»   » ಚುನಾವಣೆ ಬೆನ್ನಲ್ಲೆ ವಿಧಾನಸೌಧ ಪ್ರವೇಶಿಸಿದ ಸ್ಯಾಂಡಲ್ ವುಡ್ ನಟಿ

ಚುನಾವಣೆ ಬೆನ್ನಲ್ಲೆ ವಿಧಾನಸೌಧ ಪ್ರವೇಶಿಸಿದ ಸ್ಯಾಂಡಲ್ ವುಡ್ ನಟಿ

Posted By:
Subscribe to Filmibeat Kannada

ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ರಾಜಕೀಯ ಗಣ್ಯರು ತಮ್ಮ ಪಕ್ಷಗಳ ಬಗ್ಗೆ ಪ್ರಚಾರ ಮಾಡುವ ಕಾರ್ಯದಲ್ಲಿ ಬ್ಯುಸಿ ಆಗಿರುವ ಸಮಯದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸೋನು ಗೌಡ ವಿಧಾನಸೌಧ ಪ್ರವೇಶಿಸಿದ್ದಾರೆ.

ಪ್ರತಿ ನಿತ್ಯ ಚಿತ್ರರಂಗದ ಕಲಾವಿದರು ರಾಜಕೀಯ ಪಕ್ಷ ಸೇರಿದರು ಅಂತ ಸುದ್ದಿ ಆಗುತ್ತಿರುವ ಸಂದರ್ಭದಲ್ಲಿ ನಟಿ ಸೋನು ವಿಧಾನಸೌಧಕ್ಕೆ ಭೇಟಿ ನೀಡಿರುವುದು ನೋಡುಗರಿಗೆ ಅನುಮಾನ ಹುಟ್ಟುವಂತೆ ಮಾಡಿದೆ. ಸೋನುಗೌಡ ರಾಜಕೀಯಕ್ಕೆ ಸೇರಿಕೊಂಡಿರ ಬಹುದು ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಸಿನಿಮಾ ಅಷ್ಟೇ ಅಲ್ಲ ನಿಜವಾಗಿಯೂ 'MLA' ಆಗ್ತಾರಂತೆ ಪ್ರಥಮ್

ಆದರೆ ನಟಿ ಸೋನುಗೌಡ ವಿದಾನಸೌಧ ಪ್ರವೇಶ ಮಾಡಿರುವ ವಿಚಾರವೇ ಬೇರೆ ಅಂತೆ. ಈಗಾಗಲೇ ತಿಳಿದಿರುವಂತೆ ನಿರ್ದೇಶಕ ನಿಖಿಲ್ ಮಂಜು ಪ್ರಖ್ಯಾತ ಐಎಎಸ್ ಆಫೀಸರ್ ಶಾಲಿನಿ ರಜನೀಶ್ ಅವರ ಜೀವನ ಸಾಧನೆಯನ್ನ ಬೆಳ್ಳಿ ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ.

Actress Sonu gowda visited Vidhana soudha

ಶಾಲಿನಿ ರಜನೀಶ್ ಪಾತ್ರದಲ್ಲಿ ನಟಿ ಸೋನುಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಶಾಲಿನಿ ಅವರು ಕಛೇರಿಯಲ್ಲಿ ಯಾವ ರೀತಿ ಇರುತ್ತಾರೆ, ಪ್ರತಿ ನಿತ್ಯ ಅವರನ್ನ ಭೇಟಿ ಮಾಡುವವರು ಬಳಿ ಹೇಗೆ ನಡೆದುಕೊಳ್ಳುತ್ತಾರೆ. ಇವೆಲ್ಲವುದರ ಬಗ್ಗೆ ತಿಳಿದುಕೊಳ್ಳಲು ನಟಿ ಸೋನುಗೌಡ ವಿಧಾನಸೌಧದಲ್ಲಿ ಇರುವ ಶಾಲಿನಿ ರಜನೀಶ್ ಅವರ ಕಛೇರಿಯಲ್ಲಿ ಕೆಲ ಸಮಯ ಕಳೆದಿದ್ದಾರೆ.

ಶಾಲಿನಿ ರಜನೀಶ್ ಅವರು ಬರೆದಿರುವ 'ಐಎಎಸ್‌ ದಂಪತಿ ಕನಸುಗಳು' ಪುಸ್ತಕದ ಆಧಾರವಾಗಿಟ್ಟುಕೊಂಡು ಸಿನಿಮಾ ಕಥೆಯನ್ನ ರಚಿಸಲಾಗಿದೆ. ಸೋನುಗೌಡ ಜೊತೆಯಲ್ಲಿ ರೋಜರ್ ನಾರಾಯಣ್ ಕೂಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

English summary
Kannada Actress Sonu gowda visited Vidhana soudha, She has visited Shalini Rajneesh's room at Vidhana Soudha for her next film experience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X