Just In
Don't Miss!
- News
ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Finance
ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
MP ಆದ ಸುಮಲತಾ ಅಂಬರೀಶ್ ಮುಂದಿನ ನಡೆಯೇನು?
ನಟಿ ಸುಮಲತಾ ಅಂಬರೀಶ್ ಮಂಡ್ಯ ಜನರ ಮಹಾ ಬೆಂಬಲ ಪಡೆದು ಕೊನೆಗೂ ಜಯ ಸಾಧಿಸಿದ್ದಾರೆ. ಸಾಕಷ್ಟು ಅಡೆ ತಡೆಗಳ ನಡುವೆ ಚುನಾವಣೆಯಲ್ಲಿ ಗೆದ್ದು ತೋರಿಸಿದ್ದಾರೆ. ಈ ಮೂಲಕ ಐತಿಹಾಸಿಕ ವಿಜಯ ಅವರದ್ದಾಗಿದೆ.
ಒಂದು ಕಡೆ ಚುನಾವಣೆ ಗೆದ್ದ ಖುಷಿಯಾದರೆ, ಮತ್ತೊಂದು ಕಡೆ ಅಂಬರೀಶ್ ಅವರ ಆರನೇ ತಿಂಗಳ ಪುಣ್ಯ ತಿಥಿ ಸಹ ಇಂದೇ ಇತ್ತು. ಈ ಹಿನ್ನಲೆ ಇಂದು ಕಂಠೀರವ ಸ್ಟೂಡಿಯೋದ ಅಂಬರೀಶ್ ಸಮಾಧಿಗೆ ಸುಮಲತಾ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ
ಗೆದ್ದ ಖುಷಿ ಹಾಗೂ ಮುಂದಿನ ನಡೆಯ ಬಗ್ಗೆ ಮಾತನಾಡಿದ ಸುಮಲತಾ ಮಂಡ್ಯ ಜನತೆಗೆ ಧನ್ಯವಾದ ಹೇಳುವುದರ ಜೊತೆಗೆ ಕೆಲ ವಿಚಾರಗಳನ್ನು ಹಂಚಿಕೊಂಡರು. ಮುಂದೆ ಓದಿ...

ನಿಮ್ಮ ಮುಂದಿನ ನಡೆ ಏನು?
ನಿಮ್ಮ ಮುಂದಿನ ನಡೆ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ''ಸದ್ಯ ನಾನು ನನ್ನ ಗೆಲುವಿನ ಆನಂದವನ್ನು ಅನುಭವಿಸುತ್ತಿದ್ದಾನೆ. ಹಾಗಾಗಿ ಈಗಲೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಅಂಬರೀಶ್ ಅವರ ಕನಸು ಪೂರ್ಣ ಮಾಡಬೇಕು. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಆಸೆ ಇದೆ'' ಎಂದಿದ್ದಾರೆ.

ಜನರ ಜೊತೆಗೆ ಚರ್ಚೆ ಮಾಡಬೇಕು
''ಚುನಾವಣೆಗೆ ನಿಂತಾಗಲೂ ಯಾವ ಪಕ್ಷ.. ಏನು..? ಎಂದು ಮಂಡ್ಯ ಜನತೆಯ ಜೊತೆಗೆ ಚರ್ಚೆ ಮಾಡಿದ್ದೆ, ಈಗಲೂ ನನ್ನ ಮುಂದಿನ ನಡೆ ಬಗ್ಗೆ ಅವರ ಜೊತೆಗೆ ಮಾತಾನಾಡುತ್ತೇನೆ. ನನ್ನನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಧನ್ಯವಾದಗಳು. ನಾನು ಐದು ವರ್ಷದಲ್ಲಿ ಅವರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ.'' - ಸುಮಲತಾ, ಮಂಡ್ಯ ನೂತನ ಎಮ್ ಪಿ
ಗೆಲುವಿನ ನಂತರ ಸುಮಲತಾ ಮೊದಲ ಪ್ರತಿಕ್ರಿಯೆ

ಇದು ಸ್ವಾಭಿಮಾನದ ಗೆಲುವು
''ನಾನು ಗೆಲ್ಲುವ ಆತ್ಮವಿಶ್ವಾಸ ಇತ್ತು. ಇದು ಮಂಡ್ಯ ಜನರ ಸ್ವಾಭಿಮಾನದ ಗೆಲುವು, ಮಂಡ್ಯ ಜನರು ಪ್ರೀತಿಗೆ ಮರುಳಾಗುತ್ತಾರೆ ಹೊರತೂ ಮೋಸಕ್ಕಲ್ಲ. ಈ ಚುನಾವಣೆಯಲ್ಲಿ ಅವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಸ್ವಾಭಿಮಾನ ಅಂದರೆ ಏನು ಎನ್ನುವದನ್ನು ಇಡೀ ಇಂಡಿಯಾಗೆ ಮಂಡ್ಯದ ಜನ ತೋರಿಸಿದ್ದಾರೆ.'' - ಸುಮಲತಾ, ಮಂಡ್ಯ ನೂತನ ಎಮ್ ಪಿ

ಮಂಡ್ಯದಲ್ಲಿ ಸ್ವಂತ ಮನೆ ಮಾಡುವ ಆಸೆ
''ಮಂಡ್ಯದಲ್ಲಿ ಈಗ ಒಂದು ಬಾಡಿಗೆ ಮನೆ ಇದೆ. ಆದರೆ, ಅಲ್ಲಿಯೇ ಒಂದು ಸ್ವಂತ ಮನೆ ಕಟ್ಟಿಸಬೇಕು ಎಂಬ ಆಸೆ ಇದೆ. ಅಲ್ಲಿಯೇ ಇದ್ದು, ಜನರ ಸಮಸ್ಯೆಯನ್ನು ಕೇಳಿಸಿಕೊಳ್ಳುತ್ತೇನೆ. ಮಂಡ್ಯ ಜನರ ಪ್ರೀತಿಯಲ್ಲಿ ನಾನು ಅಂಬರೀಶ್ ಅವರನ್ನು ಕಾಣುತ್ತೇನೆ.'' - ಸುಮಲತಾ, ಮಂಡ್ಯ ನೂತನ ಎಮ್ ಪಿ
ಸುಮಲತಾ ವಿಜಯ : ರಾಗಿಣಿ, ಹರಿಪ್ರಿಯಾ ಶುಭಾಶಯ

ಕಾಂಗ್ರೆಸ್ ನಾಯಕರು ನನ್ನ ಮಾತು ಕೇಳಲಿಲ್ಲ
''ನನಗೆ ಐತಿಹಾಸಿಕ ಗೆಲುವು ನೀಡಿದ್ದು, ಮಂಡ್ಯದ ಜನ. ಇಡೀ ಭಾರತದಲ್ಲಿ ಇಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿ ನಿಂತು ಕೆಲಸ ಮಾಡಿದ್ದಾರೆ. ಮೊದಲೇ ಕಾಂಗ್ರೆಸ್ ಗೆ ಟಿಕೆಟ್ ನೀಡಿ ಎಂದು ಕೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.'' - ಸುಮಲತಾ, ಮಂಡ್ಯ ನೂತನ ಎಮ್ ಪಿ

ಸದ್ಯಕ್ಕೆ ಸಿನಿಮಾಗಳಲ್ಲಿ ನಟನೆ ಮಾಡಲ್ಲ
ಸದ್ಯ ನೂತನ ಎಪಿಯಾಗಿ ಆಯ್ಕೆಯಾಗಿರುವ ಸುಮಲತಾ ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರೋ.. ಇಲ್ವೋ.. ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಮಾತನಾಡಿದ ಅವರು ಸದ್ಯಕ್ಕೆ ಸಿನಿಮಾಗಳಲ್ಲಿ ನಟನೆ ಮಾಡುವುದಿಲ್ಲ. ಮಂಡ್ಯದ ಜನ ಗೆಲ್ಲಿಸಿದ್ದಾರೆ, ಅವರಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. - ಸುಮಲತಾ, ಮಂಡ್ಯ ನೂತನ ಎಮ್ ಪಿ