»   » ಹಸೆಮಣೆ ಏರಲಿರುವ ಜಾಲಿಡೇಸ್ ಜೋಡಿ

ಹಸೆಮಣೆ ಏರಲಿರುವ ಜಾಲಿಡೇಸ್ ಜೋಡಿ

Posted By:
Subscribe to Filmibeat Kannada

ಜಾಲಿಡೇಸ್ ಚಿತ್ರದ ಯಶಸ್ವಿ ಜೋಡಿ ಸ್ಪೂರ್ತಿ ಹಾಗೂ ವಿಶ್ವಾಸ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಸುಮಾರು ಏಳು ವರ್ಷಗಳ ತಮ್ಮ ಪ್ರೇಮ ಸಂಬಂಧವನ್ನು ವಿವಾಹ ಬಂಧನಕ್ಕೊಳಪಡಿಸುತ್ತಿದ್ದಾರೆ. ಸ್ಪೂರ್ತಿ ಹಾಗೂ ವಿಶ್ವಾಸ್ ಅವರ ಮದುವೆಗೆ ಅಕ್ಟೋಬರ್ 30, 2014 ಮುಹೂರ್ತ ನಿಶ್ಚಯವಾಗಿದೆ.

ಎಂ.ಡಿ ಶ್ರೀಧರ್ ನಿರ್ದೇಶನದ ಜಾಲಿಡೇಸ್ ಚಿತ್ರದ ಜಾಲಿ ಜೋಡಿ ಇಬ್ಬರ ಮದುವೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೆರವೇರಲಿದೆ. ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಎಂದು ಇಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Actress Spoorthi to wed Vishwas on October 30th

ಜಾಲಿಡೇಸ್ ಚಿತ್ರದ ಸಂದರ್ಭದಲ್ಲಿ ಆರಂಭವಾದ ಇಬ್ಬರ ಪ್ರೇಮ ಕಥೆ ನಂತರದ ವರ್ಷಗಳಲ್ಲಿ ಗಟ್ಟಿಯಾಯಿತು. ಇತ್ತೀಚೆಗೆ ಜೀ ಟಿವಿಯ ಟೆಲಿ ಧಾರಾವಾಹಿಯಲ್ಲೂ ಇಬ್ಬರು ಒಟ್ಟಿಗೆ ನಟಿಸಿದ್ದರು.

Post by Spoorthi Suresh.

ಇತ್ತೀಚೆಗೆ ಪಂದ್ಯ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ಸ್ಪೂರ್ತಿ ಅವರು ಮಾತನಾಡುತ್ತಾ ಇದೇ ನನ್ನ ಕೊನೆಯ ಚಿತ್ರ ಎಂದರು. ಕಾರಣ ಪ್ರಶ್ನಿಸಿದಾಗ, ತಾವು ಮದುವೆಯಾಗುತ್ತಿರುವುದಾಗಿ ಘೋಷಿಸಿದರು. ಮದುವೆ ನಂತರ ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ. ಪಂದ್ಯ ನನ್ನ ಚಿತ್ರವಾಗಲಿದೆ. ಟಿವಿ ಸೀರಿಯಲ್ ನಲ್ಲಿ ನಟನೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ, ಅಕ್ಟೋಬರ್ 30 ತಿರುಪತಿಯಲ್ಲಿ ಮದುವೆ, ನ.2 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಿಗದಿಯಾಗಿದೆ ಎಂದರು.

English summary
The Jolly Days film stars Vishwas and Spoorthi Suresh are getting married on October 30th. Both the actors are in love from past 7 years and finally entering in to wed-lock.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada