For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಡರ್ಟಿ' ಬ್ಯೂಟಿ

  By ಉದಯರವಿ
  |

  ಈ ಹಿಂದೆಯೇ ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡ ಈ ಬಗ್ಗೆ ಸುದ್ದಿಯನ್ನು ನಿಮ್ಮ ಕಿವಿಗೆ ಹಾಕಿತ್ತು. ಈಗ ಆ ಸುದ್ದಿ ಬಹುತೇಕ ನಿಜವಾಗುವ ದಿನಗಳು ಹತ್ತಿರವಾಗಿವೆ. ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರದಲ್ಲಿ ಡರ್ಟಿ ಬ್ಯೂಟಿ ವಿದ್ಯಾಬಾಲನ್ ಅಭಿನಯಿಸಲಿದ್ದಾರೆ ಎನ್ನುತ್ತವೆ ಮೂಲಗಳು.

  ಈಗಾಗಲೆ 'ಉಪ್ಪಿ 2' ಚಿತ್ರತಂಡ ವಿದ್ಯಾಬಾಲನ್ ಅವರಿಗೆ ತಮ್ಮ ಚಿತ್ರದಲ್ಲಿ ಬಣ್ಣ ಹಚ್ಚಲು ಕೇಳಿದೆ. ಈ ಬಗ್ಗೆ ವಿದ್ಯಾಬಾಲನ್ ಗ್ರೀನ್ ಸಿಗ್ನಲ್ ಕೊಡುವುದೊಂದು ಮಾತ್ರ ಬಾಕಿ ಇದೆ. ಚಿತ್ರದಲ್ಲಿ ವಿದ್ಯಾ ಅಭಿನಯಿಸುವುದು ಗ್ಯಾರಂಟಿಯಾದರೆ ಮತ್ತೊಮ್ಮೆ ಮಸ್ತು ಮಸ್ತು ಬೆಡಗಿ ಬಂದ್ಲು ಹಾಯಿ ಹಾಯಿ ರೋ ಇಲ್ಲದಿದ್ದರೆ ಓಳು ಬರಿ ಓಳು ಹಾಡು ರಿಪೀಟ್ ಆಗುತ್ತದೆ ಅಷ್ಟೆ. [ವಿದ್ಯಾ ಬಾಲನ್ ಮದುವೆ ಹೈಲೈಟ್ಸ್, ಸುದ್ದಿ ಚಿತ್ರಗಳು]

  ಸದ್ಯಕ್ಕೆ ಉಪೇಂದ್ರ ಅವರು ತಮ್ಮ 'ಉಪ್ಪಿ 2' ಚಿತ್ರದ ಹಾಡಿನ ರೆಕಾರ್ಡಿಂಗ್ ನಲ್ಲಿ ಬಿಜಿಯಾಗಿದ್ದಾರೆ. ವಿಶೇಷ ಎಂದರೆ ನ್ಯೂಯಾರ್ಕ್ ನಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿಸುತ್ತಿದ್ದಾರೆ. ಉಪ್ಪಿ ಚಿತ್ರಗಳಲ್ಲಿ ಹಾಡುಗಳು ಹಾಗೂ ಡೈಲಾಗ್ಸ್ ಗೆ ಬಹಳ ಪ್ರಾಮುಖ್ಯತೆ ಇರುತ್ತದೆ ಎಂಬುದು ಗೊತ್ತೇ ಇದೆ.

  1999ರಲ್ಲಿ ಬಂದ ಉಪೇಂದ್ರ ಸಿನಿಮಾದಲ್ಲಿ ನಾನು ಯಾರು ಅನ್ನೋ ತರ್ಕ ಮಾಡಿ ತಲೆಗೆ ಹುಳಬಿಟ್ಟ ಉಪ್ಪಿ ಮತ್ತೆ ತಾನು ಡಿಫ್ರೆಂಟ್ ಅಂತ ಉಪ್ಪಿ 2 ಆಮಂತ್ರಣ ಪತ್ರಿಕೆಯಲ್ಲಿ ಕನ್ನಡಿ ಕೊಟ್ಟು ಪ್ರೂವ್ ಮಾಡಿದ್ದಾರೆ.

  ಟೈಟಲ್ ಇಲ್ದೇ ಸಿಂಬಲ್ ಇಟ್ಟು ಸಿನಿಮಾ ಮಾಡಿದ ಉಪ್ಪಿಗೆ, ಈಗ ಟೈಟಲ್ ಇಲ್ಲದೇನೂ ಸಿನಿಮಾ ಮಾಡ್ತೀನಿ ಅಂತಿರೋ ಉಪ್ಪಿಗೇ ಇದೇನು ಕಷ್ಟದ ಮಾತಾ ಅಂತ ಮಾತಾಡಿಕೊಳ್ತಿದೆ ಗಾಂಧಿನಗರ. ಉಪ್ಪಿ ಏನೇ ಮಾಡಿದ್ರೂ ಸೂಪರ್ ಅಲ್ವಾ. ಉಪ್ಪಿಟ್ಟಲ್ಲಿ ವಿದ್ಯಾ ಬಾಲನ್ ಅವರೇಕಾಳಾಗಲಿದ್ದಾರಾ?

  English summary
  Sandalwood sources says, Bollywood actress Vidya Balan all set to debut Sandalwood. The dirty girl may act in Real Star Upendra's upcoming film 'Uppi 2', which will be directed and produced by the actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X