»   » 'ವಿರಾಟ್' ದರ್ಶನಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು ಗುರು

'ವಿರಾಟ್' ದರ್ಶನಕ್ಕೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು ಗುರು

Posted By:
Subscribe to Filmibeat Kannada

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ 'ವಿರಾಟ್' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಶುಕ್ರವಾರ (ಜನವರಿ 29) ದಂದು ಇಡೀ ರಾಜ್ಯಾದ್ಯಂತ ದರ್ಶನ್ ಅವರ 'ವಿರಾಟ್' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

ಅಂದಹಾಗೆ ಸಿನಿಮಾ ಬಿಡುಗಡೆಗೆ ಇನ್ನೂ 5 ದಿನಗಳ ಕಾಲಾವಕಾಶ ಇರುವಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ನಮ್ಮ ರಾಜಧಾನಿ ಬೆಂಗಳೂರಿನ ಕೆಲವಾರು ಥಿಯೇಟರ್ ಗಳು ಈಗಾಗಲೇ 'ವಿರಾಟ್' ಸಿನಿಮಾದ ಟಿಕೆಟ್ ಹಂಚಲು ಶುರು ಮಾಡಿದೆ.[ಜನವರಿ 29 ರಂದು 'ವಿರಾಟ್' ದರ್ಶನ ಗ್ಯಾರೆಂಟಿ!]


Advance Booking Starts for Darshan's Kannada Movie 'Viraat'

ಬೆಂಗಳೂರು ತಾವರೆಕೆರೆಯ ಬಾಲಾಜಿ ಚಿತ್ರಮಂದಿರ ಬೆಳ್ಳಂಬೆಳಗ್ಗೆ 6 ಘಂಟೆಯ ಪ್ರದರ್ಶನದ ಟಿಕೆಟ್ ಹಂಚುತ್ತಿದೆ. ಸುಮಾರು 2 ವರ್ಷಗಳ ಹಿಂದೆ ಸೆಟ್ಟೇರಿರುವ 'ವಿರಾಟ್' ಸಿನಿಮಾ ಕೊನೆಗೂ ಈ ವಾರ ಬಿಡುಗಡೆ ಆಗುತ್ತಿರುವುದರಿಂದ ಅಭಿಮಾನಿಗಳು ಮುಗಿ ಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.


ಇನ್ನು ದರ್ಶನ್ ಅವರ ಅಭಿಮಾನಿಗಳಿಗಂತೂ 'ವಿರಾಟ್' ಸಿನಿಮಾದ ಬಗ್ಗೆ ಭಾರಿ ಕುತೂಹಲ ಇದೆ.[ಅಬ್ಬಾ! ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ದೇ ಬಿಟ್ರು]


Advance Booking Starts for Darshan's Kannada Movie 'Viraat'

ಈಗಾಗಲೇ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು, ಮಾರ್ಕೆಟ್ ನಲ್ಲಿ ಸಖತ್ತಾಗಿ ಮುನ್ನುಗ್ಗುತ್ತಿವೆ. ಮಾತ್ರವಲ್ಲದೇ ಚಿತ್ರದ ಆಡಿಯೋ ಹಕ್ಕು ಕೂಡ ಸುಮಾರು 36 ಲಕ್ಷಕ್ಕೆ ಸೇಲ್ ಆಗಿ ದಾಖಲೆ ಸೃಷ್ಟಿಸಿದೆ.


ನಿರ್ದೇಶಕ ಹೆಚ್ ವಾಸು ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ದರ್ಶನ್ ಅವರು ನಟಿ ಇಶಾ ಚಾವ್ಲಾ, ನಟಿ ಚೈತ್ರ ಚಂದ್ರನಾಥ್ ಮತ್ತು ವಿದಿಶಾ ಶ್ರೀವಾತ್ಸವ್ ಎಂಬ ಮೂವರು ನಾಯಕಿಯರೊಂದಿಗೆ ಡ್ಯುಯೆಟ್ ಹಾಡುತ್ತಿದ್ದಾರೆ. ಪರರಾಜ್ಯದ ನಿರ್ಮಾಪಕ ಸಿ.ಕಲ್ಯಾಣ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

English summary
Nearly a week before release, the advance bookings for Darshan's new film Viraat has started in a few theatres including in Bengaluru. The Balaji theatre in Tavarekere has started issuing tickets for a 6 am show. The movie is directed by H Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada