»   » ಅಕುಲ್ ಬಾಲಾಜಿಗೆ ಶ್ವೇತಾ ಬಸು ನಾಯಕಿ!

ಅಕುಲ್ ಬಾಲಾಜಿಗೆ ಶ್ವೇತಾ ಬಸು ನಾಯಕಿ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಈಟಿವಿ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ನಲ್ಲಿ ಮಂಗನಾಟವಾಡುತ್ತಾ ರಿಯಾಲಿಟಿ ಶೋನ ನಿರೂಪಣೆಗೆ ಹೊಸ ಅರ್ಥ ತಂದುಕೊಟ್ಟಿರುವ ತೆಲುಗು ಮಿಶ್ರಿತ ಕನ್ನಡ ಮಾತಾಡುವ ಅಕುಲ್ ಬಾಲಾಜಿ ಅವರಿಗೆ ವಿವಾದಿತ ನಟಿ ಶ್ವೇತಾ ಬಸು ಜೋಡಿಯಾಗಲಿದ್ದಾರಂತೆ.

ಟಿವಿ ಶೋಗಳಲ್ಲಿ ನಿರತವಾಗಿರುವ ಅಕುಲ್ ಅವರಿಗೆ ಸಿನಿಮಾ ಆಫರ್ ಗಳು ಬರುತ್ತಿರುವುದು ಸುಳ್ಳಲ್ಲ. ಹೀಗೆ ತಗಲಾಕಿಕೊಂಡಿರುವ ಸಿನಿಮಾ ಹೆಸರೇ 'ದೇವ್ರವ್ನೆ ಬುಡು ಗುರು'. ಈ ಚಿತ್ರಕ್ಕೆ ಟಾಲಿವುಡ್ ತಾರೆ, ಬಾಲ ನಟಿಯಾಗಿ ರಾಷ್ಟ್ರಪ್ರಶಸ್ತಿ ಗೆದ್ದಿರುವ ಶ್ವೇತಾ ಬಸುರನ್ನು ಕರೆಸಲು ನಿರ್ದೇಶಕ ಪ್ರಥಮ್ ಸಿದ್ಧತೆ ನಡೆಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಸೆಟ್ಟೇರಿದ ಚಿತ್ರದ ಬಗ್ಗೆ ಸುದ್ದಿ ಇರಲಿಲ್ಲ. ಈಗ ಶ್ವೇತಾ ಬಸು ಹೀರೋಯಿನ್ ಎಂಬ ಸುದ್ದಿಯೊಂದಕ್ಕೆ ಮತ್ತೆ ದೇವ್ರಾಣೆ ಚಿತ್ರ ಉಸಿರಾಡುತ್ತಿರುವುದನ್ನು ಗಮನಿಸಬಹುದು.[ಶ್ವೇತಾ ಬಸು ಪ್ರಸಾದ್ ಗೆ ಕಡೆಗೂ ಕರೆಬಂತು]

Actress Shwetha Basu pair with Akul Balaji in Devravne Budu Gur

ಈ ಚಿತ್ರದಲ್ಲಿ ಶ್ವೇತಾಬಸು ಪತ್ರಕರ್ತೆಯಾಗಿ ತನಿಖಾ ವರದಿಯನ್ನು ಮಾಡುತ್ತಾರಂತೆ. ಆರು ದಿನಗಳ ಶೂಟಿಂಗ್ ಗೆ ಕಾಲ್ ಶೀಟ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ವೇಶ್ಯಾವಾಟಿಕೆ ಕೇಸ್ ಕರಾಳ ಅಧ್ಯಾಯದ ನಂತರ ಮತ್ತೊಮ್ಮೆ ಬಣ್ಣದ ಬದುಕಿಗೆ ಮರಳಿರುವ ಶ್ವೇತಾ ಅವರು ಕನ್ನಡದ ಈ ಚಿತ್ರದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಅದರೆ, ಅಕುಲ್ ಬಾಲಾಜಿ ಯಾವಾಗ ಶೂಟಿಂಗ್ ಗೆ ಬರುತ್ತಾರೋ ಗೊತ್ತಿಲ್ಲ.

ಲೂಸಿಯಾ ಚಿತ್ರ ನಿರ್ಮಾಣಕ್ಕೆ ಜನರಿಂದ ಹಣ ಸಂಗ್ರಹಿಸಿದಂತೆ ನಿರ್ದೇಶಕ ಪ್ರಥಮ್ ಅವರು ಈ ಚಿತ್ರಕ್ಕಾಗಿ ತಮ್ಮ ಸ್ನೇಹಿತರಿಂದ ಹಣ ಸಂಗ್ರಹಿಸಿ ಬಂಡವಾಳ ಹೂಡಿದ್ದಾರೆ. ಅಭಿನಯ ತರಂಗದ ಪ್ರತಿಭೆ ಇಶಾ ರಂಗನಾಥ್ ಕೂಡಾ ಈ ಚಿತ್ರದಲ್ಲಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜೇಶ್ ರಾಮನಾಥನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಶ್ವೇತಾ-ಅಕುಲ್ ಜೋಡಿ ಏನು ಮೋಡಿ ಮಾಡುವುದೋ ಕಾದು ನೋಡಬೇಕಿದೆ.

ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು.

English summary
Actress Shwetha Basu is all set to act in a Kannada film called 'Devravne Budu Guru'. The film stars Akul Balaji in lead role and was launched a few months back.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada