»   » ಸ್ಯಾಂಡಲ್ ವುಡ್ ನಲ್ಲಿ ಸೊಲ್ಲಾಪುರ ಬೆಡಗಿ ಸೆಕೆಂಡ್ ಇನ್ನಿಂಗ್ಸ್

ಸ್ಯಾಂಡಲ್ ವುಡ್ ನಲ್ಲಿ ಸೊಲ್ಲಾಪುರ ಬೆಡಗಿ ಸೆಕೆಂಡ್ ಇನ್ನಿಂಗ್ಸ್

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ಸೊಲ್ಲಾಪುರದ ಬೆಡಗಿ ಮಿಂಚಿದ್ದು ಬಹಳ ಕಡಿಮೆ. ಕನ್ನಡದಲ್ಲಿ ಅಭಿನಯಿಸಿದ್ದು ಒಂದೇ ಒಂದು ಚಿತ್ರವಾದರೂ ಚಿತ್ರರಸಿಕರ ಮನಸ್ಸಿನಲ್ಲಿ ಮಾತ್ರ ಚಿರಮುದ್ರೆಯನ್ನು ಒತ್ತಿದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಸಂಗಮ'ದಲ್ಲಿ ಅಭಿನಯಿಸಿದ್ದ ವೇದಿಕಾ ಇದೀಗ ಮತ್ತೆ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಚಿತ್ರಕ್ಕೆ ನಾಯಕಿಯಾಗಿ ವೇದಿಕಾ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಸಿಬಿಐ ಅಧಿಕಾರಿಯಾಗಿ ಕಾಣಿಸುತ್ತಿದ್ದು, ಇದೇ ಡಿಸೆಂಬರ್ 15ಕ್ಕೆ ಚಿತ್ರ ಸೆಟ್ಟೇರುತ್ತಿದೆ. ಹಲವು ಯಶಸ್ವಿ ಚಿತ್ರಗಳ ಸೂತ್ರಧಾರ ಪಿ.ವಾಸು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ಲಾಂಗು, ಮಚ್ಚಿಗೆ ಗುಡ್ ಬೈ ಹೇಳಿದ ಹ್ಯಾಟ್ರಿಕ್ ಹೀರೋ]

Actress Vedika second innings in Sandalwood

'ಗೋವಿಂದಾಯ ನಮಃ' ಚಿತ್ರವನ್ನು ನಿರ್ಮಿಸಿದ್ದ ಸುರೇಶ್ ಅವರು 'ಶಿವಲಿಂಗ'ಕ್ಕೆ ಕಾಸಿನ ಅಭಿಷೇಕ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತದ ಜಡಿಮಳೆಯ ಚಿತ್ರದ ರೆಗ್ಯುಲರ್ ಶೂಟಿಂಗ್ ಡಿಸೆಂಬರ್ 28ರಿಂದ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಬುಗುರಿ' ಚಿತ್ರದಲ್ಲಿ ಅಭಿನಯಿಸಿ ಮಧ್ಯಂತರದಲ್ಲೇ ವೇದಿಕಾ ಚಿತ್ರದಿಂದ ಹೊರಬಿದ್ದಿದ್ದರು. ತೆಲುಗು, ತಮಿಳಿನಲ್ಲಿ ವೇದಿಕಾ ಬಿಜಿಯಾಗಿದ್ದರೂ ಕನ್ನಡದಲ್ಲಿ ಮಾತ್ರ 'ಶಿವಲಿಂಗ' ಎರಡನೇ ಇನ್ನಿಂಗ್ಸ್.

ಈ ಬಾರಿ ವಾಸು ಕೋಲಿವುಡ್ ನ ಚೆಲುವೆಗೆ ಮಣೆಹಾಕಲಿದ್ದಾರೆ ಎನ್ನಲಾಗಿತ್ತು. ಅವರ ಮನಸ್ಸಿನಲ್ಲಿ 'ಸಂಗಮ'ದ ಚೆಲುವೆ ಇದ್ದರು ಎಂಬುದು ಈಗ ಬಹಿರಂಗವಾಗಿದೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ, ಆರ್ ಎಕ್ಸ್ ಸೂರಿ ಚಿತ್ರಗಳನ್ನು ನಿರ್ಮಿಸಿದ್ದ ಸುರೇಶ್ ಅವರು ಶಿವಲಿಂಗ ಚಿತ್ರದ ನಿರ್ಮಾಪಕರು. ಬೆಳ್ಳಿ ಚಿತ್ರದಲ್ಲಿ ಒಂದೇ ಹಿಡಿಯ ಐದು ಲಾಂಗ್ ಗಳನ್ನು ಝಳಪಿಸಿದ್ದ ಶಿವಣ್ಣ ಈಗ ಸಿಐಡಿ ಅಧಿಕಾರಿಯಾಗಿ ಗನ್ ಹಿಡಿಯುತ್ತಿದ್ದಾರೆ.

English summary
After a long gap actress Vedika back to Sandalwood. The actress play a lead role opposite to Hat Trick Hero Shivrajkumar in his upcoming movie 'Shivalina'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada