For Quick Alerts
  ALLOW NOTIFICATIONS  
  For Daily Alerts

  ಪುನೀತ್, ಯಶ್ ಬಗ್ಗೆ ತಮನ್ನಾ ಮಾಡಿದ ಕಾಮೆಂಟ್ ಏನು.?

  By Harshitha
  |

  ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಹಾಲು ಗಲ್ಲದ ಸುಂದರಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬಹು ಬೇಡಿಕೆಯ ನಟಿಯಾಗಿದ್ದಾರೆ. 'ಹ್ಯಾಪಿ ಡೇಸ್', 'ಪೈಯ್ಯಾ', 'ಬದ್ರಿನಾಥ್', 'ಬಾಹುಬಲಿ', 'ಊಪಿರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ.

  ತ್ರಿಭಾಷೆಯಲ್ಲಿ ಮಿಂಚುತ್ತಿರುವ ತಮನ್ನಾ ಭಾಟಿಯಾ ಸ್ಯಾಂಡಲ್ ವುಡ್ ನಲ್ಲಿ 'ಜಾಗ್ವಾರ್' ಹಾಗೂ 'ಕೆ.ಜಿ.ಎಫ್' ಚಿತ್ರದ ಸ್ಪೆಷಲ್ ಹಾಡುಗಳಲ್ಲಿ ಮಾತ್ರ ಹೆಜ್ಜೆ ಹಾಕಿದ್ದರು.

  ಬರೀ ಒಂದು ಹಾಡಲ್ಲಿ ಮಾತ್ರ ಸ್ಟೆಪ್ ಹಾಕಿ ಹೋದರೆ ಹೇಗೆ... ಕನ್ನಡದ ಸಿನಿಮಾವೊಂದರಲ್ಲಿ ತಮನ್ನಾ ಭಾಟಿಯಾ ನಾಯಕಿ ಆಗಿ ಅಭಿನಯಿಸಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಅದಕ್ಕೆ ತಮನ್ನಾ ಭಾಟಿಯಾ ತಥಾಸ್ತು ಎಂದಿದ್ದಾರೆ.

  ''ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ, ಖಂಡಿತ ಕನ್ನಡದಲ್ಲಿ ಆಕ್ಟ್ ಮಾಡುವೆ'' ಅಂತ ತಮನ್ನಾ ಭಾಟಿಯಾ ಹೇಳಿದ್ದಾರೆ. ಅಲ್ಲದೇ, ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ತಮನ್ನಾ ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಯಶ್ ಬಗ್ಗೆ ಹೊಗಳಿದ ನಟಿ ತಮನ್ನಾ

  ಯಶ್ ಬಗ್ಗೆ ಹೊಗಳಿದ ನಟಿ ತಮನ್ನಾ

  ''ಯಶ್ ಹಾಗೂ 'ಕೆ.ಜಿ.ಎಫ್' ತಂಡದ ಜೊತೆಗೆ ಕೆಲಸ ಮಾಡಿದ್ದು ನನಗೆ ಖುಷಿ ಕೊಡ್ತು. ಎಲ್ಲರೂ ನನ್ನನ್ನ ಆತ್ಮೀಯವಾಗಿ ನೋಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ನನಗೆ ಸಿಗುತ್ತಿರುವ ಸ್ವಾಗತ ನೋಡಿದ್ರೆ, ನಾನ್ಯಾಕೆ ಇನ್ನೂ ಇಲ್ಲಿ ಆಕ್ಟ್ ಮಾಡಿಲ್ಲ ಅನಿಸುತ್ತಿದೆ'' ಅಂತಾರೆ ನಟಿ ತಮನ್ನಾ ಭಾಟಿಯಾ.

  ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!

  ಕನ್ನಡದಲ್ಲಿ ಆಕ್ಟ್ ಮಾಡ್ತಾರಾ ತಮನ್ನಾ.?

  ಕನ್ನಡದಲ್ಲಿ ಆಕ್ಟ್ ಮಾಡ್ತಾರಾ ತಮನ್ನಾ.?

  ''ಖಂಡಿತವಾಗಲೂ ಕನ್ನಡದ ಚಿತ್ರದಲ್ಲಿ ನಟಿಸುವೆ. ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ನಾನು ಕಾಯುತ್ತಿರುವೆ'' ಅಂತ ಸಂದರ್ಶನವೊಂದರಲ್ಲಿ ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.

  'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?

  ಪುನೀತ್ ರಾಜ್ ಕುಮಾರ್ ಬಗ್ಗೆ ತಮನ್ನಾ ಹೇಳಿದ್ದೇನು.?

  ಪುನೀತ್ ರಾಜ್ ಕುಮಾರ್ ಬಗ್ಗೆ ತಮನ್ನಾ ಹೇಳಿದ್ದೇನು.?

  ಈಗಾಗಲೇ 'ಪೋತೀಸ್' ಜಾಹೀರಾತಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ತಮನ್ನಾ ಕಾಣಿಸಿಕೊಂಡಿದ್ದರು. ''ಪುನೀತ್ ರಾಜ್ ಕುಮಾರ್ ಜೊತೆಗೆ ಸ್ಕ್ರಿಪ್ಟ್ ಸಿಕ್ಕರೆ, ಗ್ಯಾರೆಂಟಿ ಒಪ್ಪಿಕೊಳ್ಳುವೆ'' ಎಂದಿದ್ದಾರೆ ನಟಿ ತಮನ್ನಾ ಭಾಟಿಯಾ.

  ಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿ

  ಚಿರಂಜೀವಿ ಚಿತ್ರದಲ್ಲಿ ತಮನ್ನಾ

  ಚಿರಂಜೀವಿ ಚಿತ್ರದಲ್ಲಿ ತಮನ್ನಾ

  ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.

  English summary
  Actress Tamannaah speaks about Puneeth Rajkumar and Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X