»   » ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಾದ ಶ್ವೇತಾ ಶ್ರೀವಾತ್ಸವ್

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಾದ ಶ್ವೇತಾ ಶ್ರೀವಾತ್ಸವ್

Posted By:
Subscribe to Filmibeat Kannada
ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಾದ ಶ್ವೇತಾ ಶ್ರೀವಾತ್ಸವ್ | Filmibeat Kannada

ತೆರೆ ಮೇಲೆ ಬೋಲ್ಡ್ ಆಗಿ ಅಭಿನಯಿಸಿ ನಂತರ ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ದಾನಮ್ಮನಾಗಿ ಕಾಣಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್ ಸೆಕೆಂಡ್ ಇನ್ನಿಂಗ್ಸ್ ಗಾಗಿ ತಯಾರಿ ಪ್ರಾರಂಭ ಮಾಡಿದ್ದಾರೆ.

ಮಗು ಆದ ನಂತರವೂ ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಳ್ಳುವ ಆಶಯವನ್ನ ಇಟ್ಟುಕೊಂಡಿದ್ದಾರೆ ನಟಿ ಶ್ವೇತಾ. ಈಗಾಗಲೇ ಕಥೆ ಕೇಳೋದಕ್ಕೆ ಪ್ರಾರಂಭ ಮಾಡಿದ್ದು, ಮಗು ಆದ ಮಾತ್ರಕ್ಕೆ ತಾಯಿಯ ಪಾತ್ರ ಅಥವಾ ಪೋಷಕ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸುಳ್ಳು ಎಂದಿದ್ದಾರೆ.

ಮಗುವಿನ ಹಾರೈಕೆ ಜೊತೆಯಲ್ಲಿ ಶ್ವೇತಾ ಯೋಗಭ್ಯಾಸ ಶುರು ಮಾಡಿದ್ದಾರೆ. ಮೊದಲಿಗಿಂದಲೂ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಬೇಕಾಗಿರುವ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ತೆರೆ ಮೇಲೆ ಬರಲಿದ್ದಾರೆ.

Actress Shweta Srivastav is preparing for the second innings in film industry

ಈಗಾಗಲೇ ಕೇಳಿರುವ ಕಥೆಗಳಲ್ಲಿ ವಿಭಿನ್ನ ಎನ್ನಿಸಿರುವ ಪಾತ್ರವನ್ನ ಒಪ್ಪಿಕೊಳ್ಳಲು ನಿರ್ಧರಿಸಿದ್ದು ಯಾವ ಕಥೆಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವುದು ಮಾತ್ರ ಬಿಟ್ಟುಕೊಟ್ಟಿಲ್ಲ.

Actress Shweta Srivastav is preparing for the second innings in film industry

ಮನೆಯವರಿಂದಲೂ ಶ್ವೇತಾ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಸಹಕಾರ ಸಿಕ್ಕಿರುವುದು ಮತ್ತಷ್ಟು ಖುಷಿ ತಂದಿದ್ಯಂತೆ. ಒಟ್ಟಾರೆ ಈ ಬಾರಿ ಅಭಿಮಾನಿಗಳು ಶ್ವೇತಾ ಅವರನ್ನ ಮತ್ತಷ್ಟು ವಿಭಿನ್ನವಾಗಿ ತೆರೆ ಮೇಲೆ ನೋಡಬಹುದಾಗಿದೆ.

English summary
Actress Shweta Srivastav is preparing for the second innings, Shweta has start already heard the stories, Shweta has begun Yoga practice for the next film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada