Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?
ಮೆಗಾ ಬ್ಲಾಕ್‌ಬಸ್ಟರ್ 'ಕೆಜಿಎಫ್ 2' ಸಿನಿಮಾದ ಬಳಿಕ ಯಶ್ ಸಿನಿಮಾ ಬಗ್ಗೆ ಎಲ್ಲರ ಗಮನವಿತ್ತು. ವಿಶ್ವದಲ್ಲೆಡೆ ಸದ್ದು ಮಾಡಿ ಬಂದ ರಾಕಿ ಭಾಯ್ 19ನೇ ಸಿನಿಮಾ ಬಗ್ಗೆ ಸಿನಿಪ್ರಿಯರು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುತ್ತಿದ್ದಾರೆ. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಇಷ್ಟು ದಿನ ಯಶ್ 19ನೇ ಸಿನಿಮಾವನ್ನು 'ಮಫ್ತಿ' ಚಿತ್ರದ ನಿರ್ದೇಶಕ ನರ್ತನ್ ನಿರ್ದೇಶನ ಮಾಡುತ್ತಾರೆ ಎಂದೇ ನಂಬಲಾಗಿತ್ತು. ಆದ್ರೀಗ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಪಕ್ಕಾ ಮಾಹಿತಿ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.
ಟ್ವಿಟರ್ನಲ್ಲಿ
'ಮಫ್ತಿ'
ನಿರ್ದೇಶಕನ
ನಕಲಿ
ಖಾತೆ:
ಯಶ್
19ನೇ
ಚಿತ್ರದ
ಬಗ್ಗೆ
ನರ್ತನ್
ಹೇಳಿದ್ದೇನು?
'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಬ್ಲಾಕ್ ಬಸ್ಟರ್ ಎಂದು ಸಾಬೀತಾಗಿತ್ತು. ಆ ಬಳಿಕ ಯಶ್ ಹಾಗೂ ನರ್ತನ್ ಇಬ್ಬರೂ ಹೊಸ ತೀರ್ಮಾನಕ್ಕೆ ಬಂದಿದ್ದಾರೆ. ನರ್ತನ್ ನಿರ್ದೇಶಿಸಬೇಕಿದ್ದ ಸಿನಿಮಾವನ್ನು ಪೋಸ್ಟ್‌ಪೋನ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಎಕ್ಸ್‌ಕ್ಲೂಸೀವ್ ಮಾಹಿತಿ ಲಭ್ಯವಾಗಿದೆ.

ನರ್ತನ್ ಸಿನಿಮಾ ಮುಂದೂಡಿದ ಯಶ್
'ಕೆಜಿಎಫ್ 2' ಸಿನಿಮಾ ಚಿತ್ರೀಕರಣದ ಸಮಯದಿಂದಲೇ ಯಶ್ 19ನೇ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿತ್ತು. ಸುಮಾರು ಮೂರು ವರ್ಷಗಳ ಕಾಲ 'ಮಫ್ತಿ' ಚಿತ್ರದ ನಿರ್ದೇಶಕ ನರ್ತನ್ ಕಥೆ ಹೆಣೆಯುತ್ತಿದ್ದರು. 'ಕೆಜಿಎಫ್ 2' ಬಿಡುಗಡೆಯಾಗುತ್ತಿದ್ದಂತೆ ನರ್ತನ್ ಸಿನಿಮಾ ಟೇಕಾಫ್ ಆಗುತ್ತೆ ಎಂದೇ ಗುಲ್ಲೆದ್ದಿತ್ತು. ಇನ್ನೇನು ಅನೌನ್ಸ್ ಆಗೇ ಬಿಡುತ್ತೆ ಅನ್ನುವಾಗಲೇ ಯಶ್ ಹಾಗೂ ನರ್ತನ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ ಸಿನಿಮಾ ಪೋಸ್ಟ್‌ಪೋನ್ ಆಗಿದೆ.
ಟೆನ್ನಿಸ್
ಆಟಗಾರ
ನೊವಾಕ್
ಜೊಕೊವಿಕ್ಗೆ
ಶುಭ
ಕೋರಲು
'ಕೆಜಿಎಫ್
2'
ಡೈಲಾಗ್
ಬಳಸಿದ
ವಿಂಬಲ್ಡನ್!

ಗ್ಯಾಪ್‌ನಲ್ಲಿ ಒಂದೊಂದು ಸಿನಿಮಾ
'ಕೆಜಿಎಫ್ 2' ಸಿನಿಮಾ ಬಳಿಕ ಯಶ್ 19ನೇ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಅಂದುಕೊಂಡಿದ್ದಕ್ಕಿಂತ ತಡವಾಗಿದ್ದು ನಿಜ. ಆದರೂ, ಈ ಸಿನಿಮಾವನ್ನು 'ಮಫ್ತಿ' ನಿರ್ದೇಶಕ ನರ್ತನ್ ಅವರೇ ನಿರ್ದೇಶಿಸುತ್ತಾರೆ ಎನ್ನಲಾಗಿತ್ತು. ಆದ್ರೀಗ ಇಬ್ಬರೂ ಒಮ್ಮತದ ಮೇರೆಗೆ ಈ ಸಿನಿಮಾವನ್ನು ಪೋಸ್ಟ್‌ಪೋನ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈ ಮಧ್ಯೆ ಯಶ್ ಬೇರೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನೊಂದು ಕಡೆ ನರ್ತನ್ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇಬ್ಬರೂ ಒಂದೊಂದು ಸಿನಿಮಾದಲ್ಲಿ ಕೆಲಸ ಮಾಡಿದ ಬಳಿಕ ನರ್ತನ್ ಹಾಗೂ ಯಶ್ ಮತ್ತೆ ಈ ಪ್ರಾಜೆಕ್ಟ್‌ಗೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.

ಯಾರೊಂದಿಗೆ ಯಶ್ ಮುಂದಿನ ಸಿನಿಮಾ?
ಯಶ್ 19ನೇ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿಲ್ಲ ಎನ್ನುವ ಖಚಿತ ಮಾಹಿತಿ ಫಿಲ್ಮಿಬೀಟ್‌ಗೆ ಸಿಕ್ಕಿದೆ. ಈ ಬೆನ್ನಲ್ಲೇ ಯಶ್ 19ನೇ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು? ಎನ್ನುವ ಮತ್ತೊಂದು ಪ್ರಶ್ನೆ ಎದ್ದಿದೆ. 'ಕೆಜಿಎಫ್ 2' ಬಳಿಕ ಯಶ್ ಹಿಂದೆ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ದೊಡ್ಡ ಪ್ರಾಜೆಕ್ಟ್‌ಗಳು ರಾಕಿ ಭಾಯ್ ಅನ್ನು ಹುಡುಕಿಕೊಂಡು ಬರುತ್ತಿವೆ. ಕೆಲವು ದಿನಗಳ ಹಿಂದೆ 'ಎಂದಿರನ್' ಖ್ಯಾತಿಯ ಶಂಕರ್ ರಾಕಿ ಭಾಯ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಗುಲ್ಲೆದ್ದಿತ್ತು. ನರ್ತನ್ ಸಿನಿಮಾ ಪೋಸ್ಟ್‌ಪೋನ್ ಆದ ಬಳಿಕ ಶಂಕರ್ ಕಡೆ ಬೊಟ್ಟು ಮಾಡುತ್ತಿದ್ದಾರೆ.

'ಕೆಜಿಎಫ್ 3' ಮೇಲೆ ಒಲವು
ಇನ್ನೊಂದು ಕಡೆ ಯಶ್ 'ಕೆಜಿಎಫ್ 2' ಬಳಿಕ 'ಕೆಜಿಎಫ್ 3' ಕಡೆಗೆ ಒಲವು ತೋರಿದ್ದಾರೆ. ಈಗಿರುವ ಹೈಪ್‌ನಲ್ಲಿಯೇ 'ಕೆಜಿಎಫ್ 3'ಗೆ ಚಾಲನೆ ನೀಡಬೇಕು ಉತ್ಸಾಹದಲ್ಲಿದ್ದಾರೆ. ಹೀಗಾಗಿ 'ಕೆಜಿಎಫ್ 3' ಕಡೆಗೆ ಗಮನ ಹರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಆದರೆ, ಅಧಿಕೃತವಾಗಿ ಯಶ್ 19ನೇ ಸಿನಿಮಾ ಯಾವುದು? ಮತ್ತು ಯಾರೊಂದಿಗೆ ಅನ್ನೋದು ಇನ್ನಷ್ಟು ಗೊತ್ತಾಗಬೇಕಿದೆ. ಆದರೆ, ನರ್ತನ್ ಸಿನಿಮಾ ಅಂತೂ ಪೋಸ್ಟ್‌ಪೋನ್ ಆಗಿದ್ದು ಪಕ್ಕಾ. ಮೂಲಗಳ ಪ್ರಕಾರ, ಇನ್ನು 10 ದಿನಗಳಲ್ಲಿ ನರ್ತನ್ ಕಡೆಯಿಂದ ಹೊಸ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ.