For Quick Alerts
  ALLOW NOTIFICATIONS  
  For Daily Alerts

  ಎನ್ ಟಿ ಆರ್ ಹೆಂಡತಿ ಪಾತ್ರದಲ್ಲಿ ವಿದ್ಯಾ ಬಾಲನ್ ನಟನೆ

  By Naveen
  |

  ಬಾಲಿವುಡ್ ನಟಿ ವಿದ್ಯಾ ಬಾಲನ್ ಈಗ ಮತ್ತೆ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿದ್ದಾರೆ. ಟಾಲಿವುಡ್ ನಲ್ಲಿ ನಿರ್ಮಾಣ ಆಗುತ್ತಿರುವ ಬಹುನಿರೀಕ್ಷಿತ ಸಿನಿಮಾವಾದ ಎನ್ ಟಿ ಆರ್ ಜೀವನಾದಾರಿತ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

  ತೆಲುಗು ಚಿತ್ರರಂಗದ ಧ್ರುವತಾರೆ ಎನ್ ಟಿ ರಾಮರಾವ್ ಅವರ ಬಯೋಪಿಕ್ ಪ್ರತಿ ಹಂತದಲ್ಲಿಯೂ ಸುದ್ದಿ ಮಾಡುತ್ತಿದೆ. ಈಗ ಚಿತ್ರಕ್ಕೆ ನಾಯಕಿಯಾಗಿ ವಿದ್ಯಾ ಬಾಲನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ಎನ್ ಟಿ ಆರ್ ಅವರ ಪತ್ನಿ ಬಸವತಾರಕಮ್ ಅವರ ಪಾತ್ರದಲ್ಲಿ ವಿದ್ಯಾ ಕಾಣಿಸಿಕೊಳ್ಳಲಿದ್ದಾರೆ.

  NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.! NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.!

  ಇನ್ನು ಎನ್ ಟಿ ಆರ್ ಪಾತ್ರದಲ್ಲಿ ಅವರ ಮಗ, ಖ್ಯಾತ ನಟ ಬಾಲಕೃಷ್ಣ ಅವರೇ ಬಣ್ಣ ಹಚ್ಚಿದ್ದಾರೆ. ತೆರೆ ಮೇಲೆ ಅಪ್ಪನಾಗಿ ಮಗ ಮಿಂಚಿದ್ದಾರೆ. ಕ್ರಿಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಾಲಕೃಷ್ಣ ಅವರೇ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

  ಎನ್ ಟಿ ಆರ್ ಅವರು ಒಬ್ಬ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಾಗದೆ, ಒಬ್ಬ ರಾಜಕಾರಣಿ ಕೂಡ ಆಗಿದ್ದರು. ಏಳು ವರ್ಷ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಜನ ಮೆಚ್ಚಿದ ನಾಯಕನಾಗಿದ್ದರು. ಈ ಎಲ್ಲ ಕಾರಣಗಳಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಜೊತೆಗೆ ಎನ್ ಟಿ ಆರ್ ಹಾಗೂ ರಾಜ್ ಕುಮಾರ್ ಅವರ ನಡುವೆ ಒಳ್ಳೆಯ ಸ್ನೇಹ ಇದ್ದು, ಈ ಚಿತ್ರದಲ್ಲಿ ರಾಜ್ ಕುಮಾರ್ ಅವರ ದೃಶ್ಯಗಳು ಸಹ ಇರಲಿವೆ ಎಂದು ಹೇಳಲಾಗುತ್ತಿದೆ.

  English summary
  Bollywood actress Vidya Balan to play NT Rama rao's wife role in his biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X