»   » ಎಚ್1ಎನ್1 ಭೀತಿಯಲ್ಲಿ ಮೋಹಕ ತಾರೆ ತ್ರಿಷಾ ಕೃಷ್ಣನ್

ಎಚ್1ಎನ್1 ಭೀತಿಯಲ್ಲಿ ಮೋಹಕ ತಾರೆ ತ್ರಿಷಾ ಕೃಷ್ಣನ್

Posted By:
Subscribe to Filmibeat Kannada

ಈಗ ಎಲ್ಲಡೆಯೂ ರಕ್ತಬೀಜಾಸುರನಂತೆ ಹಬ್ಬುತ್ತಿರುವ ಸೋಂಕು ಎಚ್1ಎನ್1. ಈ ಬಗ್ಗೆ ಭಯ ಬೇಡ ಎಂದು ಸರ್ಕಾರ, ವೈದ್ಯರು ಎಷ್ಟೇ ಧೈರ್ಯ ತುಂಬುತ್ತಿದ್ದರೂ ಜನರಲ್ಲಿನ ಭಯ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ.

ಸದಾ ಶೂಟಿಂಗು, ಔಟಿಂಗು ಎಂದು ಬಿಜಿಯಾಗಿರುವ ಸೆಲೆಬ್ರಿಟಿಗಳಿಗೂ ಎಚ್1ಎನ್1 ಭಯ ಕಾಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮೋಹಕ ತಾರೆ ತ್ರಿಷಾ ಕೃಷ್ಣನ್ ಸಹ ಲಸಿಕೆಗೆ ಶರಣಾದರು. [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]

Actress Trisha Krishnan Scared Of Swine Flu

ಬಾಲಿವುಡ್ ಬೆಡಗಿ ಸೋನಂ ಕಪೂರ್ ಅವರು ಹಂದಿಜ್ವರ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು ಗೊತ್ತೇ ಇದೆ. ಈ ಸೋಂಕಿಗೆ ಬಡವ ಬಲ್ಲಿದರೆಂಬ ಭೇದಭಾವವಿಲ್ಲ. ಎಲ್ಲಿ ಯಾರಿಗೆ ಬೇಕಾದರೂ ಸೋಂಕು ತಗುಲಬಹುದು. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದಲ್ಲಿ ತೀವ್ರಗತಿಯಲ್ಲಿ ಎಚ್1ಎನ್1 ಸೋಂಕು ಹರಡುತ್ತಿದೆ.

ಸದ್ಯಕ್ಕೆ ಟಾಲಿವುಡ್ ಚಿತ್ರದಲ್ಲಿ ಬಿಜಿಯಾಗಿರುವ ತ್ರಿಷಾ ಅವರು ಹೈದರಾಬಾದಿನಲ್ಲಿದ್ದಾರೆ. ಅಲ್ಲಿ ಹಂದಿಜ್ವರದ ಸೋಂಕು ತೀವ್ರಗತಿಯಲ್ಲಿ ಹಬ್ಬುತ್ತಿದೆ. ಮಾಸ್ಕ್ ತೊಟ್ಟು ಲಸಿಕೆ ಹಾಕಿಸಿಕೊಂಡು ದಮ್ಮಯ್ಯ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ತ್ರಿಷಾ. (ಏಜೆನ್ಸೀಸ್)

English summary
Ever since, Bollywood fashionista Sonam Kapoor hospitalized because of Swine Flu, it is sending chills down the spines of all the heroines and film fraternity. The latest to get tremor-ed by the incident was Trisha Krishnan, the other day she has posted a picture of her with the mask on, from a film set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada