ಮುನ್ನಾಭಾಯ್ ಭೇಟಿ ಮಾಡಿದ ಸಂತಸ ಹಂಚಿಕೊಂಡ 'ಕೆಜಿಎಫ್'ನ ರೀನಾ
ಸ್ಯಾಂಡಲ್ ವುಡ್ ನ ಬಹುನೀಕ್ಷೆಯ ಕೆಜಿಎಫ್ ಚಾಪ್ಟರ್-2 ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಕೆಜಿಎಫ್-2ಗೆ ಈಗಾಗಲೆ ಬಾಲಿವುಡ್ ನ ಖಳನಾಯಕ್ ಎಂಟ್ರಿ ಕೊಟ್ಟಿದ್ದಾರೆ.
ಅಧೀರನ ಎಂಟ್ರಿಯಿಂದ ಕೆಜಿಎಫ್-2 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿಯಾಗಿರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿತ್ತು. ಅಲ್ಲದೆ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟ ಸಂಜು ಬಾಬಾನ ಜೊತೆ ಚಿತ್ರತಂಡ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ರಾಕಿ ಭಾಯ್ ವಿರುದ್ಧ ಮುನ್ನಾಭಾಯ್ ಕಾದಾಟ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣ ಸೆಟ್ ನಲ್ಲಿ ಯಶ್ ಮತ್ತು ಸಂಜಯ್ ದತ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೋ ಕೂಡ ವೈರಲ್ ಆಗಿತ್ತು. ಆದ್ರೀಗ ನಟಿ ಶ್ರೀನಿಧಿ ಶೆಟ್ಟಿ ಸಂಜಯ್ ದತ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಜೊತೆಗೆ ಕ್ಯಾಪ್ಷನ್ ಕೂಡ ಹಾಕಿದ್ದಾರೆ. "ಕೊನೆಗೂ ಅಧೀರಾ ಜೊತೆ. ತೆರೆ ಮೇಲೆ ಮಾನ್ ಸ್ಟರ್, ಆದ್ರೆ ವೈಯಕ್ತಿಕವಾಗಿ ತುಂಬ ಸ್ವೀಟೆಸ್ಟ್ ವ್ಯಕ್ತಿ" ಎಂದು ಬರೆದುಕೊಂಡಿದ್ದಾರೆ.
ಕೆಜಿಎಫ್ ಮೊದಲ ಭಾಗದಲ್ಲಿ ಆಧೀರಾನ ಬಗ್ಗೆ ಹೇಳದ ಚಿತ್ರತಂಡ, ಎರಡನೇ ಭಾಗದಲ್ಲಿ ಅಧೀರಾನ ಸಂಪೂರ್ಣ ಇತಿಹಾಸ ತೆರೆದುಕೊಳ್ಳಲಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣವಿದೆ. ಮುಂದಿನ ವರ್ಷದ ಮಧ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











