಗತಿಗಳನ್ನು ಆಗಿಂದಾಗ್ಗೆ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.

ಸಮಯಪ್ರಜ್ಞೆಯಿಂದ ಎಸ್ಕೇಪ್ ಆಗಿದ್ದರು

ಬಹುಶಃ ಇದೇ ಅಪರಿಚಿತನಿಗೆ ಶ್ರುತಿ ಅವರು ಆಹ್ವಾನಕೊಟ್ಟಂತಾಗಿದೆ. ಶ್ರುತಿ ಹಾಸನ್ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಅಪರಿಚಿತ ಅಲ್ಲಿಗೆ ಬಂದ ಅವರ ಮೇಲೆ ದಾಳಿ ಮಾಡಿದ್ದಾನೆ. ಆದರೆ ಶ್ರುತಿ ಅವರು ಸಮಯಪ್ರಜ್ಞೆಯಿಂದ ಎಸ್ಕೇಪ್ ಆಗಿದ್ದರು.

ವೆಲ್ ಕಂ ಬ್ಯಾಕ್ ಚಿತ್ರದಲ್ಲಿ ಬಿಜಿಯಾಗಿರುವ ಶ್ರುತಿ

ಸದ್ಯಕ್ಕೆ ಶ್ರುತಿ ಹಾಸನ್ ಅವರು 'ವೆಲ್ ಕಂ ಬ್ಯಾಕ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನೀಸ್ ಬಜ್ಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫಿರೋಜ್ ನದಿಯದ್ವಾಲಾ ನಿರ್ಮಾಪಕರು. ಜಾನ್ ಅಬ್ರಹಾಂ, ನಾನಾ ಪಾಟೇಕರ್, ಅನಿಲ್ ಕಪೂರ್, ಪರೇಶ್ ರಾವಲ್ ಮುಂತಾದವರಿದ್ದಾರೆ.

English summary
A few days back, a fan of Shruti Haasan managed to come up to the door of her flat. While Shruti was able to save herself, the scary incident has shaken her up. Three days after the incident, she finally summed up the courage to file an FIR on Wednesday at Bandra police station.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada