»   » ಶ್ವೇತಾ ಶ್ರೀವಾತ್ಸವ್ ವೈಯಕ್ತಿಕ ಜೀವನದಲ್ಲಿ ಗುಡ್ ನ್ಯೂಸ್

ಶ್ವೇತಾ ಶ್ರೀವಾತ್ಸವ್ ವೈಯಕ್ತಿಕ ಜೀವನದಲ್ಲಿ ಗುಡ್ ನ್ಯೂಸ್

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಕಲಾಭಿಮಾನಿಗಳಿಗೆ ಮನಸ್ಸು ಕದ್ದ ನಟಿ ಶ್ವೇತಾ ಶ್ರೀವಾತ್ಸವ್. ಇತ್ತೀಚೆಗಷ್ಟೆ 'ಕಿರಗೂರಿನ ಗಯ್ಯಾಳಿಗಳು' ಅಂತಹ ಅದ್ಭುತ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ನಂತರ ಶ್ವೇತಾ ಬೇರೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ.['ಸಿಂಪಲ್ ಹುಡ್ಗಿ' ಶ್ವೇತಾ ಶ್ರೀವಾತ್ಸವ್ ಡೈರೆಕ್ಟರ್ ಕ್ಯಾಪ್ ತೊಡೋದು ಯಾವಾಗ?]

ಹೌದು, ಸಿಂಪಲ್ ಶ್ವೇತಾ ಅವರು ಸದ್ಯ, ತಮ್ಮ ಬದುಕಿನ ಅತ್ಯಂತ ಸುಂದರ ದಿನಗಳನ್ನು ಸವಿಯುತ್ತಿದ್ದಾರಂತೆ. ಹೀಗಾಗಿ, ಯಾವ ಚಿತ್ರವನ್ನ ಒಪ್ಪಿಕೊಂಡಿಲ್ಲವಂತೆ. ಏನಪ್ಪಾ ಅದು ಜೀವನದ ಅತ್ಯಂತ ಸುಂದರ ದಿನಗಳು ಅಂತ ಯೋಚನೆ ಮಾಡ್ತಿದ್ದೀರಾ? ಶ್ವೇತಾ ಶ್ರೀವಾತ್ಸವ್ ತಮ್ಮ ಚೊಚ್ಚಲ ಮಗುವಿಗೆ ತಾಯಿಯಾಗಲಿದ್ದಾರೆ.

ಸಿಂಪಲ್ ಹುಡುಗಿ ತಾಯಿ ಆಗುತ್ತಿದ್ದಾರೆ!

ತಮ್ಮ ಬೋಲ್ಡ್ ಆಕ್ಟಿಂಗ್ ಮೂಲಕ ಗಮನ ಸೆಳೆದಿದ್ದ ನಟಿ ಶ್ವೇತಾ ಶ್ರೀವತ್ಸವ್ ತಾಯಿ ಆಗುತ್ತಿದ್ದಾರೆ. ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡುವ ಸಂತಸದಲ್ಲಿದ್ದಾರೆ.[ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್]

'ಫೇಸ್ ಬುಕ್'ನಲ್ಲಿ ಸಂತಸ ಹಂಚಿಕೊಂಡ ನಟಿ

ಈ ವಿಷ್ಯವನ್ನ ಖುದ್ದು ನಟಿ ಶ್ವೇತಾ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ಮತ್ತು ಶ್ವೇತಾ ಜೊತೆಯಾಗಿರುವ ಫೋಟೋ ಪೋಸ್ಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.

ತಾಯಿ ಆದ ಸಂತಸದಲ್ಲಿ ಶ್ವೇತಾ

''ನಾನು ಗರ್ಭೀಣಿ ಎಂದು ಹೇಳಲು ತುಂಬಾ ಸಂತಸವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮನೆಗೆ ಪುಟ್ಟ ಜೀವ ಬರಲಿದೆ. ನಾನು ಮತ್ತು ನನ್ನ ಪತಿ ಆ ಜೀವವನ್ನ ಸ್ವಾಗತಿಸಲು ಕಾಯುತ್ತಿದ್ದೇವೆ. ನಿಮ್ಮ ಆರ್ಶೀವಾದ ಹಾಗೂ ಹಾರೈಕೆ ನಮ್ಮ ಮೇಲೆ ಇರಲಿ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಮಹಿಳಾ ದಿನಾಚರಣೆ ತುಂಬಾ ಸ್ಪೆಷಲ್!

''ಈ ಸಲದ ಮಹಿಳಾ ದಿನಾಚರಣೆಯನ್ನು ತಮ್ಮ ಸ್ಪೆಷಲ್‌ ವ್ಯಕ್ತಿಯಾದ ಪತಿ ಅಮಿತ್‌ ಶ್ರೀವಾತ್ಸವ್ ಜೊತೆ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಅವರು ಜೀವನದ ಪ್ರತಿ ಹಂತದಲ್ಲೂ ಬೆಂಬಲ ನೀಡಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಸದ್ಯಕ್ಕಿಲ್ಲ ಶ್ವೇತಾ ಅವರ ಚಿತ್ರಗಳು

ಸದ್ಯಕ್ಕಂತೂ ದೊಡ್ಡ ಬ್ರೇಕ್ ತೆಗೆದುಕೊಳ್ತಿರೋ ಶ್ವೇತಾ ಅವರಿಂದ ಯಾವುದೇ ಚಿತ್ರಗಳು ಇಲ್ಲ. ತದನಂತರ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಸದ್ಯಕ್ಕಂತೂ ಏನೂ ನಿರ್ಧರಿಸಿಲ್ಲ ಎಂದು ಕುತೂಹಲ ಮೂಡಿಸಿದ್ದಾರೆ.

English summary
'Kiragoorina Gayaligallu' actress Shwetha Srivatsav has been glowing off late, then there is actually a big reason behind it. yes, The actress is Pragnant, She and her husband, Amith Srivatsav, are preparing for the arrival of their first child.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada