For Quick Alerts
  ALLOW NOTIFICATIONS  
  For Daily Alerts

  4 ವರ್ಷದ ಬಳಿಕ ಮತ್ತೆ ಒಂದಾದ ಉಪೇಂದ್ರ - ಗುರುಕಿರಣ್

  |

  ನಟ ಉಪೇಂದ್ರ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಕನ್ನಡದ ಬೆಸ್ಟ್ ಜೋಡಿಗಳಲ್ಲಿ ಒಂದು. 'ಮಾರಿಕಣ್ಣು ಹೋರಿಮ್ಯಾಗೆ..' ಅಂತ ಶುರುವಾದ ಈ ಜೋಡಿಯ ಸಂಗೀತ ಯಾತ್ರೆ ಇಂದಿಗೂ ಮುಂದುವರೆದಿದೆ.

  ಆದರೆ, ಇತ್ತೀಚಿಗೆ ಕೆಲವು ವರ್ಷಗಳಿಂದ ಉಪೇಂದ್ರ ಸಿನಿಮಾಗಳಿಗೆ ಗುರುಕಿರಣ್ ರಿಗೆ ಸಂಗೀತ ನೀಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈಗ 4 ವರ್ಷದ ಬಳಿಕ ಮತ್ತೆ ರಿಯಲ್ ಸ್ಟಾರ್ ಸಿನಿಮಾಗೆ ಗುರು ಮ್ಯೂಸಿಕ್ ನೀಡುತ್ತಿದ್ದಾರೆ.

  ರಿಯಲ್ ಸ್ಟಾರ್ 'ಬುದ್ಧಿವಂತ 2' ಫಸ್ಟ್ ಲುಕ್ ರಿಲೀಸ್ರಿಯಲ್ ಸ್ಟಾರ್ 'ಬುದ್ಧಿವಂತ 2' ಫಸ್ಟ್ ಲುಕ್ ರಿಲೀಸ್

  'ಬುದ್ಧಿವಂತ 2' ಸಿನಿಮಾದ ಮುಹೂರ್ತ ನಿನ್ನೆ (ಮೇ 24) ನೆರವೇರಿದೆ. ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ಮೌರ್ಯ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಬರೆಯಲಿದ್ದಾರೆ.

  'ಉಪ್ಪಿ 2' ಬಳಿಕ ಉಪ್ಪಿ ಅವರ ಯಾವ ಸಿನಿಮಾಗೂ ಗುರು ಮ್ಯೂಸಿಕ್ ಮಾಡಿರಲಿಲ್ಲ. ಆದರೆ, ಈಗ ಮತ್ತೆ ಈ ಜೋಡಿ ಒಂದಾಗಿದೆ. ಈ ಕಾರಣ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

  ಅಂದಹಾಗೆ, 'ಎ', 'ಉಪೇಂದ್ರ', 'ಹಾಲಿವುಡ್', 'ಕುಟುಂಬ', ಉಪ್ಪಿ 2' ಉಪೇಂದ್ರ ಹಾಗೂ ಗುರುಕಿರಣ್ ಕಾಂಬಿನೇಶನ್ ನಲ್ಲಿ ಬಂದ ಬೆಸ್ಟ್ ಸಿನಿಮಾಗಳಾಗಿವೆ.

  English summary
  After 4 years actor Upendra and music director Gurukiran together for 'Buddhivantha 2' movie.
  Saturday, May 25, 2019, 12:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X