For Quick Alerts
  ALLOW NOTIFICATIONS  
  For Daily Alerts

  ನಟಿ ವಿಜಯಲಕ್ಷ್ಮಿ-ರವಿಪ್ರಕಾಶ್ ಪ್ರಕರಣಕ್ಕೆ ಸಖತ್ ಟ್ವಿಸ್ಟ್

  |

  ನಾಗಮಂಡಲ, ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತು ರವಿಪ್ರಕಾಶ್ ಅವರ ನಡುವೆ ಕಳೆದ ವರ್ಷ ನಡೆದಿದ್ದ ವಿವಾದ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

  ನಟಿ ವಿಜಯಲಕ್ಷ್ಮಿ ಅವರು ರವಿಪ್ರಕಾಶ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಠಾಣೆಯಲ್ಲಿ ದೂರು ನೀಡಿದ್ದರು. ರವಿಪ್ರಕಾಶ್ ಬಂಧನವಾಗಬೇಕು ಎಂದು ಒತ್ತಾಯಿಸಿ ಆಸ್ಪತ್ರೆಯಲ್ಲಿಯೇ ಪ್ರತಿಭಟಿಸಿದ್ದರು. ರವಿಪ್ರಕಾಶ್ ಸಹ ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿದ್ದರು.

  ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಜಯಲಕ್ಷ್ಮಿ ಅವರ ಸಹೋದರಿ ರವಿಪ್ರಕಾಶ್ ಅವರ ಬಳಿ ಕ್ಷಮಾಪಣೆ ಕೇಳಿದ್ದು, ಆಗ ಮಾಡಿದ್ದ ಆರೋಪ, ದೂರು ಎಲ್ಲವೂ ಸಂದರ್ಭದ ಒತ್ತಡದಲ್ಲಿ ಮಾಡಿದ್ದು ಎಂದು ಹೇಳಿದ್ದಾರೆ.

  ನಟಿ ವಿಜಯಲಕ್ಷ್ಮಿ ಸಹೋದರಿಯಿಂದ ಕರೆ

  ನಟಿ ವಿಜಯಲಕ್ಷ್ಮಿ ಸಹೋದರಿಯಿಂದ ಕರೆ

  ಇದೀಗ ನಟ ರವಿಪ್ರಕಾಶ್ ಅವರು ವಿಡಿಯೋ ಒಂದನ್ನು ಮಾಡಿದ್ದು, 'ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಅವರು ಕರೆ ಮಾಡಿ ಕ್ಷಮಾಪಣೆ ಕೋರಿದ್ದಾರೆ. ನೀವು (ರವಿಪ್ರಕಾಶ್) ನಮಗೆ ಸಹಾಯ ಮಾಡುವ ಉದ್ದೇಶದಿಂದ ಬಂದಿರಿ, ಆದರೆ ನಾವು ಸರಿಯಾಗಿ ವರ್ತಿಸಲಿಲ್ಲ' ಎಂದು ಕ್ಷಮಾಪಣೆ ಕೇಳಿದ್ದಾರೆಂದು ರವಿಪ್ರಕಾಶ್ ವಿಡಿಯೋದಲ್ಲಿ ಹೇಳಿದ್ದಾರೆ.

  ಆಡಿಯೋ ಹಂಚಿಕೊಂಡಿರುವ ರವಿಪ್ರಕಾಶ್

  ಆಡಿಯೋ ಹಂಚಿಕೊಂಡಿರುವ ರವಿಪ್ರಕಾಶ್

  ಇದಕ್ಕೆ ಸಂಬಂಧಿಸಿದಂತೆ ಕಾಲ್‌ ರೆಕಾರ್ಡ್ ಆಡಿಯೋ ಒಂದನ್ನು ಹಂಚಿಕೊಂಡಿರುವ ರವಿಪ್ರಕಾಶ್, ಅದರಲ್ಲಿ ವಿಜಯಲಕ್ಷ್ಮಿ ಸಹೋದರಿ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬರು ರವಿಪ್ರಕಾಶ್ ಅವರ ಬಳಿ ಕ್ಷಮಾಪಣೆ ಕೇಳುತ್ತಾರೆ. ಕೆಟ್ಟ ಗಳಿಗೆಯಲ್ಲಿ ಅದೆಲ್ಲಾ ಘಟನೆಗಳು ಆಗಿಬಿಟ್ಟಿತು ಎಂದು ಹೇಳುತ್ತಾರೆ.

  ರವಿಪ್ರಕಾಶ್ ವಿರುದ್ಧ ದೂರು

  ರವಿಪ್ರಕಾಶ್ ವಿರುದ್ಧ ದೂರು

  ವಿಜಯಲಕ್ಷ್ಮಿ ಅನಾರೋಗ್ಯದಿಂದ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ರವಿಪ್ರಕಾಶ್ ಎಂಬ ನಟನ ಮೇಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ರವಿಪ್ರಕಾಶ್ ಬಂಧನ ಆಗುವವರೆಗೂ ಅನ್ನ-ನೀರು ಮುಟ್ಟುವುದಿಲ್ಲವೆಂದು ಪ್ರತಿಭಟನೆ ಮಾಡಿದ್ದರು.

  ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪ

  ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪ

  ಅದಾದ ನಂತರ ನಟ ರವಿಪ್ರಕಾಶ್ ಅವರೂ ಸಹ ಠಾಣೆಯಲ್ಲಿ ವಿಜಯಲಕ್ಷ್ಮಿ ಹಾಗೂ ಸಹೋದರಿ ಉಷಾದೇವಿ ವಿರುದ್ಧ ಕಿರುಕುಳ ಹಾಗೂ ಸಾಲದ ಹಣ ವಾಪಸ್ ಕೇಳಿದಾಗ ನಿಂದನೆ ದೂರು ದಾಖಲಿಸಿದ್ದರು. ಇಬ್ಬರೂ ಆಗ ಮಾಧ್ಯಮಗಳ ಮುಂದೆ ಪರಸ್ಪರ ಆರೋಪಗಳನ್ನು ಮಾಡಿದ್ದರು.

  ಸಮನ್ಸ್‌ ಕಳಿಸುವುದಾಗಿ ಹೇಳಿದ ರವಿಪ್ರಕಾಶ್

  ಸಮನ್ಸ್‌ ಕಳಿಸುವುದಾಗಿ ಹೇಳಿದ ರವಿಪ್ರಕಾಶ್

  ಆದರೆ ಇದೀಗ ಉಷಾದೇವಿ ರವಿಪ್ರಕಾಶ್ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ರವಿಪ್ರಕಾಶ್, ತಾವು ಕ್ಷಮೆಯನ್ನು ಸ್ವೀಕರಿಸಿಲ್ಲ ಎಂದಿದ್ದು, ಇದೇ ಆಧಾರದಲ್ಲಿ ಸಮನ್ಸ್ ಒಂದನ್ನು ಕಳಿಸುವುದಾಗಿ ಹೇಳಿದ್ದಾರೆ.

  English summary
  Actress Vijayalakshmi who gave complaint against Raviprakash now ask apology. Vijayalakshmi's sister Ushadevi called Raviprakash and ask sorry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X