»   » ಪುನೀತ್ ರಾಜ್ ಚಿತ್ರಕ್ಕೆ ಮೋಹಕ ತಾರೆ ತ್ರಿಷಾ ಕೃಷ್ಣನ್

ಪುನೀತ್ ರಾಜ್ ಚಿತ್ರಕ್ಕೆ ಮೋಹಕ ತಾರೆ ತ್ರಿಷಾ ಕೃಷ್ಣನ್

Posted By:
Subscribe to Filmibeat Kannada

ಕಳೆದ ಹತ್ತು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ರಾಣಿಯಂತೆ ಮೆರೆದ ತ್ರಿಷಾ ಕೃಷ್ಣನ್ ಕಡೆಗೂ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರದಲ್ಲಿ ತ್ರಿಷಾ ಅಭಿನಯಿಸಲಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ತೆಲುಗು 'ದೂಕುಡು' ಚಿತ್ರಕ್ಕಾಗಿ ತ್ರಿಷಾ ಅವರನ್ನು ಸಂಪರ್ಕಿಸಲಾಗಿದೆ. ಒಂದು ಸುತ್ತಿನ ಮಾತುಕತೆಯೂ ಮುಗಿದಿದ್ದು ಸಂಭಾವನೆ ವಿಚಾರದಲ್ಲಿ ಇನ್ನೂ ಒಮ್ಮತಕ್ಕೆ ಬಂದಿಲ್ಲವಂತೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಸುದ್ದಿ ಕೊಡುವುದಾಗಿ ಮೂಲಗಳು ತಿಳಿಸಿವೆ. [ಶಾರ್ಟ್ಸ್ ನಲ್ಲಿ ತ್ರಿಷಾ ಕೃಷ್ಣನ್ ವಿಶ್ವರೂಪ ಪ್ರದರ್ಶನ]


ತೆಲುಗು 'ದೂಕುಡು' ಚಿತ್ರದ ಮೂಲ ನಿರ್ಮಾಪಕರೇ ಕನ್ನಡ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಆದರೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿರುತ್ತವೆ. ಚಿತ್ರದ ಕಥೆ ತ್ರಿಷಾ ಅವರಂತಹ ತಾರೆಯನ್ನು ಬಯಸುವುದರಿಂದ ಅದೆಷ್ಟೇ ವೆಚ್ಚವಾದರೂ ಸರಿ ಅವರನ್ನು ಕನ್ನಡಕ್ಕೆ ಕರೆತರುವುದಾಗಿ ನಿರ್ಮಾಪಕರು ನಿರ್ಧರಿಸಿದ್ದಾರಂತೆ.

ದೂಕುಡು ಚಿತ್ರವನ್ನು ರಾಮ್ ಅಚಂತಾ, ಗೋಪಿಚಂದ್ ಅಚಂತಾ ಹಾಗೂ ಅನಿಲ್ ಸುಂಕರ ನಿರ್ಮಿಸಿದ್ದಾರೆ. ರು.35 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಚಿತ್ರ ಬಾಕ್ಸ್ ಆಫೀಸಲ್ಲಿ ರು.101 ಕೋಟಿ ಗಳಿಸಿತ್ತು. ಮಹೇಶ್ ಬಾಬುಗೆ ಸಮಂತಾ ನಾಯಕಿಯಾಗಿದ್ದರು.

ಇಷ್ಟೆಲ್ಲಾ ಬಂಡವಾಳ ಹೂಡಿ ತ್ರಿಷಾರನ್ನು ಕನ್ನಡಕ್ಕೆ ಕರೆದುಕೊಂಡು ಬಂದರೆ ವರ್ಕ್ ಔಟ್ ಆಗುತ್ತದಾ? ಕನ್ನಡ ಚಿತ್ರಗಳ ಸೀಮಿತ ಮಾರುಕಟ್ಟೆ ಲಾಭವಾಗುತ್ತದೆಯೇ ಎಂಬ ಲೆಕ್ಕಾಚಾರಗಳನ್ನೂ ಮಾಡಲಾಗುತ್ತಿದೆ. ಏನೇ ಆಗಲಿ ಬಿಗ್ ಸ್ಟಾರ್, ಭಾರಿ ಬಜೆಟ್ ಚಿತ್ರಗಳೆಂದರೆ ನಟಿ ತ್ರಿಷಾ ಒಲ್ಲೆ ಎನ್ನಲ್ಲ.

ದೂಕುಡು ಚಿತ್ರ ಡಿಸೆಂಬರ್ ನಲ್ಲೇ ಸೆಟ್ಟೇರಲಿದೆ. ಆದರೆ ನಿರ್ಮಾಪಕರು ಇದುವರೆಗೂ ತಾಂತ್ರಿಕ ಬಳಗ ಹಾಗೂ ಪಾತ್ರವರ್ಗದ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಪುನೀತ್ ಅವರು ಜಯಂತ್ ಸಿ ಪರಾಂಜೆ ನಿರ್ದೇಶನದ 'ನಿನ್ನಿಂದಲೇ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

English summary
South Indian beauty Trisha Krishnan all set to make her debut in a Kannada biggie, opposite Power Star Puneeth Rajkumar. The buzz is that, she has been approached for the Kannada remake of the Telugu hit movie Dookudu.
Please Wait while comments are loading...