For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟಿಗ ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ನಾಯಕಿಯಾದ ಕನ್ನಡತಿ

  |
  Srinidhi Shetty play leading role opposite to Vikram in Vikram 58 Movie | FILMIBEAT KANNADA

  ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತಿದ್ದ ಇರ್ಫಾನ್ ಈಗ ತೆರೆಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ. ಕಾಲಿವುಡ್ ಚಿತ್ರರಂಗದ ಮೂಲಕ ಇರ್ಪಾನ್ ಫಠಾನ್ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭಿಸುತ್ತಿದ್ದಾರೆ.

  ವಿಶೇಷ ಅಂದ್ರೆ ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ಕನ್ನಡದ ಸುಂದರಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಆ ಬೆಡಗಿ ಮತ್ಯಾರು ಅಲ್ಲ ಕೆಜಿಎಫ್ ನ ರೀನಾ ಶ್ರೀನಿಧಿ ಶೆಟ್ಟಿ, ಪಠಾನ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಮುನ್ನಾಭಾಯ್ ಭೇಟಿ ಮಾಡಿದ ಸಂತಸ ಹಂಚಿಕೊಂಡ 'ಕೆಜಿಎಫ್'ನ ರೀನಾ

  ಅಂದ್ಹಾಗೆ ಇರ್ಫಾನ್ ಪಠಾನ್ ಮೊದಲ ಬಾರಿಗೆ ಅಭಿನಯಿಸುತ್ತಿರುವ ತಮಿಳು ಚಿತ್ರದಲ್ಲಿ ಖ್ಯಾತ ನಟ ವಿಕ್ರಮ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಇರ್ಫಾನ್ ಪಾತ್ರದ ಬಗ್ಗೆ ಇನ್ನು ಬಹಿರಂಗವಾಗಿಲ್ಲ. ಇದೊಂದು ಪಕ್ಕ ಆಕ್ಷನ್ ಸಿನಿಮಾವಾಗಿದೆಯಂತೆ. ಚಿತ್ರಕ್ಕೆ ಸದ್ಯ 'ವಿಕ್ರಮ್ 58' ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಅಜಯ್ ಜ್ಞಾನಮುತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಚಿತ್ರತಂಡ ಈಗಾಗಲೆ ನಟಿ ಶ್ರೀನಿಧಿ ಶೆಟ್ಟಿ ಜೊತೆ ಮಾತುಕತೆ ಮಾಡಿದೆಯಂತೆ. ಆದ್ರೆ ಶ್ರೀನಿಧಿ ಕಡೆಯಿಂದ ಇನ್ನು ಗ್ರೀನ್ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಶ್ರೀನಿಧಿ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಮ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರೆ ಕೆಜಿಎಫ್-2 ಜೊತೆಗೆ ವಿಕ್ರಮ್ ಸಿನಿಮಾದಲ್ಲೂ ಭಾಗಿಯಾಗಲಿದ್ದಾರೆ.

  English summary
  Kannada KGF actress fame Srinidhi Shetty leading role opposite to Vikram in Vikram 58. Cricketer irfan Pathan playing important role in this film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X