»   » ಕಿಡ್ನಿ ವೈಫಲ್ಯ; ತಾರೆ ಶುಭಾ ಫುತೇಲಾ ಅಕಾಲ ಮರಣ

ಕಿಡ್ನಿ ವೈಫಲ್ಯ; ತಾರೆ ಶುಭಾ ಫುತೇಲಾ ಅಕಾಲ ಮರಣ

Posted By:
Subscribe to Filmibeat Kannada
ಕಿಡ್ನಿ ವೈಫಲ್ಯ ಹಾಗೂ ಸುದೀರ್ಘ ಸಮಯದಿಂದ ಜಾಂಡೀಸ್ ನಿಂದ ಬಳಲುತ್ತಿದ್ದ ತಾರೆ ಹಾಗೂ ರೂಪದರ್ಶಿ ಶುಭಾ ಫುತೇಲಾ ಅವರು ಬೆಂಗಳೂರಿನಲ್ಲಿ ಸೋಮವಾರ (ಅ.22) ರಾತ್ರಿ ಸಾವಪ್ಪಿದ್ದಾರೆ. ಅವರಿಗೆ ಇನ್ನೂ ಕೇವಲ 21ರ ಪ್ರಾಯ. ಇದುವರೆಗೂ ಶುಭಾ ಒಂದೇ ಒಂದು ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ ಅವರು ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗಷ್ಟೇ ಅವರಿಗೆ ಜಾಂಡೀಸ್ ಆಗಿತ್ತು. ಇನ್ನೇನು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು ಎಂದುಕೊಳ್ಳುವಷ್ಟರಲ್ಲೇ ಅವರ ಆರೋಗ್ಯ ಮತ್ತೆ ದಿಢೀರ್ ಎಂದು ಕೈಕೊಟ್ಟಿತು. ಕಳೆದ ವಾರ ಅವರು ಕೋಮಾ ಹಂತಕ್ಕೆ ಹೋದರು.

ಶುಭಾ ಅವರಿಗೆ ತಂದೆತಾಯಿ ಹಾಗೂ ಒಬ್ಬ ಸಹೋದರ ಒಬ್ಬ ಸಹೋದರಿ ಇದ್ದಾರೆ. ಕೆಲ ಸಮಯದ ಹಿಂದೆ ಆಕೆಗೆ ತೆಲುಗು ಚಿತ್ರದಲ್ಲೂ ಅಭಿನಯಿಸುವ ಆಫರ್ ಬಂದಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಆ ಚಿತ್ರವನ್ನು ತಿರಸ್ಕರಿಸಿದ್ದರು.

ತಮಿಳು, ತೆಲುಗು ಚಿತ್ರಗಳಲ್ಲಿ ತೊಡಗಿಕೊಂಡಿದ್ದರೂ ಶುಭಾ ಅವರು ಬೆಂಗಳೂರಿನಲ್ಲೇ ವಾಸವಾಗಿದ್ದರು. ಕನ್ನಡ ಚಿತ್ರದಲ್ಲೂ ಅಭಿನಯಿಸಲು ಆಫರ್ ಬಂದಿತ್ತು. ಆದರೆ ಡೆಟ್ಸ್ ಹೊಂದಾಣಿಕೆಯಾಗದೆ ಆ ಚಿತ್ರದಿಂದ ದೂರ ಸರಿದಿದ್ದರು ಶುಭಾ.

ಯೋಗರಾಜ್ ಭಟ್ಟರ 'ಡ್ರಾಮಾ', ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಜಾದೂ' (ಜೈ ಬಜರಂಗಬಲಿ) ಚಿತ್ರದಲ್ಲೂ ಅಭಿನಯಿಸಲು ಆಫರ್ ಬಂದಿತ್ತು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿರುವ ಶುಭಾ 2010ರ ಮಿಸ್ ಸೌತ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದರು. (ಏಜೆನ್ಸೀಸ್)

English summary
South Indian actress and model Shubha Phutela has has passed away in Apollo Hospital Bangalore on Monday (October 22) night after a prolonged kidney problem and jaundice. She was 21.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada