»   » ಚಿತ್ರ ನಟಿ ತಾರಾ ಅನುರಾಧಾ ಈಗ ತಾಯಿ

ಚಿತ್ರ ನಟಿ ತಾರಾ ಅನುರಾಧಾ ಈಗ ತಾಯಿ

Posted By:
Subscribe to Filmibeat Kannada
Kannada Actress Tara with Baby Boy
ಅಚ್ಚ ಕನ್ನಡದ ನಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ, ವಿಧಾನ ಪರಿಷತ್ ಸದಸ್ಯೆ ಹಾಗೂ ಖ್ಯಾತ ಛಾಯಾಗ್ರಾಹಕ ಎಚ್ ಸಿ ವೇಣು ಪತ್ನಿ ತಾರಾ ತಾಯಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಗೇರಿ ಬಳಿಯ ಸೃಷ್ಟಿ ಗ್ಲೋಬಲ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

'ತಾಯಿ ಮಗು ಇಬ್ಬರು ಆರೋಗ್ಯದಿಂದಿದ್ದಾರೆ. ತಾರಾ ಅವರಿಗೆ ನಾರ್ಮಲ್ ಡೆಲಿವರಿ ಆಗಿದೆ. ಸಿ ಸೆಕ್ಷನ್ ಮಾಡುವ ಅವಶ್ಯಕತೆ ಇರಲಿಲ್ಲ. ಕೊಟ್ಟಿದ್ದ ಡೇಟ್ ಗಿಂತ ಮೊದಲೇ ಮಗು ಜನಿಸಿದ್ದರೂ ಯಾವುದೇ ತೊಂದರೆ ಉಂಟಾಗಲಿಲ್ಲ. ಹೆಲ್ತಿ ಬೇಬಿ' ಎಂದು ಸೃಷ್ಟಿ ಆಸ್ಪತ್ರೆ ವೈದ್ಯ ಡಾ. ಗುರುಮೂರ್ತಿ ಹೇಳಿದ್ದಾರೆ.

2005, ಫೆಬ್ರವರಿಯಲ್ಲಿ ಛಾಯಾಗ್ರಾಹಕ ವೇಣುವನ್ನು ಮೆಚ್ಚಿ ಮದುವೆಯಾದ ತಾರಾ ಅವರು IVF (IVF ಎಂದರೆ ಏನು?)ಮೂಲಕ ಗರ್ಭ ಧರಿಸಿದ್ದರು. ಡಾಕ್ಟರ್ ಗಳು 2013ರ ಫೆಬ್ರವರಿ 6 ರಂದು 43 ವರ್ಷ ವಯಸ್ಸಿನ ತಾರಾ ಅವರು ಮಗುವಿಗೆ ಜನ್ಮನೀಡಲಿದ್ದಾರೆ ಎಂದು ಡೇಟ್ ನೀಡಿದ್ದರು.

ಮೊದಲಿಗೆ ಕೃತಕ ಗರ್ಭಧಾರಣೆ ಬಗ್ಗೆ ನಂಬಿಕೆ ಇರಲಿಲ್ಲ. ಆದರೆ, ಸುಮಾರು ಬಾರಿ ಕೌನ್ಸಿಲಿಂಗ್ ಮಾಡಿದ ಮೇಲೆ ivf ವಿಧಾನದ ಮೂಲಕ ಮಗು ಪಡೆಯಲು ತಾರಾ ಅವರು ಒಪ್ಪಿಗೆ ಸೂಚಿಸಿದ್ದರು ಎಂದು ವೈದ್ಯ ಗುರುಮೂರ್ತಿ ಹೇಳಿದ್ದಾರೆ.

ಪತಿಯ ವೀರ್ಯಾಣುವನ್ನು ಸಂಗ್ರಹಿಸಿ ಕೃತಕವಾಗಿ ಗರ್ಭ ಬೆಳೆವಣಿಗೆ ಸಾಧಿಸಿ, ಪತ್ನಿಯ ಜನನಾಂಗ ಅಥವಾ ನಂತರ ಗರ್ಭಕೋಶದೊಳಕ್ಕೆ ಬಿಡುವ ಕ್ರಮಕ್ಕೆ ಕೃತಕ ಗರ್ಭಧಾರಣೆ ಎನ್ನುತ್ತಾರೆ. ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕಿರಣ್ ತಾರಾ ದಂಪತಿ ಐವಿಎಫ್ ವಿಧಾನ ಅಳವಡಿಸಿಕೊಂಡು ಮಗು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾರಾ ಹಾಗೂ ವೇಣು ದಂಪತಿಗಳಿಗೆ ಅಭಿನಂದನೆ ಸಲ್ಲಿಸುತ್ತಿರುವ ಅವರ ಅಭಿಮಾನಿಗಳು, ಕನ್ನಡ ಸಿನಿಪ್ರೇಕ್ಷಕರೊಟ್ಟಿಗೆ ನಮ್ಮ 'ಒನ್ ಇಂಡಿಯಾ ಕನ್ನಡ'ದ ಕಡೆಯಿಂದಲೂ ಈ 'ತಾರಾ ದಂಪತಿ'ಗೆ ಕಂಗ್ರಾಟ್ಸ್... ಅಂದ ಹಾಗೆ, ತಾರಾ ವೇಣು ಅವರ ಮುದ್ದು ಮಗುವಿಗೆ ಒಂದು ಮುದ್ದಾದ ಹೆಸರು ಸೂಚಿಸಿ.

English summary
Kannada Actress, Karnataka film academy president Tara Anuradha today (Feb.1) gives birth to a baby boy at Srushti Hospital, Kengeri, Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada