»   » ಉಪ್ಪಿ ಜೊತೆ ಹೆಜ್ಜೆ ಹಾಕಲಿದ್ದಾರೆ ಬಹುಭಾಷಾ ನಟಿ ವೇದಿಕಾ

ಉಪ್ಪಿ ಜೊತೆ ಹೆಜ್ಜೆ ಹಾಕಲಿದ್ದಾರೆ ಬಹುಭಾಷಾ ನಟಿ ವೇದಿಕಾ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ 'ಹೋಮ್ ಮಿನಿಸ್ಟರ್' ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ಟೇರಿದ್ದ 'ಹೋಮ್ ಮಿನಿಸ್ಟರ್' ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಸಲಾಗಿತ್ತು. ಈಗ ಆ ಅವಕಾಶ ಬಹುಭಾಷಾ ನಟಿ ವೇದಿಕಾ ಅವರಿಗೆ ಸಿಕ್ಕಿದೆ.

ವೇದಿಕಾ ಕನ್ನಡದಲ್ಲಿ ಕೊನೆಯದಾಗಿ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರದಲ್ಲಿ ಅಭಿನಯಿಸಿದ್ದರು. ಇದಾದ ನಂತರ ಹೊಸಬರು ತಯಾರಿಸುತ್ತಿರುವ 'ಗೌಡ್ರು ಹೋಟೆಲ್' ಚಿತ್ರದಲ್ಲಿ ವೇದಿಕಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಶೂಟಿಂಗ್ ಹಂತದಲ್ಲಿದೆ.

Actress vedika Heroien for Upendra's Next

ಇದರ ಮಧ್ಯೆ ಈಗ ಉಪ್ಪಿ ಸಿನಿಮಾಗೆ ಆಯ್ಕೆಯಾಗಿದ್ದು, ರಿಯಲ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದಕ್ಕು ಮುಂಚೆ ಉಪೇಂದ್ರ ಹಾಗೂ ನಾಗಣ್ಣ ಕಾಂಬಿನೇಷನ್ ನಲ್ಲಿ ತಯಾರಾಗಲಿರುವ 'ಕನ್ನೇಶ್ವರ' ಚಿತ್ರದಲ್ಲಿ ವೇದಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಅಂದ್ಹಾಗೆ, 'ಹೋಮ್ ಮಿನಿಸ್ಟರ್' ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರಕಥೆಯಾಗಿದ್ದು, ನಾಯಕ ಮತ್ತು ನಾಯಕಿ ಮಧ್ಯೆ ನಡೆಯುವ ಕಥೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಅಭಿಮನ್ಯು ಸಿಂಗ್ ಖಳನಾಯಕನಾಗಿ ಆಯ್ಕೆಯಾಗಿದ್ದಾರೆ. ಸುಜಯ್ ಕೆ ಶ್ರೀ ಹರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಪೂರ್ಣ ನಾಯುಡು ನಿರ್ಮಾಣ ಮಾಡಲಿದ್ದಾರೆ.

English summary
Actress vedika Heroien for Upendra's Kannada-Telugu bilingual Movie Home Minister. The Movie Directed by Sujay K Sree Hari

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada