»   » ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

ಈ ವರ್ಷ ಭಾರಿ ಚರ್ಚೆ ಹಾಗೂ ಸುದ್ದಿಗೆ ಗ್ರಾಸವಾದ ನಟಿ ಶ್ವೇತಾ ಬಸು ಪ್ರಸಾದ್. ತಾವು ಮಾಡದ ತಪ್ಪಿಗೆ ಅವರು ಶಿಕ್ಷೆ ಅನುಭವಿಸುವಂತಾಗಿತ್ತು. ವೇಶ್ಯಾವಾಟಿಕೆ ಜಾಲದಲ್ಲಿ ಸಕ್ರಿಯರಾಗಿದ್ದ ಆರೋಪದಡಿ ಶ್ವೇತಾ ಬಂಧನಕ್ಕೊಳಲಾಗಿ ಪುನರ್ವಸತಿ ಕೇಂದ್ರದಲ್ಲಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಇದೀಗ ಅವರು ಬಿಡುಗಡೆಯಾಗಿ ಸ್ವತಂತ್ರಹ ಹಕ್ಕಿಯಾಗಿ ಹಾರಾಡುತ್ತಿದ್ದಾರೆ. ಇದೀಗ ಅವರು ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಶ್ವೇತಾ ಅವರು ಐಟಂ ಡಾನ್ಸ್ ಮಾಡಲಿದ್ದಾರಂತೆ. [ನಟಿ ಶ್ವೇತಾ ಬಸು ಪ್ರಸಾದ್ ಗೆ ಬಿಡುಗಡೆ ಭಾಗ್ಯ]

ಇದಕ್ಕಾಗಿ ಬಳುಕುವ ಬಳ್ಳಿಯಂತೆ ತಮ್ಮ ಮೈಮಾಟವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಶ್ವೇತಾ ಅವರ ಹೊಸ ಲುಕ್ಕನ್ನು ನೋಡಬಹುದು. ಸ್ಲೈಡ್ ನಲ್ಲಿ ನೋಡಿ ಶ್ವೇತಾ ಅವರ ಕಲರ್ ಫುಲ್ ಫೋಟೋಗಳು.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಕೇವಲ ಆಕ್ಟಿಂಗ್ ನಲ್ಲಷ್ಟೇ ಅಲ್ಲದೆ ಆಕರ್ಷಕ ಮೈಮಾಟದ ಬೆಡಗಿ ಶ್ವೇತಾ ಬಸು ಪ್ರಸಾದ್. ಆರಂಭದ ಚಿತ್ರಗಳು ಹಿಟ್ ಆದರೂ ಆ ಬಳಿಕ ಶ್ವೇತಾ ಅಭಿನಯದ ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಅವಕಾಶಗಳಿಲ್ಲದೆ ಕಡೆಗೆ ಐಟಂ ಡಾನ್ಸ್ ಗೆ ಇಳಿಯಬೇಕಾಯಿತು. ಈ ಮಧ್ಯೆ ವೇಶ್ಯಾವಾಟಿಕೆ ಜಾಲದಲ್ಲಿ ಸಕ್ರಿಯರಾದ ಆರೋಪಕ್ಕೆ ಗುರಿಯಾಗಬೇಕಾಯಿತು.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ವೇಶ್ಯಾವಾಟಿಕೆ ಪ್ರಕರಣದಲ್ಲಿ ನ್ಯಾಯಾಲಯ ಕ್ಲೀನ್ ಚಿಟ್ ಕೊಡುವ ಮೂಲಕ ಶ್ವೇತಾ ಬಸು ಪ್ರಸಾದ್ ಅವರಿಗೆ ಕೊಂಚ ನಿರಾಳ ಸಿಕ್ಕಂತಾಯಿತು. ಇದೀಗ ಮತ್ತೆ ಐಟಂ ಸಾಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

23 ವರ್ಷ ವಯಸ್ಸಿನ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಶ್ವೇತಾ ಅವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪ ಹೊತ್ತಿದ್ದರು. ಕೆಳ ಹಂತದ ನ್ಯಾಯಾಲಯ ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸುವಂತೆ ಸೆ.30,2014ರಂದು ಆದೇಶಿಸಿತ್ತು.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಅವರು ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.

ಶ್ವೇತಾ ಬಸು ಪ್ರಸಾದ್ ಸೆಕ್ಸಿ ಲುಕ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್

ಆರು ತಿಂಗಳ ಕಾಲ ಗೃಹ ಬಂಧನ ಅನುಭವಿಸಿದರೆ ನನ್ನ ಮಗಳ ವೃತ್ತಿ ಬದುಕಿನ ಕಥೆ ಏನು ಎಂದು ಶ್ವೇತಾ ಅವರ ತಾಯಿ ಶರ್ಮಿಷ್ಠಾ ಅವರು ಕೋರ್ಟ್ ಮೊರೆ ಹೊಕ್ಕಿದ್ದರು.

English summary
Actress Shweta Basu Prasad hit the headlines for all the wrong reasons and she got support and offers from all the corners. The actress is getting ready to start her second innings in Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada