For Quick Alerts
  ALLOW NOTIFICATIONS  
  For Daily Alerts

  ರಾಮ್ ಲೀಲಾ ಹಾಡಿಗೆ ಪವರ್ ಸ್ಟಾರ್ ಪವರ್ ಫುಲ್ ವಾಯ್ಸ್

  By Suneetha
  |

  ಬರೀ ಸಿಂಗರ್ ಗಳು ಮಾತ್ರವಲ್ಲದೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಸಿನಿಮಾದ ಹಾಡುಗಳಿಗೆ ಧ್ವನಿಯಾಗೋದು ಇತ್ತೀಚೆಗೆ ಒಂಥರಾ ಟ್ರೇಂಡ್ ಆದಂತಿದೆ. ಇದಕ್ಕೆ ಒಂದೊಳ್ಳೆ ನಿದರ್ಶನ ಅಂದ್ರೆ ಪುನೀತ್ ರಾಜ್ ಕುಮಾರ್, ಸುದೀಪ್, ಐಶಾನಿ ಶೆಟ್ಟಿ, ಶರಣ್, ಮುಂತಾದವರು ಹಾಡಿದ್ದಾರೆ.

  ಇದೀಗ ತೇರಿ ಬ್ಯೂಟಿಫುಲ್ ಆಂಖೇನ್, ಎಂಬ 'ರಾಮ್ ಲೀಲಾ' ಚಿತ್ರದ ಸುಂದರವಾದ ಹಾಡಿಗೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಧ್ವನಿಯಾಗಿದ್ದಾರೆ.[ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್]

  ನಟ ಚಿರಂಜೀವಿ ಸರ್ಜಾ ಹಾಗೂ ಬೇಬಿ ಡಾಲ್ ಅಮೂಲ್ಯ ಇದೇ ಮೊದಲ ಬಾರಿಗೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ತೆಲುಗಿನ 'ಲೌಕ್ಯಂ' ಚಿತ್ರದ ರಿಮೇಕ್ ಆಗಿರುವ 'ರಾಮ್ ಲೀಲಾ' ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ.

  'ರಾಮ್ ಲೀಲಾ' ಚಿತ್ರದ ಪುನೀತ್ ಹಾಡಿರುವ ತೇರಿ ಬ್ಯೂಟಿಫುಲ್ ಆಂಖೇನ್ ಹಾಡನ್ನು ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಮಾಧ್ಯಮಕ್ಕೂ ಆಮಂತ್ರಣ ನೀಡದೇ ಅನೌಪಚಾರಿಕ ಕಾರ್ಯಕ್ರಮ ಮಾಡುವ ಮೂಲಕ ಚಿತ್ರತಂಡ ರಿಲೀಸ್ ಮಾಡಿದೆ.

  ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟ ಚಿರಂಜೀವಿ ಸರ್ಜಾ ಅವರು ನಟಿಸುತ್ತಿರುವ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಧ್ವನಿಯಾಗಿದ್ದಾರೆ.

  ಚಿತ್ರತಂಡ ಸಿನಿಮಾದ 6 ಹಾಡುಗಳಲ್ಲಿ ಇದೀಗ ಒಂದು ಹಾಡನ್ನು ಅನೌಪಚಾರಿಕ ಕಾರ್ಯಕ್ರಮ ಮಾಡುವ ಮೂಲಕ ರಿಲೀಸ್ ಮಾಡಿದ್ದು, ಚಿತ್ರ ಬಿಡುಗಡೆ ಕಾಣುವುದರೊಳಗಾಗಿ ಪ್ರತಿವಾರ ಒಂದೊಂದು ಸಾಂಗ್ ಬಿಡುಗಡೆ ಮಾಡಿ ತದನಂತರ ಫಾರ್ಮಲ್ ಅಡಿಯೋ ಬಿಡುಗಡೆ ಕಾರ್ಯಕ್ರಮ ಮಾಡುವ ಪ್ಲಾನ್ ಹಾಕಿಕೊಂಡಿದೆ.['ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್]

  ಮೊನ್ನೆ ಚಿತ್ರದ ಟ್ರೈಲರ್ ಅನ್ನು ಕೂಡ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅವರಿಂದ ಇನ್ ಫಾರ್ಮಲ್ ಫಂಕ್ಷನ್ ಮಾಡುವ ಮೂಲಕ ಚಿತ್ರತಂಡ ರಿಲೀಸ್ ಮಾಡಿಸಿತ್ತು.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ 'ರಾಮ್ ಲೀಲಾ' ಚಿತ್ರದ ತೇರಿ ಬ್ಯೂಟಿಫುಲ್ ಆಂಖೇನ್ ಹಾಡು ನೋಡಲು ಈ ವಿಡಿಯೋ ನೋಡಿ..

  ಚಿತ್ರಕ್ಕೆ ವಿಜಯ್ ಕಿರಣ್ ಆಕ್ಷನ್-ಕಟ್ ಹೇಳಿದ್ದು, ಬಿಗ್ ಬಜೆಟ್ ನ ಎಂರ್ಟಟೈನರ್ ಆಗಿರುವ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ ಅವರ ಜೊತೆಗೆ ಸ್ಯಾಂಡಲ್ ವುಡ್ ನ 20-30 ನಟ-ನಟಿಯರು ನಟಿಸಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಕೆಲವು ಹಾಡಿನ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ.

  English summary
  Teri Beautiful Aanken is the song sung by Power Star Puneeth in the film Ramleela. This is the first time Puneeth as sung for Chiranjeevi Sarja. The song was official released by Dhruva Sarja on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X