For Quick Alerts
  ALLOW NOTIFICATIONS  
  For Daily Alerts

  ಸಹಾಯ ಮಾಡಿ ಹಿರಿಯ ನಟನೊಬ್ಬನ ಜೀವ ಕಾಪಾಡಿದ ಪ್ರಕಾಶ್ ರೈ

  |

  ಪಂಚ ಭಾಷಾ ನಟ ಪ್ರಕಾಶ್ ರೈ ತಮ್ಮ ಅಭಿನಯದ ಜೊತೆಗೆ, ಸಾಮಾಜಿಕ ಕಳಕಳಿ, ಬರವಣಿಗೆ, ಮಾತುಗಾರಿಕೆಯಿಂದಲೂ ಗುರುತಿಸಿಕೊಂಡವರು. ರಾಜಕೀಯದ ಬಗ್ಗೆಯೂ ಅತೀವ ಆಸಕ್ತಿಯುಳ್ಳ ಪ್ರಕಾಶ್ ರಾಜ್ ಚುನಾವಣೆಗೂ ಸ್ಪರ್ಧಿಸಿದ್ದರು.

  ಇವಿಷ್ಟೆ ಅಲ್ಲದೆ ಕಲಾವಿದರ ಅಭಿವೃದ್ಧಿ, ಭದ್ರತೆ ಬಗ್ಗೆಯೂ ಪ್ರಕಾಶ್ ರೈ ಗೆ ಅತೀವ ಕಾಳಜಿ. ಪ್ರಕಾಶ್ ರೈ ಅವರ ಇದೇ ಕಾಳಜಿ ನಟನೊಬ್ಬನ ಜೀವ ಉಳಿಯುವಂತೆ ಮಾಡಿದೆ. ನಟರೊಬ್ಬರು ಪ್ರಕಾಶ್ ರೈ ಹೇಗೆ ಹಿರಿಯ ನಟರೊಬ್ಬರ ಜೀವ ಉಳಿಸಿದರು ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

  ತೆಲುಗು ನಟ ಶಿವಾಜಿ ರಾಜಾ ಅವರು ಇತ್ತೀಚೆಗೆ ಮಾಧ್ಯಮಗಳ ಸಂದರ್ಶನದಲ್ಲಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆತ್ಮಹತ್ಯೆ ನಿರ್ಣಯ ಮಾಡಿದ್ದ ತೆಲುಗು ಸಿನಿರಂಗದ ಹಿರಿಯ ನಟರೊಬ್ಬರ ಜೀವವನ್ನು ಪ್ರಕಾಶ್ ರೈ ಹೇಗೆ ಉಳಿಸಿದರು ಎಂದು ವಿವರಿಸಿದ್ದಾರೆ. ವಿವರಗಳಿಗಾಗಿ ಮುಂದೆ ಓದಿ...

  ಸಾಲ ಮಾಡಿಕೊಂಡಿದ್ದ ಹಿರಿಯ ನಟ

  ಸಾಲ ಮಾಡಿಕೊಂಡಿದ್ದ ಹಿರಿಯ ನಟ

  ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು ಸುಮಾರು 50 ಲಕ್ಷ ಸಾಲ ಮಾಡಿಕೊಡ್ಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಒದ್ದಾಡಿದ್ದ ಅವರು ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ನಿರ್ಣಯ ಮಾಡಿದ್ದರಂತೆ.

  ಶಿವಾಜಿ ರಾಜಾ ಗೆ ಕರೆ ಮಾಡಿದ್ದ ಪ್ರಕಾಶ್ ರೈ

  ಶಿವಾಜಿ ರಾಜಾ ಗೆ ಕರೆ ಮಾಡಿದ್ದ ಪ್ರಕಾಶ್ ರೈ

  ಇದು ಪ್ರಕಾಶ್ ರೈ ಅವರ ಗಮನಕ್ಕೆ ಬಂದು, ಶಿವಾಜಿ ರಾಜಾ ಅವರಿಗೆ ಕರೆ ಮಾಡಿ, ಆ ಹಿರಿಯ ನಟರನ್ನು ಕರೆತರುವಂತೆ ಹೇಳಿದ್ದಾರೆ. ಅದರಂತೆ ಶಿವಾಜಿ ರಾಜಾ ಆ ಹಿರಿಯ ನಟರನ್ನು ಪ್ರಕಾಶ್ ರೈ ಅವರಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.

  ಭಾರಿ ಮೊತ್ತದ ಹಣ ಸಹಾಯ ಮಾಡಿದ ಪ್ರಕಾಶ್ ರೈ

  ಭಾರಿ ಮೊತ್ತದ ಹಣ ಸಹಾಯ ಮಾಡಿದ ಪ್ರಕಾಶ್ ರೈ

  ಹಿರಿಯ ನಟರ ಕಷ್ಟವನ್ನೆಲ್ಲಾ ಕೇಳಿದ ಪ್ರಕಾಶ್ ರೈ, ಐವತ್ತು ಲಕ್ಷ ಹಣವನ್ನು ಅವರಿಗೆ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ, ಹಿರಿಯ ನಟರಿಗೆ ಧೈರ್ಯ ತುಂಬಿ ಕಷ್ಟಕ್ಕೆ ಸಹಾಯ ಮಾಡುವುದಾಗಿ ಹೇಳಿ ಕಳುಹಿಸಿದ್ದಾರೆ.

  ಇಷ್ಟು ದಿನವಾದರೂ ಹಣ ವಾಪಸ್ ಪಡೆದಿಲ್ಲ ಪ್ರಕಾಶ್ ರೈ

  ಇಷ್ಟು ದಿನವಾದರೂ ಹಣ ವಾಪಸ್ ಪಡೆದಿಲ್ಲ ಪ್ರಕಾಶ್ ರೈ

  ಹಿರಿಯ ನಟ ಸಾಲವನ್ನೆಲ್ಲಾ ತೀರಿಸಿ ಆರಾಮವಾಗಿದ್ದಾರೆ. ನಟ ಪ್ರಕಾಶ್ ರೈ ಇಷ್ಟು ದಿನವಾದರೂ ಆ ಹಿರಿಯ ನಟನಿಂದ ಐವತ್ತು ಲಕ್ಷ ಹಣವನ್ನು ವಾಪಸ್ ಪಡೆದಿಲ್ಲ ಎಂದು ಹೇಳಿದ್ದಾರೆ ಶಿವಾಜಿ ರಾಜಾ.

  ಪ್ರಕಾಶ್ ರೈ ಮಾನವೀಯತೆ ಉದಾಹರಣೆ ಈ ಘಟನೆ

  ಪ್ರಕಾಶ್ ರೈ ಮಾನವೀಯತೆ ಉದಾಹರಣೆ ಈ ಘಟನೆ

  ತಮ್ಮ ಸಿಟ್ಟಿನ ವರ್ತನೆಯಿಂದ ಕೆಲ ಬಾರಿ ತೆಲುಗು ಸಿನಿರಂಗದಿಂದ ಬಹಿಷ್ಕಾರ ಅನುಭವಿಸಿರುವ ನಟ ಪ್ರಕಾಶ್ ರೈ, ಆಂತರ್ಯದಲ್ಲಿ ಮೃದು ಮನಸ್ಸಿನ, ಮನುಷ್ಯ ಪ್ರೀತಿಯ ನಟ ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆ.

  English summary
  Actor Prakash Raj saved a Telugu senior actor's life by helping him. Actor was in debt and Praksh Rai cleared his debt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X