»   » ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ : ಸಿಂಧು ಮೆನನ್

ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ : ಸಿಂಧು ಮೆನನ್

Posted By:
Subscribe to Filmibeat Kannada

ಕನ್ನಡ ಸಿನಿಮಾ ತಾರೆ ಸಿಂಧು ಮೆನನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಸಿನಿಮಾ ಪ್ರಿಯರನ್ನು ಹಾಗೂ ಅಭಿಮಾನಿಗಳನ್ನು ಕೆಲಕಾಲ ತಲ್ಲಣಗೊಳಿಸಿತು. ಆದರೆ ಈ ಸ್ವತಃ ಸಿಂಧು ಮೆನನ್ ಅವರು ತಾವು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಯಿತು.

ಪ್ರಸ್ತುತ ಅವರು ಲಂಡನ್ ನಲ್ಲಿದ್ದು ಅಲ್ಲಿಂದಲೇ ಮಾಧ್ಯಮಗಳಿಗೆ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. "ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ಲಂಡನ್ ನಲ್ಲಿ ಸುರಕ್ಷಿತವಾಗಿದ್ದೇನೆ. ತಾನು ಆತ್ಮಹತ್ಯೆಗೆ ಶರಣಾಗುವಷ್ಟು ಅಧೀರಳಲ್ಲ" ಎಂದಿದ್ದಾರೆ.


ತೆಲುಗು ಹಾಗೂ ತಮಿಳು ಮಾಧ್ಯಮಗಳಲ್ಲಿ ಸಿಂಧು ಮೆನನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಸ್ವಂತ ಚಿತ್ರ ನಿರ್ಮಾಣಕ್ಕಾಗಿ ಸಾಕಷ್ಟು ಸಾಲವನ್ನೂ ಮಾಡಿದ್ದರು ಎಂಬ ಅಂತೆಕಂತೆ ಸುದ್ದಿಗಳು ಹರಿದಾಡಿದ್ದವು.

ಸಾಫ್ಟ್ ವೇರ್ ಇಂಜಿನಿಯರ್ ಪ್ರಭು ಅವರನ್ನು ವರಿಸಿದ ಬಳಿಕ ಸಿಂಧು ಮೆನನ್ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಪ್ರಸ್ತುತ ಅವರು ಲಂಡನ್ ನಲ್ಲಿರುವುದಾಗಿ ತಿಳಿಸಿದ್ದಾರೆ. ಆದರೆ ತೆಲುಗು ಮಾಧ್ಯಗಳಲ್ಲಿ ಸಿಂಧು ಅವರು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಅವರ ಅಭಿಮಾನಿಗಳನ್ನು ದಂಗುಬಡಿಸಿತ್ತು.

ಸಿಂಧು ಮೆನನ್ ಅವರು ಕನ್ನಡದ ರಶ್ಮಿ, ಪ್ರೇಮ ಪ್ರೇಮ ಪ್ರೇಮ, ನಂದಿ, ಖುಷಿ, ಧರ್ಮ, ಜ್ಯೇಷ್ಠ, ಯಾರೇ ನೀ ಹುಡುಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ಅವರು ಎಲ್ಲೇ ಇರಲಿ ಕ್ಷೇಮವಾಗಿದ್ದಾರಲ್ಲಾ ಅಷ್ಟೇ ಸಾಕು ಎಂಬುದು ಅವರ ಅಭಿಮಾನಿಗಳ ಹಾರೈಕೆ. (ಏಜೆನ್ಸೀಸ್)

English summary
Kannada actress Sindhu Menon denies suicide attempt. The actress clarifies I'm not admitted in a private hospital. Earlier the speculations rounds that she attempted suicide by consuming excess sleeping pills.
Please Wait while comments are loading...