»   » ಮಗಳ ಚಿತ್ರಕ್ಕೆ ಅಮ್ಮನೇ ಡೈರೆಕ್ಟರ್!

ಮಗಳ ಚಿತ್ರಕ್ಕೆ ಅಮ್ಮನೇ ಡೈರೆಕ್ಟರ್!

Posted By:
Subscribe to Filmibeat Kannada

ಬಹುಭಾಷಾ ನಟಿ ವಿನಯ ಪ್ರಕಾಶ್ (ವಿನಯ ಪ್ರಸಾದ್) ಈಗ ನಿರ್ದೇಶಕಿ ವಿನಯ ಪ್ರಕಾಶ್ ಆಗಲು ಹೊರಟಿದ್ದಾರೆ. ಇಷ್ಟು ದಿನ ತಮ್ಮ ನಟನೆ ಮೂಲಕ ಕಲಾಭಿಮಾನಿಗಳನ್ನ ರಂಜಿಸಿದ್ದ ನಟಿ, ಈಗ ಹೊಸ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರಂತೆ.

ವಿಶೇಷ ಅಂದ್ರೆ, ಈ ಚಿತ್ರದ ಮೂಲಕ ವಿನಯ ಪ್ರಕಾಶ್ ಅವರ ಮಗಳು 'ಪ್ರಥಮಾ' ಬೆಳ್ಳಿತೆರೆ ಪ್ರವೇಶ ಮಾಡಲಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ''ಲಕ್ಷ್ಮಿ ನಾರಾಯಣರ ಪ್ರಪಂಚವೇ ಬೇರೆ'' ಎಂಬ ವಿಭಿನ್ನ ಶೀರ್ಷಿಕೆಯನ್ನ ಇರಿಸಲಾಗಿದೆ.

Actress Vinaya Prasad to Turn Director

ಚೊಚ್ಚಲ ಸಿನಿಮಾದಲ್ಲೇ ಹೊಸ ರೀತಿಯ ಟೈಟಲ್ ಇಟ್ಟು ಕುತೂಹಲ ಮೂಡಿಸಿರುವ ವಿನಯ ಪ್ರಕಾಶ್ ಅವರು ನಾಲ್ಕು ಪಾತ್ರಗಳ ಸುತ್ತ ಕಥೆ ಮಾಡಿದ್ದು, ಒಂದೊಳ್ಳೆ ಸಾಮಾಜಿಕ ಸಂದೇಶ ನೀಡುವ ಸಿನಿಮಾ ಇದಾಗಲಿದೆಯಂತೆ.

ಈ ಸಿನಿಮಾ ವಿನಯ ಪ್ರಕಾಶ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವುದ್ರಿಂದ, ನಿರ್ಮಾಣ ಕೂಡ ಅವರೇ ಮಾಡಲಿದ್ದಾರಂತೆ. ಸದ್ಯ, ಪ್ರಿ-ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆದಷ್ಟೂ ಬೇಗ ಶೂಟಿಂಗ್ ಶುರು ಮಾಡಲಿದ್ದಾರಂತೆ.

English summary
Veteran Actress is soon set to turn director. Titled ''Laxminarayanara Prapanchane Bere'', the film will be a rib-tickler with a social Message.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada