For Quick Alerts
  ALLOW NOTIFICATIONS  
  For Daily Alerts

  'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾಗೆ ನಾಯಕಿ ಫಿಕ್ಸ್: ಯಾರದು?

  |

  ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ನಿರ್ದೇಶನ ಮಾಡಿ ಕನ್ನಡಿಗರ ಗಮನ ಸೆಳೆದಿದ್ದ ನಿರ್ದೇಶಕ ಗುರುದತ್ ಗಾಣಿಗ, ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಗುರುದತ್ ನಾಯಕಿಯ ಆಯ್ಕೆಯಲ್ಲಿದ್ದರು.

  ಇದೀಗ ಗುರುದತ್ ಹೊಸ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ಅಂದಹಾಗೆ ಗುರುದತ್ ನಿರ್ದೇಶನದ ಎರಡನೇ ಸಿನಿಮಾಗೆ ನಾಯಕನಾಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಡೈನಾಮಿಕ್ ಪ್ರಿನ್ಸ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿರುವುದು ಖಚಿತವಾಗಿದೆ.

  'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾ ಅನೌನ್ಸ್; ನಾಯಕ ಯಾರು?'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾ ಅನೌನ್ಸ್; ನಾಯಕ ಯಾರು?

  ಕನ್ನಡದ ನಾಯಕಿಯೇ ಬೇಕು ಎಂದು ಹುಡುಕುತ್ತಿದ್ದ ಗುರುದತ್ ಮತ್ತು ತಂಡ, ಆಶಿಕಾ ಅಥವಾ ಅದಿತಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ನಿರ್ಧಾರ ಮಾಡಿತ್ತು. ಫೈನಲಿ ಅದಿತಿ ಆಯ್ಕೆಯಾಗಿದ್ದಾರೆ. ಅದಿತಿ ಬಳಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಇದೀಗ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

  ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿದೆ. ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ವಿಶೇಷ ಅಂದ್ರೆ ಪ್ರಜ್ವಲ್ ತಂದೆ ಹಿರಿಯ ನಟ ದೇವರಾಜ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಲ್ಲಿ ನಟಿಸಲಿದ್ದಾರೆ. ಆದ್ರೆ, ಯಾವ ಪಾತ್ರ ಎನ್ನುವುದು ಗೌಪ್ಯವಾಗಿ ಉಳಿಸಲಾಗಿದೆ.

  Paaru ಸೀರಿಯಲ್‌ ಬಿಟ್ಟು ಕೊಡಗಿನಲ್ಲಿ ಮಸ್ತಿ ಮಾಡ್ತಿರೋ ನಟಿ | Filmibeat Kannada

  ಅದಿತಿ ಪ್ರಭುದೇವ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ತ್ರಿಬಲ್ ರೈಡಿಂಗ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, ಗಜಾನನ ಗ್ಯಾಂಗ್, ಓಲ್ಡ್‌ಮಂಕ್, ದಿಲ್ಮಾರ್, ತೋತಾಪುರಿ, ಆನ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬ್ಯುಸಿ ಇರುವ ನಟಿಯರಲ್ಲಿ ಅದಿತಿ ಕೂಡ ಒಬ್ಬರು. ಇದೀಗ ಪ್ರಜ್ವಲ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುದ್ದು, ಇಬ್ಬರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Actress Aditi Prabhudeva is playing leading lady opposite Prajwal Devaraj in his next Action Thriller.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X