Don't Miss!
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೃಜನ್‌ಗೆ ನಾನು ಯಾಮಾರಿಸಿಲ್ಲ: ಗರಂ ಆದ ನಟಿ ವಿಜಯಲಕ್ಷ್ಮಿ
ಸೃಜನ್ ಲೋಕೇಶ್‌ನನ್ನು ಮದುವೆ ಆಗದಿದ್ದಕ್ಕೆ ಬೀದಿಗೆ ಬಂದೆ, ಸೃಜನನ್ನು ಯಾಮಾರಿಸಿದ್ರಿ ಎಂದವರ ವಿರುದ್ಧ ನಟಿ ವಿಜಯಲಕ್ಷ್ಮಿ ಫುಲ್ ಗರಂ ಆಗಿದ್ದಾರೆ. ಇತ್ತೀಚಿಗೆ ವಿಡಿಯೋ ಮೂಲಕ ಸಹಾಯ ಕೋರಿದ್ದ ನಟಿ ವಿಜಯಲಕ್ಷ್ಮಿ ಈಗ ನೆಟ್ಟಿಗರ ಕಾಮೆಂಟ್ಸ್ ನೋಡಿ ಸಿಟ್ಟಿಗೆದ್ದಿದ್ದಾರೆ. ನೀವೆಲ್ಲ ನಾನು ಸಾಯುವುದನ್ನೇ ಕಾಯುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
Recommended Video
ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದರು. ಜೊತೆಗೆ ಉಷಾ ಅವರ ಪತಿ ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜ್ ಬಾಬು ಅವರ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ, ಇನ್ನು ವಿಚ್ಛೇದನ ನೀಡಿಲ್ಲ, ನಟಿ ಜಯಪ್ರದಾ ಮೋಸ ಮಾಡಿದ್ದಾರೆ, ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ ಯಾಕೆ ಎಂದು ಕಿಡಿಕಾರಿದ್ದಾರೆ. ಮುಂದೆ ಓದಿ...

ಸೃಜನ್‌ನನ್ನು ಮದುವೆಯಾಗದೆ ಬೀದಿಗೆ ಬಂದ್ರಾ ವಿಜಯಲಕ್ಷ್ಮಿ?
ವಿಡಿಯೋ ಮೂಲಕ ನಟಿ ವಿಜಯಲಕ್ಷ್ಮಿ ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ, ಸೃಜನ್ ಲೋಕೇಶ್ ನನ್ನು ಮದುವೆಯಾಗಿದ್ದಕ್ಕೆ ಬೀದಿಗೆ ಬಂದ್ರಿ, ಸೃಜನ್ನನ್ನು ಯಾಮಾರಿಸಿ ಹೋದ್ರಿ ಎಂದವರ ವಿರುದ್ಧ ವಿಜಯಲಕ್ಷ್ಮಿ ಸಿಟ್ಟಿಗೆದ್ದಿದ್ದಾರೆ. ಈ ಬಗ್ಗೆ ಎಲ್ಲರೂ ಕಾಮೆಂಟ್ ಮಾಡುತ್ತೀರಿ ಆದರೆ ಉಷಾ ಅವರಿಗೆ ಆದ ಅನ್ಯಾಯದ ಬಗ್ಗೆ ಯಾಕೆ ಯಾರು ಕೇಳುತ್ತಿಲ್ಲ ಎಂದಿದ್ದಾರೆ.

ಸೃಜನ್ ಅವರಿಗೆ ನಾನು ಯಾಮಾರಿಸಿಲ್ಲ
'ಸೃಜನ್ ಅವರಿಗೆ ನಾನು ಯಾಮಾರಿಸಿಲ್ಲ. ಯಾಮಾರಿಸಬೇಕಾದರೆ ನಾನು ಅಷ್ಟು ಖರ್ಚು ಮಾಡಿ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿರಲಿಲ್ಲ. ನನ್ನ ಕಥೆಯೇ ಬೇರೆ ಇದೆ. ಆದರೆ ಅದನ್ನು ಯಾರು ಕೇಳಲ್ಲ, ಬರೆಯಲ್ಲ. ವಿಜಯಲಕ್ಷ್ಮಿ ಅಂದ್ರೇನೆ ವಿಲನ್ ಹಾಗೆ ನೋಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಸೃಜನ್ ಬಗ್ಗೆ ಅಂದು ವಿಜಯಲಕ್ಷ್ಮಿ ಹೇಳಿದ್ದೇನು?
ಈ ಮೊದಲು ಸಂದರ್ಶವೊಂದರಲ್ಲಿ ಮಾತನಾಡಿದ್ದ ವಿಜಯಲಕ್ಷ್ಮಿ, 'ಸೃಜನ್ ಲೋಕೇಶ್ ಅವರ ಜೊತೆಗೆ ಎಂಗೇಜ್ ಮೆಂಟ್ ವರೆಗೂ ಬಂತು. ಕೊನೆಗೆ ಸ್ವಲ್ಪ ಮನಸ್ತಾಪ ಆಯ್ತು. ವಿವಾದಗಳು ನನ್ನ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು' ಎಂದಿದ್ದರು.

ವಿಜಯಲಕ್ಷ್ಮಿ ಸತ್ತ ಸುದ್ದಿ ಕೇಳಬೇಕಾ?
ಇವತ್ತು ಎಲ್ಲರೂ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ಯಾವಾಗ್ಲು ಅವರಿಗೆ ಸಹಾಯ ಮಾಡುತ್ತಾ ಇರೋಕೆ ಆಗುತ್ತಾ ಎಂದು ಶಿವಣ್ಣ ಹೇಳಿದನ್ನೆ ಎಲ್ಲರೂ ಹೇಳುತ್ತಿದ್ದಾರೆ. ವಿಜಯಲಕ್ಷ್ಮಿ ಹಾಗೆ ಮಾಡಿದ್ಲು, ಹೀಗೆ ಮಾಡಿದ್ಲು ಅಂತಿದ್ದಾರೆ. ನೀವೆಲ್ಲ ನನ್ನ ಕುಟುಂಬ ಅಂತ ಹೇಳಿದ್ದು ನಾನು. ವಿಜಯಲಕ್ಷ್ಮಿ ಸತ್ತೋಗಬೇಕಾ, ಆ ಸುದ್ದಿ ಕೇಳಬೇಕಾ..ಎಲ್ಲರೂ ಅದನ್ನು ಆಸೆ ಪಡುತ್ತೀರಾ' ಎಂದು ಪ್ರಶ್ನೆ ಮಾಡಿದ್ದಾರೆ.

ಜಯಪ್ರದಾಗೆ ಯಾಕೆ ಶಾಪ ಹಾಕುತ್ತಿಲ್ಲ?
'ಎಲ್ಲರೂ ನನಗೆ ಶಾಪ ಹಾಕುತ್ತಿದ್ದೀರಾ. ಆದರೆ ಇದೇ ಶಾಪ ಜಯಪ್ರದಾಗೆ ಯಾಕೆ ಹಾಕಲ್ಲ ನೀವು. ಪ್ರಪಂಚದಲ್ಲಿ ಎಲ್ಲರೂ ಡೈವೋರ್ಸ್ ಮಾಡಿದ್ದಾರೆ. ಆದರೆ ನಮ್ಮ ಅಕ್ಕನಿಗೆ ಯಾಕೆ ಹೀಗೆ ಆಗಿದ್ದು, ನನ್ನ ಕಡೆಯೂ ತುಂಬ ನಿಜ ಇದೆ. ಆದರೆ ಅದು ಯಾರಿಗೂ ಬೇಡ, ಅದನ್ನು ಯಾರು ಬರೆಯಲ್ಲ, ಪರವಾಗಿಲ್ಲ ಬಿಡಿ. ಅದೇನೂ ಮಾಡಬೇಕೊ ದೇವರು ಮಾಡುತ್ತಾನೆ, ದೇವರ ಆಶೀರ್ವಾದ ವಿದೆ' ಎಂದಿದ್ದಾರೆ.