For Quick Alerts
  ALLOW NOTIFICATIONS  
  For Daily Alerts

  ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ಪೂರ್ವದ ಫೋಟೋಗಳು

  By ಉದಯರವಿ
  |

  ಮೋಹಕ ತಾರೆ ತ್ರಿಷಾ ಕೃಷ್ಣನ್ ಅವರ ಬಾಳಿನಲ್ಲಿ ಮರೆಯಲಾಗದ ಮಾಘಮಾಸವಿದು. ಏಕೆಂದರೆ ನಿಮಗೆಲ್ಲ ತಿಳಿದೆ ಇದೆ. ಇದೇ ಶುಕ್ರವಾರ (ಜ.23) ಅವರಿಗೆ ನಿಶ್ಚಿತಾರ್ಥ ಸಂಭ್ರಮ. ನೂತನ ಬಾಳಿಗೆ ಅಡಿಯಿಡುತ್ತಿರುವ ಗಳಿಗೆ. ಇಂದು ಶುಭ ಸಂಜೆ 6-8 ಗಂಟೆ ಶುಭಲಗ್ನದಲ್ಲಿ ಅವರ ನಿಶ್ಚಿತಾರ್ಥ ವರುಣ್ ಮಣಿಯನ್ ಜೊತೆ ನೆರವೇರಲಿದೆ.

  ಇಂದು ರಾತ್ರಿಯೇ ಮದುವೆ ಮುಹೂರ್ತ ನಿಗದಿಯಾಗಲಿದೆ. ಬಹುಶಃ ಈ ವರ್ಷಾಂತ್ಯಕ್ಕೆ ತ್ರಿಷಾ ಸಪ್ತಪದಿ ತುಳಿಯುವ ಸಾಧ್ಯತೆಗಳಿವೆ. ಇಂದಿನ ನಿಶ್ಚಿತಾರ್ಥ ಕಾರ್ಯಕ್ರಮ ತೀರಾ ಖಾಸಗಿಯಾಗಿದ್ದು ಕೇವಲ ಬಂಧು ಮಿತ್ರರು ಹಾಗೂ ಗುರುಹಿರಿಯನ್ನು ಮಾತ್ರ ಆಹ್ವಾನಿಸಲಾಗಿದೆ. [ತ್ರಿಷಾಗೆ ಭಾವಿಪತಿ ವರುಣ್ ಕೊಟ್ಟ 'ಪ್ರೇಮದ ಕಾಣಿಕೆ']

  ಗುರುವಾರ (ಜ.22) ರಾತ್ರಿ ನಿಶ್ಚಿತಾರ್ಥಕ್ಕೂ ಮುನ್ನದ ಸಂಪ್ರದಾಯಗಳಲ್ಲಿ ಭಾವಿ ದಂಪತಿಗಳು ಭಾಗಿಯಾದರು. ಇಲ್ಲಿವೆ ನೋಡಿ ಆ ಸಂಭ್ರಮದ ಫೊಟೋಗಳು. ಇಂದು ರಾತ್ರಿ ನಿಶ್ಚಿತಾರ್ಥ ಹಾಗೂ ಅದಕ್ಕೂ ಮುಂಚಿನ ನಿಶ್ಚಿತಾರ್ಥ ಪೂರ್ವದ ಫೋಟೋಗಳಿವು, ಕಣ್ತುಂಬಿಕೊಳ್ಳಿ.

  ಹೊಸ ಬಾಳಿನ ಹೊಸಿಸಲಿ ತ್ರಿಷಾ ಕೃಷ್ಣನ್

  ಹೊಸ ಬಾಳಿನ ಹೊಸಿಸಲಿ ತ್ರಿಷಾ ಕೃಷ್ಣನ್

  ಗುರುವಾರ ರಾತ್ರಿ ಎಲ್ಲರೂ ರಾತ್ರಿ ಭೋಜನ ಮುಗಿದ ಮೇಲೆ ಭಾವಿ ದಂಪತಿಗಳು ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಕಾಣಿಸಿಕೊಂಡದ್ದು ಹೀಗೆ.

  ತಂದೆ ತಾಯಿ ಸಮ್ಮುಖದಲ್ಲಿ ಮದುಮಗಳು

  ತಂದೆ ತಾಯಿ ಸಮ್ಮುಖದಲ್ಲಿ ಮದುಮಗಳು

  ಮಧು ಮಗಳಿಗೂ ಮಧು ಮಗನಿಗೂ ಶುಭಾಶಯ ಹೇಳುವ ಸಮಯ ಬಂದೇ ಬಿಟ್ಟಿದೆ. ತ್ರಿಷಾ ಅವರ ತಂದೆ ತಾಯಿ ಜೊತೆಗೆ ಖ್ಯಾತ ತಾರೆ ಸುಹಾಸಿನಿ ಮಣಿರತ್ನಂ ಅವರನ್ನೂ ಚಿತ್ರದಲ್ಲಿ ಕಾಣಬಹುದು.

  ಇದೇ ನೋಡಿ ನಿಶ್ಚಿತಾರ್ಥ ಮಂಟಪ

  ಇದೇ ನೋಡಿ ನಿಶ್ಚಿತಾರ್ಥ ಮಂಟಪ

  ತ್ರಿಷಾ ಕೃಷ್ಣನ್ ಹಾಗೂ ವರುಣ್ ಮಣಿಯನ್ ಅವರು ನಿಶ್ಚಿತಾರ್ಥದ ಉಂಗುರಗಳನ್ನು ಬದಲಾಯಿಸಿಕೊಳ್ಳಲಿರುವ ಮಂಟಪ ಇದೇ ನೋಡಿ.

  ನಿಶ್ಚಿತಾರ್ಥದ ಒಲವಿನ ಕರೆಯೋಲೆ

  ನಿಶ್ಚಿತಾರ್ಥದ ಒಲವಿನ ಕರೆಯೋಲೆ

  ಇದೇ ನೋಡಿ ತ್ರಿಷಾ ನಿಶ್ಚಿತಾರ್ಥದ ಒಲವಿನ ಕರೆಯೋಲೆ. ಸಖತ್ ಗ್ರ್ಯಾಂಡ್ ಆಗಿರುವ ಈ ಪತ್ರಿಕೆ ಸಿನಿಮಾ ತಾರೆಗಳ ಅಭಿರುಚಿಗೆ, ಘನತೆಗೆ ಕನ್ನಡಿ ಹಿಡಿಯುತ್ತದೆ.

  ನಿಶ್ಚಿತಾರ್ಥದ ಉಡುಗೆತೊಡುಗೆ

  ನಿಶ್ಚಿತಾರ್ಥದ ಉಡುಗೆತೊಡುಗೆ

  ಖ್ಯಾತ ವಿನ್ಯಾಸಕಿ ನೀತಾ ಲುಲ್ಲಾ ವಿನ್ಯಾಸ ಮಾಡಿರುವ ನಿಶ್ಚಿತಾರ್ಥದ ಉಡುಗೆ ಇದು. ಬಹುತೇಕ ತಾರೆಗಳಿಗೆ ನೀತಾ ಲುಲ್ಲಾ ಅವರೇ ವಿನ್ಯಾಸ ಮಾಡುವುದು.

  ಭಾವಿ ದಂಪತಿಗಳು ಒಂದು ಅಪರೂಪದ ಚಿತ್ರ

  ಭಾವಿ ದಂಪತಿಗಳು ಒಂದು ಅಪರೂಪದ ಚಿತ್ರ

  ಭಾವಿ ದಂಪತಿಗಳ ಒಂದು ಅಪರೂಪದ ಚಿತ್ರವಿದು. ಆಗಲೇ ಇಬ್ಬರ ನಡುವೆ ಸಾಕಷ್ಟು ಆತ್ಮೀಯತೆ ಉಂಟಾಗಿರುವುದನ್ನು ಈ ಚಿತ್ರ ಹೇಳುತ್ತದೆ.

  ಗುರುವಾರದ ಕಾರ್ಯಕ್ರಮದ ಪೋಸ್

  ಗುರುವಾರದ ಕಾರ್ಯಕ್ರಮದ ಪೋಸ್

  ನಿಶ್ಚಿತಾರ್ಥ ಪೂರ್ವದ ಕಾರ್ಯಕ್ರಮಗಳು ಮುಗಿದ ಮೇಲೆ ಇಬ್ಬರೂ ಒಬ್ಬರಿಗೊಬ್ಬರು ಕುಳಿತು ಕ್ಯಾಮೆರಾಗೆ ಕಣ್ಣು ಹೊಡೆದದ್ದು ಹೀಗೆ.

  ಮನೆಯಲ್ಲಿ ಸಂಭ್ರಮದ ವಾತಾವರಣ

  ಮನೆಯಲ್ಲಿ ಸಂಭ್ರಮದ ವಾತಾವರಣ

  ಮದುವೆ ಎಂದರೆ ಸಂಭ್ರಮಕ್ಕೆ ಪಾರವೇ ಇರಲ್ಲ. ತ್ರಿಷಾ ಮನೆಯಲ್ಲೂ ಈಗ ಎಲ್ಲೆಲ್ಲೂ ಮದುವೆಯದ್ದೇ ಮಾತು,ಕಥೆ.

  ಗೆಳೆಯರ ಜೊತೆ ತ್ರಿಷಾ ಗ್ರ್ಯಾಂಡ್ ಪಾರ್ಟಿ

  ಗೆಳೆಯರ ಜೊತೆ ತ್ರಿಷಾ ಗ್ರ್ಯಾಂಡ್ ಪಾರ್ಟಿ

  ನಿಶ್ಚಿತಾರ್ಥದ ಹಿಂದಿನ ದಿನ ಗೆಳೆಯರೊಂದಿಗೆ ಸಂಭ್ರಮಿಸಿದ ತ್ರಿಷಾ ಎಲ್ಲರೊಂದಿಗೂ ಕುಳಿತು ಭರ್ಜರಿಯಾಗಿ ಸವಿದರು.

  ತನ್ನ ಪಟಾಲಂ ಜೊತೆ ತ್ರಿಷಾ ಕೃಷ್ಣನ್

  ತನ್ನ ಪಟಾಲಂ ಜೊತೆ ತ್ರಿಷಾ ಕೃಷ್ಣನ್

  ತನ್ನ ಗೆಳತಿಯರ ಜೊತೆಗೂ ತ್ರಿಷಾ ಸಂಭ್ರಮವನ್ನು ಹಂಚಿಕೊಂಡಿದ್ದು ಹೀಗೆ. ಮೋಹಕತಾರೆ ಜೊತೆ ಇನ್ನಷ್ಟು ಮೋಹಕ ಗೆಳೆಯರೇ ಈ ಚಿತ್ರದ ಆಕರ್ಷಣೆ.

  English summary
  Take A Sneak Peek At Trisha's Engagement And Much More! The grand engagement of Trisha Krishnan and Varun Manian that will take place tonight between 6-8 in the evening. Here is the pre engagement photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X