For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬಚ್ಚನ್ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಕನ್ಫರ್ಮ್

  By Rajendra
  |

  ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸುತ್ತಿರುವ 'ಬಚ್ಚನ್' ಚಿತ್ರದ ಮೂರನೇ ನಾಯಕಿ ಕನ್ಫರ್ಮ್ ಆಗಿದ್ದಾರೆ. ಶಶಾಂಕ್ ಆಕ್ಷನ್ ಕಟ್ ಹೇಳುತ್ತಿರುವ ಬಚ್ಚನ್ ಚಿತ್ರದಲ್ಲಿ ಮೂವರು ನಾಯಕಿಯರು. ಇಬ್ಬರು ನಾಯಕಿಯರು ಈಗಾಗಲೆ ಆಯ್ಕೆಯಾಗಿದ್ದಾರೆ. ಇದೀಗ ಮೂರನೇ ನಾಯಕಿಯಾಗಿ ತುಲಿಪ್ ಜೋಶಿ ಎಂಟ್ರಿಕೊಡುತ್ತಿದ್ದಾರೆ.

  ಉದಯ ಮೆಹ್ತಾ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಮಲ್ಲು ಬೆಡಗಿ ಭಾವನಾ ಹಾಗೂ 'ಗೋವಿಂದಾಯ ನಮಃ' ಚಿತ್ರದ ಮೂಲಕ ಪಡ್ಡೆಗಳ ಹೃದಯಕ್ಕೆ ಗಾಯ ಮಾದಿದ "ಪ್ಯಾರ್ ಗೆ ಆಗ್ಬಿಟ್ಟೈತೆ..." ಬೆಡಗಿ ಪರುಲ್ ಯಾದವ್ ಈಗಾಗಲೆ ಆಯ್ಕೆಯಾಗಿರುವ ತಾರೆಗಳು. ತುಲಿಪ್ ಜೋಶಿ ಈಗಾಗಲೆ ಉಪೇಂದ್ರ ಜೊತೆ 'ಸೂಪರ್' ಚಿತ್ರದಲ್ಲಿ ಅಭಿನಯಿಸಿದ್ದರು.

  ಈಗ 'ಬಚ್ಚನ್' ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ತುಲಿಪ್ ಅಭಿನಯಿಸುತ್ತಿರುವ ಎರಡನೇ ಕನ್ನಡ ಚಿತ್ರವಿದು. 'ಬಚ್ಚನ್' ಚಿತ್ರದಲ್ಲಿ ಅನಿವಾಸಿ ಭಾರತೀಯಳಾಗಿ ತುಲಿಪ್ ಅಭಿನಯಿಸಲಿದ್ದಾರೆ. ಚಿತ್ರದ ಹಾಡೊಂದರಲ್ಲೂ ತುಲಿಪ್ ಜೋಶಿ ಹೆಜ್ಜೆ ಹಾಕಲಿದ್ದಾರೆ.

  ಈಗಾಗಲೆ ಭರದಿಂದ ಸಾಗಿರುವ 'ಬಚ್ಚನ್' ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮುಗಿಸಿಕೊಂಡಿದೆ. ತುಲಿಪ್ ಜೋಶಿ ಭಾಗದ ಚಿತ್ರೀಕರಣ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಶಶಾಂಕ್.

  ಶೇಖರ್ ಚಂದ್ರು ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತವಿರುವ ಈ ಚಿತ್ರದ ಅಡಿಬರಹ 'ಆಂಗ್ರಿ ಯಂಗ್ ಮ್ಯಾನ್'. ಹಿಂದಿಯ 'ಧೋಕಾ' ಚಿತ್ರವನ್ನು ನೋಡಿದ ಬಳಿಕ ತಮ್ಮ ಚಿತ್ರಕ್ಕೆ ಈಕೆಯೇ ಸೂಕ್ತ ನಾಯಕಿ ಅನ್ನಿಸಿತಂತೆ. ಹಾಗಾಗಿ ತುಲಿಪ್ ಅವರನ್ನು 'ಬಚ್ಚನ್' ಚಿತ್ರಕ್ಕೆ ಆಯ್ಕೆ ಮಾಡಿದೆವು ಎನ್ನುತ್ತಾರೆ ಶಶಾಂಕ್.

  ಅನಿವಾಸಿ ಭಾರತೀಯ ಮುಖಕ್ಕಾಗಿ ಹುಡುಕುತ್ತಿದ್ದೆವು. ಕಡೆಗೆ ನಮ್ಮ ಕಣ್ಣಿಗೆ ಬಿದ್ದದ್ದು ತುಲಿಪ್. ಚಿತ್ರಕತೆ ಹಾಗೂ ಪಾತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಶಶಾಂಕ್. ಒಟ್ಟಾರೆಯಾಗಿ ಅವರು ಹೇಳುವುದೇನೆಂದರೆ ದೀಪಾ ಸನ್ನಿಧಿಗೆ ಈಕೆ ಪರ್ಯಾಯ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

  'ಬಚ್ಚನ್' ಚಿತ್ರಕ್ಕೆ ಯಾಕೋ ಏನೋ ಕಾರಣಾಂತರಗಳಿಂದ ನಾಯಕಿಯರ ಮೇಲೆ ನಾಯಕಿಯರು ಬದಲಾಗಿದ್ದರು. ಮೊದಲು ನಯನತಾರಾ ನಾಯಕಿ ಎನ್ನಲಾಗಿತ್ತು. ಬಳಿಕ ಐಂದ್ರಿತಾ ರೇ ಹೆಸರು ಕೇಳಿಬಂದಿತ್ತು. ಕಡೆಗೆ ದೀಪಾ ಸನ್ನಿಧಿ ಎಂಬ ಸುದ್ದಿ ತೇಲಿಬಂದ ಹಿನ್ನೆಲೆಯಲ್ಲೇ ಠುಸ್ ಆಗಿತ್ತು.

  ಅಮಿತಾಬ್ ಬಚ್ಚನ್ ಅವರಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆ ಬರೆಯಲಾಗಿದೆ, ಅದೇ ಕಾರಣದಿಂದ 'ಆಂಗ್ರಿ ಯಂಗ್ ಮ್ಯಾನ್' ಎಂಬ ಅಡಿಬರಹವನ್ನು ಬಚ್ಚನ್ ಚಿತ್ರಕ್ಕೆ ಕೊಡಲಾಗಿದೆ" ಎಂದಿದ್ದಾರೆ ಚಿತ್ರದ ನಿರ್ದೇಶಕ ಶಶಾಂಕ. (ಏಜೆನ್ಸೀಸ್)

  English summary
  B-Town actress Tulip Joshi has been selected as the third heroine for actor Sudeep's new film 'Bachchan - The Angry Young Man', has been directed by Shashank and produced by Uday Mehta. Actress Bhavana and Parul Yadav are the two more heroines of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X