»   » ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಪಾತ್ರದಲ್ಲಿ ಗ್ಲಾಮರಸ್ ನಟಿ

ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಪಾತ್ರದಲ್ಲಿ ಗ್ಲಾಮರಸ್ ನಟಿ

Posted By:
Subscribe to Filmibeat Kannada

ಕರ್ನಾಟದ ರಾಜ್ಯದ ದಕ್ಷ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರ ಕುರಿತು ಸಿನಿಮಾ ಆಗುತ್ತಿದೆ. ಈ ಚಿತ್ರಕ್ಕೆ ಕಳೆದ ಶನಿವಾರವಷ್ಟೇ (ಜೂನ್ 24th) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, 'ರಿಸರ್ವವೇಷನ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ನಿಖಿಲ್ ಮಂಜೂ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.

ಶಾಲಿನಿ ರಜನೀಶ್ ಅವರೇ ಬರೆದಿರುವ 'ಡ್ರೀಮ್ಸ್ ಆಫ್ ಐಎಎಸ್ ಕಪಲ್' (ಐಎಎಸ್ ದಂಪತಿಗಳ ಕನಸು) ಎಂಬ ಪುಸ್ತಕ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಐಎಎಸ್ ಅಧಿಕಾರಿಯ ಜೀವನಕಥೆಗೆ ನಿಖಿಲ್ ಮಂಜೂ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಸಿನಿಮಾ ರೂಪ ಕೊಡುತ್ತಿದ್ದಾರೆ.

ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕುರಿತು ಬರಲಿದೆ ಸಿನಿಮಾ

Actress Sonu Gowda is Playing Shalini Rajneesh Role

ಅಂದ್ಹಾಗೆ, ತೆರೆಮೇಲೆ ಶಾಲಿನಿ ಅವರ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಕಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು, ಸ್ಯಾಂಡಲ್ ವುಡ್ ಗ್ಲಾಮರಸ್ ನಟಿ ಸೋನು ಗೌಡ ಈ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಹೌದು, 'ಇಂತಿ ನಿನ್ನ ಪ್ರೀತಿಯ','ಗೋವಾ' 'ಕಿರಗೂರಿನ ಗಯ್ಯಾಳಿಗಳು' ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸೋನು ಗೌಡ ಇದೇ ಮೊದಲ ಭಾರಿಗೆ ನೈಜ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Actress Sonu Gowda is Playing Shalini Rajneesh Role

ಇನ್ನು ರಜನೀಶ್ ಗೋಯಲ್ ಅವರ ಪಾತ್ರಕ್ಕೆ ರೋಜರ್ ನಾರಾಯಣ್ ಆಯ್ಕೆ ಆಗಿದ್ದಾರೆ. ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದು, ವಿ.ಮನೋಹರ್ ಸಾಹಿತ್ಯ ಬರೆಯಲಿದ್ದಾರೆ.

English summary
Actress Sonu Gowda is playing the role of Shalini Rajneesh in the film. Chief Minister Siddaramaiah on Saturday (june 24th) Evening launched 'Shalini IAS' by sounding the clap for the film. The film is based on senior IAS officer Shalini Rajaneesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada