»   » ಮಧುಚಂದ್ರ ಮುಗಿಸಿಕೊಂಡು ಬಂದ ತಾರೆ ಸ್ನೇಹಾ

ಮಧುಚಂದ್ರ ಮುಗಿಸಿಕೊಂಡು ಬಂದ ತಾರೆ ಸ್ನೇಹಾ

Posted By:
Subscribe to Filmibeat Kannada

ತಾರೆ ಸ್ನೇಹಾ ಹಾಗೂ ಪ್ರಸನ್ನ ಅವರು ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂತಿರುಗಿದ್ದಾರೆ. ಮಧುಚಂದ್ರಕ್ಕೆಂದು ಅವರು ಆಯ್ದುಕೊಂಡ ರಮಣೀಯ ಸ್ಥಳ ನ್ಯೂಜಿಲ್ಯಾಂಡ್. ಅಲ್ಲಿನ ಸುಂದರ ತಾಣಗಳಲ್ಲಿ ಎರಡು ವಾರಗಳ ಕಾಲ ಈ ಜೋಡಿ ಹಕ್ಕಿಗಳು ವಿಹರಿಸಿ ತಮ್ಮ ಮಧುರ ರಾತ್ರಿಗಳನ್ನು ಕಳೆದು ಹಿಂತಿರುಗಿದ್ದಾರೆ.

ತಮ್ಮ ಹನಿಮೂನ್ ಬಗ್ಗೆ ಮಾತನಾಡಿದ ಪ್ರಸನ್ನ, "ಮದುವೆಯಾದ ಕೂಡಲೆ ಹನಿಮೂನ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಹರಿದಾಸ್ ಎಬ ಚಿತ್ರದಲ್ಲಿ ಸ್ನೇಹಾ ಬಿಜಿಯಾದರು. ಕೆಲ ವಾರಗಳ ಹಿಂದೆ ನಮಗೆ ಸ್ವಲ್ಪ ಸಮಯ ಸಿಕ್ಕಿತು. ಹಾಗಾಗಿ ನ್ಯೂಜಿಲ್ಯಾಂಡ್‌ಗೆ ಹಾರಿದೆವು" ಎಂದಿದ್ದಾರೆ.

ಈಗಷ್ಟೇ ಹನಿಮೂನ್ ಸವಿದು ಬಂದಿರುವ ಈ ಜೋಡಿ ಹೊಸ ಉತ್ಸಾಹದಲ್ಲಿದೆ. "ನನ್ನ ಕೆಲಸಗಳಲ್ಲಿ ಗಮನ ಕೇಂದ್ರೀಕರಿಸುತ್ತೇನೆ. ನನ್ನ ಮುಂದಿನ ಚಿತ್ರ ರಾಜನ್ ಮಾಧವ್ ಅವರ ಚಿತ್ರ. ಇದಕ್ಕೂ ಮುನ್ನ ಮಲಯಾಳಂನ ಹಿಟ್ ಚಿತ್ರ ಟ್ರಾಫಿಕ್ ತಮಿಳು ರೀಮೇಕ್‌ನಲ್ಲಿ ಅಭಿನಯಿಸಬೇಕಾಗಿದೆ " ಎಂದಿದ್ದಾರೆ ಪ್ರಸನ್ನ.

ಆದರೆ ತಮ್ಮ ಮಧುಚಂದ್ರದ ಮಧುರಾಗಿ ಮಧುರ ಅನುಭವಗಳನ್ನು ತಾರೆ ಸ್ನೇಹಾ ಹಂಚಿಕೊಂಡಿಲ್ಲ. ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಅಭಿನಯಿಸಿದ್ದ ಸ್ನೇಹಾ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಗೊತ್ತಿಲ್ಲ.

ಮೇ1, 2012ರಂದು ಸ್ನೇಹಾ ಮದುವೆ ಚೆನ್ನೈನ ಶ್ರೀವಾರು ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇವರಿಬ್ಬರದ್ದೂ ಪ್ರೇಮವಿವಾಹ. 'ಅಚ್ಚಮುಂಡು ಅಚ್ಚಮುಂಡು' ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಆರಂಭವಾದ ಇವರಿಬ್ಬರ ನಡುವಿನ ಕಣ್ಣಾಮುಚ್ಚಾಲೆಗೆ ಗಟ್ಟಿಮೇಳ ಮೊಳಗಿತ್ತು.

ಸ್ನೇಹಾ, ಪ್ರಸನ್ನ ಸಪ್ತಪದಿ ತುಳಿದ ಕಲರ್‌ಫುಲ್ ಗ್ಯಾಲರಿಯನ್ನು ಒನ್‌ಇಂಡಿಯಾ ಕನ್ನಡ ಪ್ರಕಟಿಸಿತ್ತು. ಒನ್‌ಇಂಡಿಯಾ ಬಳಗದ ಎಲ್ಲ ಜಾಲತಾಣಗಳಿಂದ ಸ್ನೇಹಾ ಗ್ಯಾಲರಿ ಸೂಪರ್ ಡೂಪರ್ ಹಿಟ್ ಆಗಿದೆ. ಸ್ನೇಹಾರ ಮದುವೆ ವಿಡಿಯೋಗೂ ಇದೇ ರೀತಿಯ ರೆಸ್ಪಾನ್ಸ್ ವ್ಯಕ್ತವಾಗಿದೆ. (ಏಜೆನ್ಸೀಸ್)

English summary
Newly married star couple actress Prasanna and Sneha is back in Chennai, after completing their honeymoon in New Zealand. They spent two weeks in some of the exotic locales of the country.
Please Wait while comments are loading...